Vijay Hazare Trophy: ಇಲ್ಲಿದೆ ನಾಕೌಟ್ ಹಂತದ ಸಂಪೂರ್ಣ ವೇಳಾಪಟ್ಟಿ: ಕರ್ನಾಟಕಕ್ಕೆ ಬರೋಡಾ ಎದುರಾಳಿ
ಭಾರತದಲ್ಲಿ ದೇಶೀಯ ಟೂರ್ನಿಗಳ ಅರ್ಭಟ ಜೋರಾಗಿದೆ. ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಸ್ಟಾರ್ ಯುವ ಆಟಗಾರರು ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆಯುತ್ತಿದ್ದಾರೆ. ಜನವರಿ 5ಕ್ಕೆ ವಿಜಯ್ ಹಜಾರೆ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಕರ್ನಾಟಕದ ಸ್ಟಾರ್ ಆಟಗಾರರ ಫಾರ್ಮ್ ಭರ್ಜರಿಯಾಗಿದ್ದಾರೆ. ರಾಜ್ಯ ತಂಡವನ್ನು ಮುನ್ನಡೆಸುವ ಮಯಾಂಕ್ ಅಗರ್‌ವಾಲ್ ಹಾಗೂ ವಿದರ್ಭ ತಂಡವನ್ನು ಮುನ್ನಡೆಸುವ ಕರುಣ್ ನಾಯರ್ ರನ್‌ಗಳನ್ನು ಗುಡ್ಡೆ ಹಾಕಿದ್ದಾರೆ.
ಕರ್ನಾಟಕ ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಏಳರಿಂದ ಹತ್ತರ ವರೆಗೆ ಸ್ಥಾನ ಪಡೆದಿರುವ ತಂಡಗಳು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಹಣಾಹಣಿ ನಡೆಸಲಿವೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಯ ಸಾಧಿಸಿದ ಎರಡು ತಂಡಗಳು ನಾಲ್ಕರ ಘಟಕ್ಕೆ ಪ್ರವೇಶ ಪಡೆಯಲಿವೆ.

ಗುಜರಾತ್, ಮಹಾರಾಷ್ಟ್ರ, ವಿದರ್ಭ, ಕರ್ನಾಟಕ, ಬರೋಡಾ ತಂಡಗಳು ಕ್ವಾರ್ಟರ್ ಫೈನಲ್‌ಗೆ ನೇರವಾಗಿ ಪ್ರವೇಶ ಪಡೆದು ಕೊಂಡಿವೆ. ಹರಿಯಾಣ, ರಾಜಸ್ಥಾನ, ತಮಿಳು ನಾಡು ಮತ್ತು ಬಂಗಾಳ ತಂಡಗಳು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಟಾಪ್ ರ‍್ಯಾಂಕ್ ತಂಡಗಳು
1- ಗುಜರಾತ್, 28 ಅಂಕ, "ಎ" ಗುಂಪಿನಲ್ಲಿ ಅಗ್ರ ಸ್ಥಾನ
2- ವಿದರ್ಭ, 24 ಅಂಕ, "ಡಿ" ಗುಂಪಿನಲ್ಲಿ ಅಗ್ರ ಸ್ಥನ
3- ಮಹಾರಾಷ್ಟ್ರ, 24 ಅಂಕ, "ಬಿ" ಗುಂಪಿನಲ್ಲಿ ಅಗ್ರ ಸ್ಥನ
4- ಕರ್ನಾಟಕ, 24 ಅಂಕ, "ಸಿ" ಗುಂಪಿನಲ್ಲಿ ಅಗ್ರ ಸ್ಥನ
5- ಬರೋಡಾ, 20 ಅಂಕ, "ಇ" ಗುಂಪಿನಲ್ಲಿ ಅಗ್ರ ಸ್ಥನ
6- ಪಂಜಾಬ್, 24 ಅಂಕ, "ಸಿ" ಗುಂಪಿನಲ್ಲಿ ಎರಡನೇ ಸ್ಥಾನ
7- ಹರಿಯಾಣ, 24 ಅಂಕ, "ಎ" ಗುಂಪಿನಲ್ಲಿ ಎರಡನೇ ಸ್ಥಾನ
8- ರಾಜಸ್ಥಾನ, 20 ಅಂಕ, "ಬಿ" ಗುಂಪಿನಲ್ಲಿ ಎರಡನೇ ಸ್ಥಾನ
9-ತಮಿಳುನಾಡು, 18 ಅಂಕ, "ಡಿ" ಗುಂಪಿನಲ್ಲಿ ಎರಡನೇ ಸ್ಥಾನ
10- ಬಂಗಾಳ, 18 ಅಂಕ, "ಇ" ಗುಂಪಿನಲ್ಲಿ ಎರಡನೇ ಸ್ಥಾನ
ಜನವರಿ 9 ರಂದು ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ
ಹರಿಯಾಣ vs ಬಂಗಾಳ, ವಡೋಧರಾ, 9 AM
ರಾಜಸ್ಥಾನ vs ತಮಿಳುನಾಡು, ವಡೋಧರಾ, 9 AM
ಜನವರಿ 11 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯ
ಮಹರಾಷ್ಟ್ರ vs ಪಂಜಾಬ್, vs ಬಂಗಾಳ, ವಡೋಧರಾ, 9 AM
ಕರ್ನಾಟಕ vs ಬರೋಡಾ, ವಡೋಧರಾ, 9 AM
ಜನವರಿ 12 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯ
ಗುಜರಾತ್ vs ಪ್ರಿ ಕ್ವಾರ್ಟರ್ ಫೈನಲ್ 1 ವಿಜೇತರು , vs ಬಂಗಾಳ, ವಡೋಧರಾ, 9 AM
ವಿದರ್ಭ vs ಪ್ರಿ ಕ್ವಾರ್ಟರ್ ಫೈನಲ್ 2 ವಿಜೇತರು, vs ಬಂಗಾಳ, ವಡೋಧರಾ, 9 AM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications