ಕೆಎಲ್ ರಾಹುಲ್ ಅರ್ಧಶತಕ, ಪುದುಚೇರಿ ಸೋಲಿಸಿ ಸೆಮೀಸ್ ತಲುಪಿದ ಕರ್ನಾಟಕ

ಬೆಂಗಳೂರು, ಅಕ್ಟೋಬರ್ 20: ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪುದುಚೇರಿಯನ್ನು ಸುಲಭವಾಗಿ ಸೋಲಿಸಿದೆ. ಆರ್ ವಿನಯ್ ಕುಮಾರ್ ನೇತೃತ್ವದ ಪುದುಚೇರಿ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಕರ್ನಾಟಕ ತಂಡವು ಸೆಮಿಫೈನಲ್ ತಲುಪಿದೆ.
ನಾಯಕ ಮನೀಷ್ ಪಂಡೆ ಅವರು ಸೊಗಸಾದ ಸಿಕ್ಸ್ ಸಿಡಿಸಿ ಪಂದ್ಯದ ಗೆಲುವಿನ ರನ್ ಗಳಿಸಿದರು. 2058ರನ್ ಗುರಿ ಬೆನ್ನು ಹತ್ತಿದ ಕರ್ನಾಟಕಕ್ಕೆ ಕೆಎಲ್ ರಾಹುಲ್, ದೇವದತ್ ಪಡಿಕಲ್ ಹಾಗೂ ರೋಹನ್ ಕದಮ್ ಅವರ ಅರ್ಧ ಶತಕ ಆಸರೆಯಾಯಿತು. ರೋಹನ್ ಕದಮ್ ತಮ್ಮ ಮೊದಲ ಲಿಸ್ಟ್-ಎ ಅರ್ಧಶತಕವನ್ನು ಪೂರೈಸಿದರು. ಕೆ.ಎಲ್ ರಾಹುಲ್ 90 ರನ್ ಗಳಿಸಿ ಔಟ್ ಆದರು.
27 ವರ್ಷ ವಯಸ್ಸಿನ ಕೆಎಲ್ ರಾಹುಲ್ ಅವರು 73 ಲಿಸ್ಟ್ ಎ ಪಂದ್ಯಗಳಲ್ಲಿ 38.81ರನ್ ಸರಾಸರಿಯಂತೆ 2484ರನ್ ಗಳಿಸಿದ್ದಾರೆ. 14 ಅರ್ಧಶತಕ, 6 ಶತಕ ಇದರಲ್ಲಿದ್ದು, 131 ವೈಯಕ್ತಿಕ ಗರಿಷ್ಠ ಮೊತ್ತ.

ಸಂಕ್ಷಿಪ್ತ ಸ್ಕೋರ್ ಕಾರ್ಡ್
ಕರ್ನಾಟಕ : 213/2, 41 ಓವರ್ಸ್
* ಕೆಎಲ್ ರಾಹುಲ್ 90ರನ್ (112 ಎಸೆತ, 8 ಬೌಂಡರಿ, 1ಸಿಕ್ಸರ್)
* ದೇವದತ್ ಪಡಿಕ್ಕಲ್ 50ರನ್ (54 ಎಸೆತ, 5 ಬೌಂಡರಿ, 1ಸಿಕ್ಸರ್)
* ರೋಹನ್ ಕದಂ 50ರನ್ (68 ಎಸೆತ, 3ಬೌಂಡರಿ)
* ಸಾಗರ್ ಉದೇಶಿ 2 ವಿಕೆಟ್.
ಪಾಂಡಿಚೇರಿ 207/9, 50 ಓವರ್ಸ್
* ಸಾಗರ್ ತ್ರಿವೇದಿ 50 ರನ್(60 ಎಸೆತ, 5ಬೌಂಡರಿ, 2 ಸಿಕ್ಸರ್)
* ವಿಘ್ನೇಶ್ವರನ್ ಮಾರಿಮುತ್ತು 58ರನ್ ಅಜೇಯ(98 ಎಸೆತ, 3 ಬೌಂಡರಿ, 2 ಸಿಕ್ಸರ್)
* ಫಾಬಿದ್ ಅಹ್ಮದ್ 37ರನ್ (40ಎಸೆತ, 2ಸಿಕ್ಸರ್)
* ಪ್ರವೀಣ್ ದುಬೇ 44ಕ್ಕೆ3, ಕೌಶಿಕ್ ವಾಸುಕಿ 33ಕ್ಕೆ2, ಮಿಥುನ್ 35ಕ್ಕೆ2
ಇನ್ನೊಂದು ಪಂದ್ಯದಲ್ಲಿ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ದೆಹಲಿ ತಂಡ 49 ಓವರ್ ಗಳಲ್ಲಿ 223ರನ್ ಗಳಿಸಿತ್ತು. ಗುಜರಾತ್ ತಂಡ 37.5 ಓವರ್ ಗಳಲ್ಲಿ 225/4 ಸ್ಕೋರ್ ಮಾಡಿ 6 ವಿಕೆಟ್ ಗಳಿಂದ ಗೆಲುವು ದಾಖಲಿಸಿ, ಸೆಮಿಫೈನಲ್ ತಲುಪಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications