ವಿಜಯ್ ಹಜಾರೆ: ಸೌರಾಷ್ಟ್ರ ತಂಡಕ್ಕೆ ಜಯದೇವ್ ಉನಾದ್ಕತ್ ನಾಯಕ

ರಾಜ್‌ಕೋಟ್: ಮುಂಬರಲಿರುವ ವಿಜಯ್ ಹಜಾರೆ 2021 ಏಕದಿನ ಟೂರ್ನಿಯಲ್ಲಿ ಬೌಲರ್ ಜಯದೇವ್ ಉನಾದ್ಕತ್ ಅವರು ಸೌರಾಷ್ಟ್ರ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ. 20 ಮಂದಿಯ ಸೌರಾಷ್ಟ್ರ ತಂಡಕ್ಕೆ ಎಡಗೈ ಮಧ್ಯಮ ವೇಗಿ ಉನಾದ್ಕತ್ ನಾಯಕನಾಗಿರಲಿದ್ದಾರೆ.
2021ರ ವಿಜಯ್ ಹಜಾರೆ ಟೂರ್ನಿ ಫೆಬ್ರವರಿ 20ರಿಂದ ಆರಂಭಗೊಳ್ಳಲಿದೆ. ಜಯದೇವ್ ಉನಾದ್ಕತ್ ಮುನ್ನಡೆಸುತ್ತಿರುವ ಸೌರಾಷ್ಟ್ರ ತಂಡದಲ್ಲಿ ಮಧ್ಯಮ ವೇಗಿ ಚೇತನ್ ಸಕಾರಿಯಾ, ಸ್ಪಿನ್ನರ್ ಧರ್ಮೇಂದ್ರ ಸಿಂಹ ಜಡೇಜಾ ಕೂಡ ಇದ್ದಾರೆ. ಅಂದ್ಹಾಗೆ ಉನಾದ್ಕತ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ಸೌರಾಷ್ಟ್ರ ತಂಡದಲ್ಲಿ ಬ್ಯಾಟ್ಸ್‌ಮನ್ ಅರ್ಪಿತ್ ವಾಸವಾಡ, ಚಿರಾಗ್ ಜಾನಿ, ಅವಿ ಬರೋತ್, ಪ್ರೇರಕ್ ಮಂಕಡ್, ವಿಶ್ವರಾಜ್‌ಸಿಂಹ ಜಡೇಜಾ ಕೂಡ ಇರಲಿದ್ದಾರೆ. ಫೆಬ್ರವರಿ 20ರಿಂದ ಮಾರ್ಚ್ 14ರ ವರೆಗೆ ನಡೆಯಲಿರುವ ವಿಜಯ್ ಹಜಾರೆ ಏಕದಿನ ಟೂರ್ನಿಯ ತಾಣಗಳು ಇನ್ನೂ ಪ್ರಕಟವಾಗಿಲ್ಲ.
ವಿಜಯ್ ಹಜಾರೆಗೆ ಸೌರಾಷ್ಟ್ರ ತಂಡ
ಜಯದೇವ್ ಉನಾದ್ಕತ್ (ನಾಯಕ), ಅವಿ ಬರೋತ್, ಚಿರಾಗ್ ಜಾನಿ, ಧರ್ಮೇಂದ್ರಸಿಂಹ ಜಡೇಜಾ, ಜಯ್ ಚೌಹಾಣ್, ಪಾರ್ತ್ ಭಟ್, ಅಗ್ನೀವೇಶ್ ಅಯಾಚಿ, ಸ್ನೆಲ್ ಪಟೇಲ್, ಕಿಶನ್ ಪರ್ಮಾರ್, ಹಿಮಾಲಯ ಬರಾಡ್, ಕುಶಾಂಗ್ ಪಟೇಲ್, ಪಾರ್ತ್ ಚೌಹಾಣ್, ದೇವಾಂಗ್ ವಾಸವಾಡ, ಕಮಲೇಶ್ ಮಕ್ವಾನಾ, ವಿಶ್ವರಾಜಸಿಂಹ ಜಡೇಜಾ, ಚೇತನ್ ಸಕಾರಿಯಾ, ಪ್ರೇರಕ್ ಮಂಕಡ್, ದಿವ್ಯಾರಾಜ್‌ಸಿಂಗ್ ಚೌಹಾಣ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications