ಭಾರತದಲ್ಲಿ ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಗೆ ವೇದಿಕೆ ಸಜ್ಜಾಗುತ್ತಿದೆ. ಡಿಸೆಂಬರ್ 21 ರಿಂದ ಪ್ರಾರಂಭವಾಗಲಿರುವ ಟೂರ್ನಿಗಾಗಿ ಕೆಲವು ತಂಡಗಳನ್ನು ಘೋಷಿಸಲಾಗಿದೆ. ಈಗಾಗಲೇ ಘೋಷಿಸಿರುವ ತಂಡಗಳಲ್ಲಿ ಸ್ಟಾರ್ ಆಟಗಾರರನ್ನು ಕೈ ಬಿಡಲಾಗಿದೆ. ಈ ಬಗ್ಗೆ ಕ್ರಿಕೆಟ್ ಕಟ್ಟೆಯಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಯುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ, ಕಳಪೆ ಫಾರ್ಮ್‌ನಿಂದಾಗಿ ಮುಂಬೈ ತಂಡದಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಕೇರಳ ತಂಡದಿಂದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಿದ್ದರು. ಆದರೆ ಇದೀಗ ವಿಜಯ್ ಹಜಾರೆ ಟ್ರೋಫಿಯಿಂದ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಲಾಗಿದೆ. ಇದಾದ ನಂತರ ಕೇರಳ ತಂಡದಿಂದ ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದೇಕೆ? ಎಂಬ ಪ್ರಶ್ನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

ಕಳೆದ ತಿಂಗಳು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಡೆದ ಇ ಗುಂಪಿನಲ್ಲಿ ಕೇರಳ ತಂಡ ಮುಂಬೈ ಮತ್ತು ಆಂಧ್ರದ ನಂತರ ಮೂರನೇ ಸ್ಥಾನದಲ್ಲಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಒಂದರ ಹಿಂದೆ ಒಂದರಂತೆ ಅಮೋಘ ಶತಕಗಳನ್ನು ಬಾರಿಸಿದ್ದರು. ಇದಾದ ಬಳಿಕ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿಯೂ 75 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಆದರೆ ನಂತರದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಕೇವಲ 61 ರನ್ ಗಳಿಸಲಷ್ಟೇ ಶಕ್ತರಾದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೊನೆಯ ನಾಲ್ಕು ಇನ್ನಿಂಗ್ಸ್‌ಗಳ ಸಂಜು ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನ ಕೇರಳ ತಂಡದ ಮೇಲೆ ಪರಿಣಾಮ ಬೀರಿತು. ಇದೀಗ ಅವರನ್ನು ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಯ ಕೇರಳ ತಂಡದಿಂದ ಹೊರಗಿಡಲಾಗಿದೆ.
ಕೇರಳ ವಿಜಯ್ ಹಜಾರೆ ಟ್ರೋಫಿ ತಂಡ: ಸಲ್ಮಾನ್ ನಿಜಾರ್ (ನಾಯಕ), ರೋಹನ್ ಕುನ್ನುಮಲ್, ಶಾನ್ ರೋಜರ್, ಆನಂದ್ ಕೃಷ್ಣನ್, ಕೃಷ್ಣ ಪ್ರಸಾದ್, ಎ ಇಮ್ರಾನ್, ಜಲಜ್ ಸಕ್ಸೇನಾ, ಎ ಸರ್ವತೆ, ಸಿಜೋಮನ್ ಜೆ, ಬಾಸಿಲ್ ಥಂಪಿ, ಬಾಸಿಲ್ ಎನ್‌ಪಿ, ನಿಧೀಶ್ ಎಂಟಿ, ಐಡೆನ್ ಟಾಮ್, ಶರಫುದ್ದೀನ್, ಎ ಸ್ಕಾರಿಯಾ, ವಿಶ್ವೇಶ್ವರ್, ವೈಶಾಖ್ ಚಂದ್ರನ್, ಅಜ್ನಾಸ್ ಎಂ (ವಿಕೆಟ್ ಕೀಪರ್).ವಿಜಯ್ ಹಜಾರೆ ಟ್ರೋಫಿಗಾಗಿ ಕೇರಳ ತಂಡ
ಸಲ್ಮಾನ್ ನಿಜಾರ್ (ನಾಯಕ), ರೋಹನ್ ಕುನ್ನುಮಲ್, ಶಾನ್ ರೋಜರ್, ಆನಂದ್ ಕೃಷ್ಣನ್, ಕೃಷ್ಣ ಪ್ರಸಾದ್, ಎ ಇಮ್ರಾನ್, ಜಲಜ್ ಸಕ್ಸೇನಾ, ಎ ಸರ್ವತೆ, ಸಿಜೋಮನ್ ಜೆ, ಬಾಸಿಲ್ ಥಂಪಿ, ಬಾಸಿಲ್ ಎನ್‌ಪಿ, ನಿಧೀಶ್ ಎಂಟಿ, ಐಡೆನ್ ಟಾಮ್, ಶರಫುದ್ದೀನ್, ಎ ಸ್ಕಾರಿಯಾ, ವಿಶ್ವೇಶ್ವರ್, ವೈಶಾಖ್ ಚಂದ್ರನ್, ಅಜ್ನಾಸ್ ಎಂ (ವಿಕೆಟ್ ಕೀಪರ್).