Vijay Hazare Trophy: ಕರ್ನಾಟಕ, ಬರೋಡಾ ಕ್ವಾರ್ಟರ್ ಫೈನಲ್ ಫೈಟ್
ದೇಶೀಯ ಟೂರ್ನಿ ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡ ಶನಿವಾರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಮಯಾಂಕ್ ಅಗರ್‌ವಾಲ್ ಪಡೆ ಎಂಟರ ಘಟ್ಟದ ಕಾದಾಟದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ಅಮೋಘ ಪ್ರದರ್ಶನ ನೀಡಿತ್ತು. ಆಡಿದ 7 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ "ಸಿ" ಗುಂಪಿನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿತ್ತು. ಇನ್ನು ಬರೋಡಾ ಸಹ ಆಡಿದ 6 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ "ಇ" ಗುಂಪಿನನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತ್ತು.
ವಡೋಧರಾದಲ್ಲಿ ನಡೆಯಲಿರುವ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಬರೋಡಾ ತಂಡಗಳು ಕಾದಾಟ ನಡೆಸಲಿವೆ. ಕರ್ನಾಟಕ ಈಗಾಗಲೇ ನಾಲ್ಕು ಬಾರಿ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದಿದ್ದು, ಐದನೇ ಕಪ್ ಗೆಲುವಿನ ಕನಸಿನಲ್ಲಿದೆ. ತಂಡದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಜಯದ ಆಸೆಯನ್ನು ಚಿಗುರಿಸಿದ್ದಾರೆ. ಶನಿವಾರ ಆರಂಭವಾಗಲಿರುವ ಪಂದ್ಯ ಬೆಳಗ್ಗೆ 9ಕ್ಕೆ ಶುರುವಾಗಲಿದೆ.

ಟೀಮ್ ಇಂಡಿಯಾ ಸೇರುವ ಕನಸು
ಪ್ರಕಸ್ತ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಕರ್ನಾಟಕದ ಮಯಾಂಕ್ ಅಗರ್‌ವಾಲ್, ಭಾರತ ತಂಡಕ್ಕೆ ಮತ್ತೆ ಕಂ ಬ್ಯಾಕ್ ಮಾಡುವ ಕನಸಿನಲ್ಲಿದ್ದಾರೆ. ಇವರು ಆಡಿರುವ ಏಳು ಪಂದ್ಯಗಳಲ್ಲಿ 613 ರನ್ ಕಲೆ ಹಾಕಿದ್ದು ಭಾರವಸೆ ಮೂಡಿಸಿದ್ದಾರೆ. ಅಲ್ಲದೆ ಈ ವೇಳೆ 4 ಶತಕ ಹಾಗೂ 1 ಅರ್ಧಶತಕ ಸಹ ಸೇರಿದೆ. ಇವರನ್ನು ಬಿಟ್ಟು ರಾಜ್ಯ ತಂಡದ ಯುವ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ಗೆಲುವಿನ ಮಾಲೆ ತೊಡಿಸುವ ಕನಸು ಕಾಣುತ್ತಿದ್ದಾರೆ. ತಂಡದ ಬೌಲಿಂಗ್‌ನಲ್ಲಿ ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್ ಎದುರಾಳಿಗಳಿಗೆ ಕಾಡಬಲ್ಲರು.
ಕರ್ನಾಟಕದ ಪರ ಗರಿಷ್ಠ ರನ್
ಮಯಾಂಕ್ ಅಗರ್‌ವಾಲ್, 7 ಪಂದ್ಯ, 613 ರನ್
ಕೆವಿ ಅನೀಶ್, 7 ಪಂದ್ಯ, 290 ರನ್
ಆರ್ ಸ್ಮರಣ್, 7 ಪಂದ್ಯ, 228 ರನ್
ಕರ್ನಾಟಕದ ಪರ ಅತಿ ಹೆಚ್ಚು ವಿಕೆಟ್
ಶ್ರೇಯಸ್ ಗೋಪಾಲ್, 7 ಪಂದ್ಯ, 14 ವಿಕೆಟ್
ವಾಸುಕಿ ಕೌಶಿಕ್, 7 ಪಂದ್ಯ, 13 ವಿಕೆಟ್
ಅಭಿಲಾಶ್ ಶೆಟ್ಟಿ, 4 ಪಂದ್ಯ, 8 ವಿಕೆಟ್

ಗುಜರಾತ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಇವರು ಸಹ ಅಮೋಘ ಫಾರ್ಮ್‌ನಲ್ಲಿದ್ದು, ತಂಡದ ಜಯದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಕೃಣಾಲ್ ಪಾಂಡ್ಯ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಷ್ಣ ಸಾಳುಂಕೆ, ಶಾಶ್ವರ್, ನಿನಾದ್ ಲಯದಲ್ಲಿದ್ದು, ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಬೌಲಿಂಗ್‌ನಲ್ಲೂ ಅನುಭವಿ ಆಟಗಾರರು ಇದ್ದು ತಂಡಕ್ಕೆ ನೆರವಾಗಬಲ್ಲರು.
ಬರೋಡಾ ಪರ ಅತಿ ಹೆಚ್ಚು ರನ್
ವಿಷ್ಣು ಸಾಳುಂಕೆ, 6 ಪಂದ್ಯ, 294 ರನ್
ಶಾಶ್ವತ್ ರಾವತ್, 6 ಪಂದ್ಯ, 262 ರನ್
ನಿನಾದ ರಾತ್ವಾ, 6 ಪಂದ್ಯ, 258 ರನ್
ಮಹಾರಾಷ್ಟ್ರ, ಪಂಜಾಬ್ ಮುಖಾಮುಖಿ
ಶನಿವಾರ ನಡೆಯುವ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications