ಸಮರ್ಥ್, ಪಡಿಕ್ಕಲ್ ಆಕರ್ಷಕ ಶತಕ: ಕೇರಳಕ್ಕೆ ಸೋಲುಣಿಸಿದ ಕರ್ನಾಟಕ

ನವದೆಹಲಿ: ದೆಹಲಿಯ ಪಾಲಂ ಎ ಸ್ಟೇಡಿಯಂನಲ್ಲಿ ಸೋಮವಾರ (ಮಾರ್ಚ್ 8) ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕೇರಳ ವಿರುದ್ಧ ಕರ್ನಾಟಕ ತಂಡ ಭರ್ಜರಿ 80 ರನ್‌ಗಳ ಗೆಲುವು ಕಂಡಿದೆ. ದೇವದತ್ ಪಡಿಕ್ಕಲ್, ನಾಯಕ ಸಮರ್ಥ್ ಆರ್ ಶತಕ, ರೋನಿತ್ ಮೋರೆ ಮಾರಕ ಬೌಲಿಂಗ್‌ನೊಂದಿಗೆ ಕರ್ನಾಟಕ ತಂಡ ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ, ನಾಯಕ ರವಿಕುಮಾರ್ ಸಮರ್ಥ್ 192 (158 ಎಸೆತ), ದೇವದತ್ ಪಡಿಕ್ಕಲ್ 101, ಮನೀಶ್ ಪಾಂಡೆ ಅಜೇಯ 34, ಕೆ ಸಿದ್ಧಾರ್ಥ್ 4 ರನ್ ಸೇರ್ಪಡೆಯೊಂದಿಗೆ 50 ಓವರ್‌ಗೆ 3 ವಿಕೆಟ್ ಕಳೆದು 338 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಕೇರಳದಿಂದ, ವಿಷ್ಣು ವಿನೋದ್ 28, ವತ್ಸಲ್ ಗೋವಿಂದ್ 92, ಸಚಿನ್ ಬೇಬಿ 27, ಮೊಹಮ್ಮದ್ ಅಜರುದ್ದೀನ್ 52, ಜಲಜ್ ಸಕ್ಸೇನ 24, ಎನ್‌ಪಿ ಬಸಿಲ್ 10 ರನ್ ಕೊಡುಗೆಯಿತ್ತರು. ಕೇರಳ 43.4 ಓವರ್‌ಗೆ 10 ವಿಕೆಟ್ ಕಳೆದು 258 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಕೇರಳದ ಎನ್‌ಪಿ ಬಸಿಲ್ ಮೂರೂ ವಿಕೆಟ್ ಪಡೆದಿದ್ದು ವಿಶೇಷವೆನಿಸಿತು. ಕೇರಳ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ರೋನಿತ್ ಮೋರೆ 9 ಓವರ್ ಎಸೆದು 36 ರನ್ ನೀಡಿ 5 ವಿಕೆಟ್ ಪಡೆದು ಮೈಲಿಗಲ್ಲು ಸ್ಥಾಪಿಸಿದರು. ಇನ್ನು ಪ್ರಸಿದ್ಧ್ ಕೃಷ್ಣ 1, ಶ್ರೇಯಸ್ ಗೋಪಾಲ್ 2, ಕೃಷ್ಣಪ್ಪ ಗೌತಮ್ 2 ವಿಕೆಟ್‌ನೊಂದಿಗೆ ಮಿನುಗಿದರು. ರವಿಕುಮಾರ್ ಸಮರ್ಥ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications