Vaibhav Suryavanshi: ಲಿಸ್ಟ್-ಎ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ವಿಶೇಷ ಸಾಧನೆ
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ( ಐಪಿಎಲ್) ಮೆಗಾ ಹರಾಜಿನಲ್ಲಿ ಬಿಡ್ ಆದ ಅತ್ಯಂತ ಕಿರಿಯ ಆಟಗಾರಾಗುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಯಲ್ಲಿ ಮತ್ತೊಂದೆ ದಾಖಲೆ ಸೃಷ್ಟಿಸಿದ್ದಾರೆ. ಬಿಹಾರ ಮತ್ತು ಮಧ್ಯಪ್ರದೇಶ ನಡುವಿನ ಇ ಗುಂಪಿನ ಪಂದ್ಯದಲ್ಲಿ 13 ವರ್ಷದ ವೈಭವ್ ವಿಶಿಷ್ಟ ಸಾಧನೆ ಮಾಡಿದ್ದಾರೆ. ಬಿಹಾರ ಪರ ವೈಭವ್ ಅವರು 13 ವರ್ಷ 269 ದಿನಗಳ ವಯಸ್ಸಿನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡುವ ಮೂಲಕ ಲಿಸ್ಟ್-ಎ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯ 1999ರ ಆವೃತ್ತಿಯನ್ನು 14 ವರ್ಷ ಮತ್ತು 51 ದಿನಗಳ ವಯಸ್ಸಿನಲ್ಲಿ ವಿದರ್ಭ ಪರ ಪಾದಾರ್ಪಣೆ ಮಾಡಿದ ಅಲಿ ಅಕ್ಬರ್ ಲಿಸ್ಟ್-ಎ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಇದೀಗ ಅಲಿ ಅಕ್ಬರ್ ದಾಖಲೆಯನ್ನು ವೈಭವ್ ಸೂರ್ಯವಂಶಿ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸೂರ್ಯವಂಶಿ ಈಗಾಗಲೇ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಮಧ್ಯಪ್ರದೇಶ ವಿರುದ್ಧ ಪಂದ್ಯದಲ್ಲಿ ಬಿಹಾರದ ಪರ ಆಡುತ್ತಿರುವ ಸೂರ್ಯವಂಶಿ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ನಂತರ ಆರ್ಯನ್ ಪಾಂಡೆ ಅವರ ಎರಡನೇ ಎಸೆತದಲ್ಲಿ ಸೂರ್ಯವಂಶಿ ಔಟಾದರು.
ಐಪಿಎಲ್ 2024ರ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ (ಆರ್‌ಆರ್) 1.10 ಕೋಟಿ ರೂ.ಗೆ ಬಿಡ್ ಮಾಡಿತ್ತು. ಆರ್‌ಆಆರ್ ಹೆಡ್‌ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ವೈಭವ್ ಸೂರ್ಯವಂಶಿ ಇನ್ನಷ್ಟು ತರಬೇತಿ ಪಡೆಯಲಿದ್ದಾರೆ. ಸೂರ್ಯವಂಶಿ ಅಂಡರ್-19 ಏಷ್ಯಾ ಕಪ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಐದು ಇನ್ನಿಂಗ್ಸ್‌ಗಳಲ್ಲಿ ಸರಾಸರಿ 44 ಮತ್ತು ಸ್ಟ್ರೈಕ್ ರೇಟ್ 145.45 ರಲ್ಲಿ 176 ರನ್ ಬಾರಿಸಿದ್ದರು.
ಕಡಿಮೆ ವಯಸ್ಸಿನಲ್ಲೇ ಸೂರ್ಯವಂಶಿ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇದೇ ರೀತಿ ಅವರು ತಮ್ಮ ಬ್ಯಾಟಿಂಗ್ ಕಮಾಲ್ ಮುಂದುವರೆಸಿದರೆ, ಭಾರತ ತಂಡದ ಪರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರಿಸಬಹುದು.
ಫಲಿತಾಂಶ
ಎನ್‌ಎಫ್‌ಸಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಬಿಹಾರ ವಿರುದ್ಧ ಮಧ್ಯಪ್ರದೇಶ ಗೆದ್ದು ಬೀಗಿದೆ. ದಲು ಬ್ಯಾಟಿಂಗ್ ಮಾಡಿದ ಬಿಹಾರ 46.4 ಓವರ್‌ಗಳಲ್ಲಿ 196 ರನ್ ಕಲೆ ಹಾಕಿತು. ಬಿಹಾರ ಪರ ಬಿಪಿನ್ ಸೌರಭ್ 54 ಎಸೆತಗಳಲ್ಲಿ 50 ರನ್ ಮತ್ತು ನಾಯಕ ಸಕಿಬುಲ್ ಘನಿ 62 ಎಸೆತಗಳಲ್ಲಿ 48 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಧ್ಯಪ್ರದೇಶ 25.1 ಓವರ್‌ಗಳಲ್ಲಿ ಸುಲಭವಾಗಿ ಗುರಿ ಮುಟ್ಟಿತ್ತು.
ಹರ್ಷ್ ಗಾವ್ಲಿ 63 ಎಸೆತಗಳಲ್ಲಿ 83 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ಆರು ವಿಕೆಟ್‌ಗಳ ಗೆಲುವು ತಂದು ಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications