ವಿಜಯ್ ಹಜಾರೆ ಟ್ರೋಫಿ: ಅಭಿಶೇಕ್ ಶರ್ಮಾ ಏಕಾಂಗಿ ಹೋರಾಟ; ಕರ್ನಾಟಕಕ್ಕೆ ಸಾಧಾರಣ ಗುರಿ ನೀಡಿದ ಪಂಜಾಬ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಇಂದು ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದ್ದು ಕರ್ನಾಟಕ ತಂಡಕ್ಕೆ ಪಂಜಾಬ್ ಎದುರಾಳಿಯಾಗಿದೆ. ಎರಡು ತಂಡಗಳು ಕೂಡ ಸಾಕಷ್ಟು ಅದ್ಭುತ ಆಟಗಾರರ ಪಡೆಯನ್ನು ಹೊಂದಿದ್ದು ಬಲಿಷ್ಠ ತಂಡಗಳ ನಡುವಿನ ಹೋರಾಟ ಜಿದ್ದಾಜಿದ್ದಿನಿಂದ ಕೂಡಿದೆ. ಈ ಪಂದ್ಯದಲ್ಲಿಯೂ ಕರ್ನಾಟಕದ ಬೌಲಿಂಗ್ ವಿಭಾಗ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಈ ಪಂದ್ಯದಲ್ಲಿ 235 ರನ್‌ಗಳಿಗೆ ಆಲೌಟ್ ಆಗಿದ್ದು ಕರ್ನಾಟಕದ ಗೆಲುವಿಗೆ 236 ರನ್‌ಗಳ ಗುರಿ ನಿಗದಿಪಡಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಉತ್ತಮ ಪ್ರದರ್ಶನ ನೀಡಿತು. ಆದರೆ ಪಂಜಾಬ್ ತಂಡದ ಓರ್ವ ದಾಂಡಿಗ ಮಾತ್ವೇ ಕರ್ನಾಟಕ ಆಟಗಾರರಿಗೆ ಬಹಳ ಕಾಡಿದ್ದಾರೆ. ಆರಂಬಿಕ ಆಟಗಾರ ಅಭಿಶೇಕ್ ಶರ್ಮಾ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನಿಡಿದ್ದು ಭರ್ಜರಿ ಶತಕ ಸಿಡಿಸಿದ್ದಾರೆ. ಕರ್ನಾಟಕದ ಶಿಸ್ತಿನ ಬೌಲಿಂಗ್ ದಾಳಿಯ ವಿರುದ್ಧ ಶರ್ಮಾ ಏಕಾಂಗಿ ಹೋರಾಟವನ್ನು ನಡೆಸಿದರು. ಇದರ ಪರಿಣಾಮವಾಗಿ ಪಂಜಾಬ್ ಈ ಪಂದ್ಯದಲ್ಲಿ ಗೌರವದ ಮೊತ್ತ ಗಳಿಸಲು ಸಾಧ್ಯವಾಗಿದೆ.
ಪಂಜಾಬ್ ತಂಡದ ಪರವಾಗಿ ಆರಂಬಿಕ ಆಟಗಾರ ಅಭಿಶೇಕ್ ಶರ್ಮಾ 123 ಎಸೆತಗಳಲ್ಲಿ 109 ರನ್‌ಗಳನ್ನು ಸಿಡಿಸಿ ವಿಕೆಟ್ ಕಳೆದುಕೊಂಡರು. ಈ ಪ್ರದರ್ಶನ ಪಂಜಾಬ್ ತಂಡಕ್ಕೆ ಆಸರೆಯಾಗಿದೆ. ಉಳಿದಂತೆ ಮಧ್ಯಮ ಕ್ರಮಾಂಕದ ಸನ್ವೀರ್ ಸಿಂಗ್ ಅವರ 39 ರನ್ ಪಂಜಾಬ್ ಪರ ದಾಖಲಾದ ಅತೀ ಹೆಚ್ಚಿನ ಮೊತ್ತವಾಗಿದೆ.
ಇನ್ನು ಈ ಪಂದ್ಯದಲ್ಲಿ ಕರ್ನಾಟಕ ಪರವಾಗಿ ವಿದ್ವತ್ ಕಾವೇರಪ್ಪ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ರೋನಿತ್ ಮೋರೆ ಎರಡು ವಿಕೆಟ್ ಪಡೆದರೆ ವಾಸುಕಿ ಕೌಶಿಕ್, ಮನೋಜ್ ಭಾಂಡಗೆ ಹಾಗೂ ಕೆ ಗೌತಮ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಪಂಜಾಬ್ ನೀಡಿರುವ ಈ ಗುರಿಯನ್ನು ಕರ್ನಾಟಕ ಹೇಗೆ ಬೆನ್ನಟ್ಟಿಲಿದೆ ಎಂಬುದು ಈಗ ಕುತೂಹಲವಾಗಿದೆ.
ಪಂಜಾಬ್ ಆಡುವ ಬಳಗ: ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಮಂದೀಪ್ ಸಿಂಗ್ (ನಾಯಕ), ಅನ್ಮೋಲ್ ಮಲ್ಹೋತ್ರಾ (ವಿಕೆಟ್ ಕೀಪರ್), ಹರ್‌ಪ್ರೀತ್ ಬ್ರಾರ್, ಸನ್ವಿರ್ ಸಿಂಗ್, ರಮಣದೀಪ್ ಸಿಂಗ್, ಮಯಾಂಕ್ ಮಾರ್ಕಂಡೆ, ಬಲ್ತೇಜ್ ಸಿಂಗ್, ಸಿದ್ದಾರ್ಥ್ ಕೌಲ್
ಬೆಂಚ್: ಗೌರವ್ ಚೌಧರಿ, ಅಶ್ವನಿ ಕುಮಾರ್, ವಿನಯ್ ಚೌಧರಿ, ಪುಖ್ರಾಜ್ ಮಾನ್
ಕರ್ನಾಟಕ ಆಡುವ ಬಳಗ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಶರತ್ ಬಿಆರ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್
ಬೆಂಚ್: ಮುರಳೀಧರ ವೆಂಕಟೇಶ್, ಜಗದೀಶ ಸುಚಿತ್, ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications