ವಿಜಯ್ ಹಜಾರೆ 2021: ಉತ್ತರಪ್ರದೇಶ ವಿರುದ್ಧ ಕರ್ನಾಟಕಕ್ಕೆ ಸೋಲು

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ (ಫೆಬ್ರವರಿ 20) ನಡೆದ ವಿಜಯ್ ಹಜಾರೆ ಟ್ರೋಫಿ ಎಲೈಟ್ ಗ್ರೂಪ್ ಸಿ, ರೌಂಡ್ 1 ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಆತಿಥೇಯ ಕರ್ನಾಟಕವನ್ನು ರೋಚಕ 9 ರನ್‌ನಿಂದ (ವಿಜೆಡಿ ನಿಯಮದ ಪ್ರಕಾರ) ಸೋಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ, ದೇವದತ್ ಪಡಿಕ್ಕಲ್ 52, ಕೆ ಸಿದ್ಧಾರ್ಥ್ 38, ಕರುಣ್ ನಾಯರ್ 33, ಅನಿರುದ್ಧ್ ಜೋಶಿ 68, ಶರತ್ ಬಿಆರ್ 14, ಜಗದೀಶ್ ಸುಚಿತ್ 12, ಅಭಿಮನ್ಯು ಮಿಥುನ್ 17 ರನ್‌ನೊಂದಿಗೆ 50 ಓವರ್‌ಗೆ 8 ವಿಕೆಟ್ ಕಳೆದು 246 ರನ್ ಗಳಿಸಿತು.
ಉತ್ತರಪ್ರದೇಶ ಇನ್ನಿಂಗ್ಸ್‌ನಲ್ಲಿ ಮಳೆ ಸುರಿದಿದ್ದರಿಂದ ಯುಪಿಗೆ 45.2 ಓವರ್‌ಗೆ 207 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ಉತ್ತರ ಪ್ರದೇಶ, ಅಭಿಷೇಕ್ ಗೋಸ್ವಾಮಿ 54, ಕರಣ್ ಶರ್ಮಾ 40, ಅಕ್ಷ್‌ದೀಪ್‌ನಾಥ್ 15, ರಿಂಕು ಸಿಂಗ್ ಅಜೇಯ 62, ಉಪೇಂದ್ರ ಯಾದವ್ ಅಜೇಯ 26 ರನ್‌ನೊಂದಿಗೆ 45.2 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 215 ರನ್ ಗಳಿಸಿತು.
ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಉತ್ತರಪ್ರದೇಶದ ಭುವನೇಶ್ವರ್ ಕುಮಾರ್ 1, ಮೋಹ್ಸಿನ್ ಖಾನ್ 2, ಕಾರ್ತಿಕ್ ತ್ಯಾಗಿ 1, ಶಿವಂ ಶರ್ಮಾ 3 ವಿಕೆಟ್ ಪಡೆದರೆ, ಉತ್ತರ ಪ್ರದೇಶದ ಇನ್ನಿಂಗ್ಸ್‌ನಲ್ಲಿ ಜಗದೀಶ ಸುಚಿತ್, ಶ್ರೇಯಸ್ ಗೋಪಾಲ್ ಮತ್ತು ಕರುಣ್ ನಾಯರ್ 1 ವಿಕೆಟ್‌ನಿಂದ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications