For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ: ಗುಡುಗಿದ ರಾಹುಲ್-ಪಡಿಕ್ಕಲ್, ಕರ್ನಾಟಕ ಫೈನಲ್‌ಗೆ ಲಗ್ಗೆ

Vijay Hazare Trophy 2019: Karnataka won by 9 wickets

ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 23) ನಡೆದ ವಿಜಯ್ ಹಜಾರೆ ಟ್ರೋಫಿ 2019 ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಗೆಲುವನ್ನಾಚರಿಸಿದೆ. ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಚತುರ ಬ್ಯಾಟಿಂಗ್ ನೆರವಿನೊಂದಿಗೆ ಛತ್ತೀಸ್‌ಗಢ ವಿರುದ್ಧ 9 ವಿಕೆಟ್‌ ಸುಲಭ ಜಯ ದಾಖಲಿಸಿರುವ ರಾಜ್ಯ ತಂಡ ಫೈನಲ್‌ಗೆ ಪ್ರವೇಶಿಸಿದೆ.

ಛತ್ತೀಸ್‌ಗಢ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಆರ್‌ ಕೌಶಿಕ್ 46ಕ್ಕೆ 4, ಅಭಿಮನ್ಯು ಮಿಥುನ್ 2, ಕೃಷ್ಣಪ್ಪ ಗೌತಮ್ 2, ಪ್ರವೀಣ್ ದೂಬೆ 2 ವಿಕೆಟ್‌ ಕೆಡವಿ ಎದುರಾಳಿಯನ್ನು ಕಾಡಿದರೆ, ರಾಹುಲ್, ಪಡಿಕ್ಕಲ್ ಅರ್ಧ ಶತಕ ಬಾರಿಸಿ ಬ್ಯಾಟಿಂಗ್‌ನಲ್ಲಿ ತಂಡ ಬೆಂಬಲಿಸಿದರು. ಫೈನಲ್‌ನಲ್ಲಿ ತಮಿಳುನಾಡು ಮತ್ತು ಕರ್ನಾಟಕ ತಂಡಗಳು ಸ್ಪರ್ಧಿಸಲಿವೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಛತ್ತೀಸ್‌ಗಢದಿಂದ ಅಶುತೋಷ್ ಸಿಂಗ್ 20, ಹರ್ಪ್ರೀತ್ ಸಿಂಗ್ 25, ಅಮನ್‌ದೀಪ್ ಖಾರೆ 78, ಅಜಯ್ ಜಾಧವ್ ಮಂಡಲ್ 26, ಸುಮಿತ್ ರೂಯ್ಕರ್ 40 ರನ್‌‌ನೊಂದಿಗೆ 49.4ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 223 ರನ್ ಮಾಡಿತು.

ಗುರಿ ಬೆಂಬತ್ತಿದ ಕರ್ನಾಟಕಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಭರ್ಜರಿ ಬೆಂಬಲ ಲಭಿಸಿತು. ಕೆಎಲ್ ರಾಹುಲ್ 88, ದೇವದತ್ ಪಡಿಕ್ಕಲ್ 92, ಮಯಾಂಕ್ ಅಗರ್ವಾಲ್ 47 ರನ್‌ ಗಳಿಸಿದ್ದರಿಂದ ರಾಜ್ಯ ತಂಡ 40 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 229 ರನ್ ಪೇರಿಸಿ ಗೆಲುವಿನ ಕೇಕೆ ಹಾಕಿತು. ಅಕ್ಟೋಬರ್ 25ರಂದು 9 amಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಫೈನಲ್ ನಡೆಯಲಿದೆ.

Story first published: Wednesday, October 23, 2019, 17:49 [IST]
Other articles published on Oct 23, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+