Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Vijay Hazare Trophy: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಾನ ಪಡೆಯಲು ಬೆಸ್ಟ್‌ ಚಾನ್ಸ್: ಶನಿವಾರದಿಂದ ವಿಜಯ್ ಹಜಾರೆ ಟ್ರೋಫಿ ಆರಂಭ

ಸದ್ಯ ದೇಶೀಯ ಸರ್ಕಿಟ್‌ನಲ್ಲಿ ಶನಿವಾರದಿಂದ ವಿಜಯ್ ಹಜಾರೆ ಟ್ರೋಫಿ ಆರಂಭವಾಗಲಿದೆ. ಈಗಾಗಲೇ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ ಈಗಾಗಲೇ ಮುಗಿದಿದೆ. ಮುಂಬೈ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ 135 ಪಂದ್ಯಗಳು ನಡೆಯಲಿವೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಾನ ಪಡೆದು ಯುವ ಆಟಗಾರಿಗೆ ಉತ್ತಮ ಅವಕಾಶ ಇರಲಿದೆ. ಇದಕ್ಕೆ ಪೂರಕ ಎಂಬಂತೆ ವಿಜಯ್‌ ಹಜಾರೆ ಟ್ರೋಫಿ ನಡೆಯಲಿದೆ.

ಶನಿವಾರದಿಂದ ವಿಜಯ್ ಹಜಾರೆ ಟೂರ್ನಿಯ ಆರಂಭವಾಗಲಿದ್ದು, ಒಟ್ಟಾರೆ 135 ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಒಟ್ಟು 38 ತಂಡಗಳು ಭಾಗವಗವಹಿಸಲಿವೆ. ಈ ಬಾರಿ ಹೈದರಾಬಾದ್, ವಿಶಾಖಪಟ್ಟಣಂ, ಮುಂಬೈ, ನವಿ ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 6 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಈ ತಂಡಗಳನ್ನು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಜನವರಿ 18 ರಂದು ನಡೆಯಲಿರುವ ಕ್ವಾರ್ಟರ್-ಫೈನಲ್, ಸೆಮಿ-ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಇನ್ನು ಗುಂಪು ಹಂತದಲ್ಲಿ ಅಗ್ರ ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ ಪ್ರವೇಶಿಸಲಿವೆ.

Vijay Hazare Trophy 2024-25 Schedule Groups Cities and Live Streaming Details

ಸಿ ಗುಂಪಿನಲ್ಲಿ ಕರ್ನಾಟಕ ಸ್ಥಾನ

ಕರ್ನಾಟಕ ತಂಡ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಳಿದಂತೆ ನಾಗಾಲ್ಯಾಂಡ್, ಮುಂಬೈ, ಹೈದರಾಬಾದ್, ಸೌರಾಷ್ಟ್ರ, ಪಂಜಾಬ್, ಪುದುಚೇರಿ, ಅರುಣಾಚಲ ಪ್ರದೇಶ ತಂಡಗಳು ಸ್ಥಾನ ಪಡೆದಿವೆ.

ನೇರ ಪ್ರಸಾರ ನೋಡುವುದು ಹೇಗೆ?

ವಿಜಯ್ ಹಜಾರೆ ಟ್ರೋಫಿ ಟೂರ್ನಿಯನ್ನು ಜಿಯೋ ಸಿನೆಮಾ ಮತ್ತು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಟೂರ್ನಿಯ ಮೊದಲ ಪಂದ್ಯ ಶನಿವಾರ (ಡಿ.21) ಫೈನಲ್ ಪಂದ್ಯ ಜನವರಿ 18 ರಂದು ನಡೆಯಲಿದೆ.

Vijay Hazare Trophy 2024-25 Schedule Groups Cities and Live Streaming Details

ಚಾಂಪಿಯನ್ಸ್‌ ಟ್ರೋಫಿ ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಈ ಟೂರ್ನಿಗೆ ಭಾರತ ತಂಡವನ್ನು ಸೇರುವ ಕನಸು ಹೊಂದಿರುವ ಆಟಗಾರರಿಗೆ ಇದು ಬೆಸ್ಟ್‌ ವೇದಿಕೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಮಿಂಚಿ ಬ್ಲ್ಯೂ ಜೆರ್ಸಿ ತೊಡಲು ಯುವ ಆಟಗಾರರು ಕನಸು ಕಾಣುತ್ತಿದ್ದಾರೆ.

ಗುಂಪು ವಿಭಾಗದಲ್ಲಿ ತಂಡಗಳು

ಗುಂಪು ಎ - ಒಡಿಶಾ, ಜಾರ್ಖಂಡ್, ಗೋವಾ, ಅಸ್ಸಾಂ, ಹರಿಯಾಣ, ಮಣಿಪುರ, ಗುಜರಾತ್, ಉತ್ತರಾಖಂಡ.

ಗುಂಪು ಬಿ - ಆಂಧ್ರ, ಮೇಘಾಲಯ, ರಾಜಸ್ಥಾನ, ಸಿಕ್ಕಿಂ, ಮಹಾರಾಷ್ಟ್ರ, ಸರ್ವಿಸಸ್, ರೈಲ್ವೆ, ಹಿಮಾಚಲ ಪ್ರದೇಶ.

ಸಿ ಗುಂಪು - ಕರ್ನಾಟಕ, ನಾಗಾಲ್ಯಾಂಡ್, ಮುಂಬೈ, ಹೈದರಾಬಾದ್, ಸೌರಾಷ್ಟ್ರ, ಪಂಜಾಬ್, ಪುದುಚೇರಿ, ಅರುಣಾಚಲ ಪ್ರದೇಶ.

ಗುಂಪು ಡಿ -ಮಿಜೋರಾಂ, ತಮಿಳುನಾಡು, ವಿದರ್ಭ, ಉತ್ತರ ಪ್ರದೇಶ, ಛತ್ತೀಸ್‌ಗಢ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ.

ಗುಂಪು ಇ - ಬಿಹಾರ, ಬಂಗಾಳ, ಕೇರಳ, ತ್ರಿಪುರ, ಮಧ್ಯಪ್ರದೇಶ, ದೆಹಲಿ, ಬರೋಡಾ.

Story first published: Friday, December 20, 2024, 15:10 [IST]
Other articles published on Dec 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+