Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

VHT 2024: ಕೇವಲ 35 ಎಸೆತಗಳಲ್ಲಿ ಶತಕ; ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಪಂಜಾಬ್ ಬ್ಯಾಟರ್ ದಾಖಲೆ

ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿ ಮೊದಲ ದಿನವೇ ಹಲವು ರೋಚಕತೆ ಹುಟ್ಟು ಹಾಕಿದೆ. ಪಂಜಾಬ್ ತಂಡದ ಬ್ಯಾಟರ್ ಅನ್ಮೋಲ್ಪ್ರೀತ್ ಸಿಂಗ್ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅರುಣಾಚಲ ಪ್ರದೇಶದ ವಿರುದ್ಧ ಪಂದ್ಯದಲ್ಲಿ ಅನ್ಮೋಲ್ಪ್ರೀತ್ ಸಿಂಗ್ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಈ ಮೂಲಕ ಅವರು 14 ವರ್ಷಗಳ ಹಳೆಯ ರೆಕಾರ್ಡ್ ಅನ್ನು ಬ್ರೇಕ್ ಮಾಡಿದ್ದಾರೆ. ಇದಲ್ಲದೆ, ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಅನ್ಮೋಲ್ಪ್ರೀತ್ ಸಿಂಗ್ ಪಾತ್ರರಾಗಿದ್ದಾರೆ.

ಅನ್ಮೋಲ್‌ಪ್ರೀತ್ 45 ಎಸೆತಗಳಲ್ಲಿ 12 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 115 ರನ್ ಗಳಿಸಿದರು. ಅವರ ಇನಿಂಗ್ಸ್‌ನ ನೆರವಿನಿಂದ ಪಂಜಾಬ್ ಕೇವಲ 12.5 ಓವರ್‌ಗಳಲ್ಲಿ 165 ರನ್‌ಗಳ ಗುರಿಯನ್ನು ಮುಟ್ಟಿತು. ಪಂಜಾಬ್ ಕೇವಲ ಒಂದು ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು.

Vijay Hazare Trophy 2024 Anmolpreet Singh Sets Record by Scoring a Century in Just 35 Balls

ಪಂಜಾಬ್ ನಾಯಕ ಅಭಿಷೇಕ್ ಶರ್ಮಾ (10) ಔಟಾದ ನಂತರ ಅನ್ಮೋಲ್‌ಪ್ರೀತ್ ಎರಡನೇ ವಿಕೆಟ್‌ಗೆ ಪ್ರಭಾಸಿಮ್ರಾನ್ ಸಿಂಗ್ (35) ಅವರೊಂದಿಗೆ 153 ರನ್‌ಗಳ ಅಜೇಯ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಅರುಣಾಚಲ ಪ್ರದೇಶ ತಂಡ 164 ರನ್‌ಗಳಿಗೆ ಆಲೌಟ್ ಆಗಿತ್ತು. ಪಂಜಾಬ್ ಪರ ವೇಗಿ ಅಶ್ವನಿ ಕುಮಾರ್ ಮತ್ತು ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

ಅರುಣಾಚಲ ಪ್ರದೇಶದ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ ಅನ್ಮೋಲ್‌ಪ್ರೀತ್ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ಭಾರತದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ದಾಖಲೆಯನ್ನು ಮುರಿದರು. 2009-10ರಲ್ಲಿ ಮಹಾರಾಷ್ಟ್ರ ವಿರುದ್ಧ ಬರೋಡಾ ಪರ ಯೂಸುಫ್ ಪಠಾಣ್ 40 ಎಸೆತಗಳಲ್ಲಿ ಶತಕ ಗಳಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಕೂಡ ಅನ್ಮೋಲ್‌ಪ್ರೀತ್ ಅವರಿಗಿಂತ ಹಿಂದೆ ಉಳಿದಿದ್ದಾರೆ. 1999ರಲ್ಲಿ ಬಾಂಗ್ಲಾದೇಶ ವಿರುದ್ಧ ಲಾರಾ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ವಿಶ್ವ ದಾಖಲೆ

ಈ ವರ್ಷ ಟ್ಯಾಸ್ಮೆನಿಯಾ ವಿರುದ್ಧ ದಕ್ಷಿಣ ಆಸ್ಟ್ರೇಲಿಯಾ ಪರ ಕೇವಲ 29 ಎಸೆತಗಳಲ್ಲಿ ಶತಕ ಸಿಡಿಸಿದ ಜೇಕ್-ಫ್ರೇಸರ್ ಮೆಕ್‌ಗುರ್ಕ್ ಹೆಸರಿನಲ್ಲಿ ವಿಶ್ವದಾಖಲೆ ಇದೆ. ಅವರ 2014ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಇದಾದ ನಂತರ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿರುವ ಅನ್ಮೋಲ್‌ಪ್ರೀತ್ ಮೂರನೇ ಸ್ಥಾನದಲ್ಲಿದ್ದಾರೆ.

ಅನ್‌ಸೋಲ್ಡ್

ಅನ್ಮೋಲ್ಪ್ರೀತ್ ಈ ಹಿಂದೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಆದರೆ, ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳು
ಅವರನ್ನು ಖರೀದಿಸಲಿಲ್ಲ. ಹೀಗಾಗಿ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅವರು ಅನ್‌ಸೋಲ್ಡ್ ಆಟಗಾರರಾಗಿದ್ದಾರೆ.

Story first published: Saturday, December 21, 2024, 20:44 [IST]
Other articles published on Dec 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+