ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ vs ಕೇರಳ, ಕ್ವಾರ್ಟರ್ ಫೈನಲ್

ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಕರ್ನಾಟಕ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಕೇರಳ ಕರ್ನಾಟಕ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಈ ನಿರ್ಣಾಯಕ ಹೋರಾಟದಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೇರಲು ಎರಡೂ ತಂಡಗಳು ಸಜ್ಜಾಗಿದೆ. ಲೀಗ್ ಹಂತದಲ್ಲಿ ಎರಡೂ ತಂಡಗಳು ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದವು.
ಕರ್ನಾಟಕ ತಂಡದ ಪರವಾಗಿ ಈ ನಿರ್ಣಾಯಕ ಹೋರಾಟದಲ್ಲಿ ಅನುಭವ ಆಟಗಾರ ಮನೀಶ್ ಪಾಂಡೆ ಹಾಗೂ ಕೃಷ್ಣಪ್ಪ ಗೌತಮ್ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಲೀಗ್ ಹಂತಕ್ಕಿಂತಲೂ ಕರ್ನಾಟಕ ಮತ್ತಷ್ಟು ಬಲಿಷ್ಠವಾಗಿ ಈ ಕದನದಲ್ಲಿ ಕಾಣಿಸಿಕೊಳ್ಳಲಿದೆ.
ಕರ್ನಾಟಕ ತಂಡದ ಆರಂಭಿಕ ಆಟಗಾರರಿಬ್ಬರೂ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ಹೀಗಾಗಿ ಇಂದಿನ ಪಂದ್ದ ಕೇರಳ ತಂಡದ ಪರವಾಗಿ ಬಸಿಲ್ ತಂಪಿ ಆಡುವ ಬಳಗಕ್ಕೆ ಸೇರಿಕೊಂಡಿದ್ದಾರೆ.
ಕರ್ನಾಟಕ ಆಡುವ ಬಳಗ: ರವಿಕುಮಾರ್ ಸಮರ್ತ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಕೃಷ್ಣಮೂರ್ತಿ ಸಿದ್ಧಾರ್ಥ್, ಕರುಣ್ ನಾಯರ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಾಸ್ ಗೋಪಾಲ್, ವಿಶಾಕ್ ವಿಜಯ್ ಕುಮಾರ್, ರೋನಿತ್ ಮೋರ್, ಪ್ರಸಾದ್ ಕೃಷ್ಣ
ಕೇರಳ ಆಡುವ ಬಳಗ: ರಾಬಿನ್ ಉತ್ತಪ್ಪ, ವಿಷ್ಣು ವಿನೋದ್, ಸಚಿನ್ ಬೇಬಿ (ನಾಯಕ), ಮೊಹಮ್ಮದ್ ಅಜರುದ್ದೀನ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ತುಳಸಿ, ಅಕ್ಷಯ್ ಚಂದ್ರನ್, ರೋಹನ್ ಕುನ್ನುಮ್ಮಲ್, ಎಸ್.ಶ್ರೀಶಾಂತ್, ವತ್ಸಲ್ ಗೋವಿಂದ್, ತುಳಸಿ ಥಾಂಪಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications