ವಿಜಯ್ ಹಜಾರೆ ಟ್ರೋಫಿ: ರಾಹುಲ್ ಸ್ಫೋಟಕ ಶತಕ, ಕರ್ನಾಟಕ ಜಯಭೇರಿ

ಬೆಂಗಳೂರು, ಸೆಪ್ಟೆಂಬರ್ 29: ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಎರಡನೇ ಗೆಲುವು ದಾಖಲಿಸಿದೆ. ಬೆಂಗಳೂರಿನಲ್ಲಿ ಶನಿವಾರ (ಸೆಪ್ಟೆಂಬರ್ 28) ನಡೆದ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಕೇರಳ ವಿರುದ್ಧ 60 ರನ್ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟದಿಂದ ಕೆಎಲ್ ರಾಹುಲ್ 131 (122 ಎಸೆತ), ನಾಯಕ ಮನೀಷ್ ಪಾಂಡೆ 50 (51 ಎಸೆತ), ಪವನ್ ದೇಶಪಾಂಡೆ 17, ಶ್ರೇಯಸ್ ಗೋಪಾಲ್ 31, ಕೃಷ್ಣಪ್ಪ ಗೌತಮ್ 6, ಜಗದೀಶ ಸುಚಿತ್ 13, ಅಭಿಮನ್ಯು ಮಿಥುನ್ 12, ರೋನಿತ್ ಮೋರೆ 12 ರನ್ ಕೊಡುಗೆಯಿತ್ತರು.
ಕರ್ನಾಟಕ ತಂಡ 49.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 294 ರನ್ ಮಾಡಿತು. ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಸಂದೀಪ್ ವಾರಿಯರ್ 2, ಬಸಿಲ್ ಥಂಪಿ 3, ಕೆಎಂ ಆಸಿಫ್ 3, ವಿನೂಪ್ ಮನೋಹರನ್ 2 ವಿಕೆಟ್ ಪಡೆದು ಗಮನ ಸೆಳೆದರು.
ಗುರಿ ಬೆನ್ನತ್ತಿದ ಕೇರಳ ತಂಡ ವಿಷ್ಣು ವಿನೋದ್ 104 (123 ಎಸೆತ), ಸಂಜು ಸ್ಯಾಮ್ಸನ್ 67, ನಾಯಕ ರಾಬಿನ್ ಉತ್ತಪ್ಪ 13, ಸಚಿನ್ ಬೇಬಿ 26 ರನ್ ಸೇರ್ಪಡೆಯೊಂದಿಗೆ 46.4 ಓವರ್‌ಗೆ ಸರ್ವ ಪತನ ಕಂಡು 234 ರನ್ ಮಾಡಿತು. ಕರ್ನಾಟಕದ ಅಭಿಮನ್ಯು ಮಿಥುನ್ 2, ರೋನಿತ್ ಮೋರೆ 3, ಶ್ರೇಯಸ್ ಗೋಪಾಲ್ 1, ಪವನ್ ದೇಶಪಾಂಡೆ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications