For Quick Alerts
ALLOW NOTIFICATIONS  
For Daily Alerts
 

Karun Nair: ಶತಕದ ಮೇಲೆ ಶತಕ ಸಿಡಿಸಿ ಕನ್ನಡಿಗ ದಾಖಲೆ

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ವಿದರ್ಭ 9 ವಿಕೆಟ್‌​ಗಳಿಂದ ಸೋಲಿಸಿ ಸೆಮಿಫೈನಲ್‌​ಗೆ ಎಂಟ್ರಿ ಕೊಟ್ಟಿದ್ದಾರೆ. ವಡೋದರದ ಮೋತಿಬಾಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 8 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವಿದರ್ಭ ತಂಡ 39 ಎಸೆತಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು.

ರಾಜಸ್ಥಾನ ವಿರುದ್ಧ ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ನಾಯಕ ಕರುಣ್ ನಾಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿ ಶತಕ ಬಾರಿಸಿದರು. ಅವರು 82 ಎಸೆತಗಳಲ್ಲಿ 122 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಶತಕದೊಂದಿಗೆ ಕರುಣ್ ನಾಯರ್ ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ದಾಖಲೆ ಸೃಷ್ಟಿಸಿದರು.

Vijay Hazare Trophy 2025 Karun Nair creates record by scoring century after century

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್ ಆಡಿದ 6 ಪಂದ್ಯಗಳಲ್ಲಿ ಐದು ಶತಕ ಗಳಿಸಿದ್ದಾರೆ. ಅವರು 50 ಓವರ್‌ಗಳ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿದ ಶ್ರೀಲಂಕಾದ ಕುಮಾರ ಸಂಗಕ್ಕಾರ, ಭಾರತದ ದೇವದತ್ ಪಡಿಕ್ಕಲ್ ಮತ್ತು ದಕ್ಷಿಣ ಆಫ್ರಿಕಾದ ಅಲ್ವಿರೋ ಪೀಟರ್ಸನ್ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ತಮಿಳುನಾಡಿನ ಎನ್ ಜಗದೀಸನ್ ಮಾತ್ರ ಈ ಮಾದರಿಯಲ್ಲಿ ಹೆಚ್ಚು ಸತತ ಐದು ಶತಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಕರುಣ್ ನಾಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಗರಿಷ್ಠ 5 ಶತಕಗಳನ್ನು ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ. ಇದರೊಂದಿಗೆ ಅವರು ಎನ್ ಜಗದೀಶ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಒಂದು ಋತುವಿನಲ್ಲಿ ಜಗದೀಸನ್ 5 ಶತಕಗಳನ್ನು ಬಾರಿಸಿದ್ದಾರೆ. ನಾಯರ್ ರಾಜಸ್ಥಾನ ವಿರುದ್ಧದ ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ ಐದನೇ ಶತಕವನ್ನು ಪೂರೈಸಿದ್ದಾರೆ.

ಇದಲ್ಲದೆ, ಜಗದೀಸನ್ ಅವರ ಐದು ಶತಕಗಳ ದಾಖಲೆಯನ್ನು ಮುರಿಯುವ ಅವಕಾಶವನ್ನು ನಾಯರ್ ಹೊಂದಿದ್ದಾರೆ. ನಾಯರ್ ಅವರಿಗೆ ಈ ದಾಖಲೆಯನ್ನು ಮುರಿಯಲು ಸೆಮಿಫೈನಲ್ ಮತ್ತು ಫೈನಲ್ ಎರಡು ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ ಅವರು ಶತಕ ಬಾರಿಸುವ ಮೂಲಕ ಜಗದೀಸನ್ ದಾಖಲೆ ಬ್ರೇಕ್ ಮಾಡಬಹುದು.

ಕರುಣ್ ನಾಯರ್ ಉತ್ತರ ಪ್ರದೇಶ ವಿರುದ್ಧ ಅಜೇಯ 112 ರನ್, ತಮಿಳುನಾಡು ವಿರುದ್ಧ ಅಜೇಯ 111 ಮತ್ತು ಚಂಡೀಗಢ ವಿರುದ್ಧ 163 ರನ್ ಗಳಿಸಿದ್ದರು. ಇದಲ್ಲದೇ ಛತ್ತೀಸ್‌ಗಢ ವಿರುದ್ಧ ಔಟಾಗದೆ 44 ಹಾಗೂ ಜಮ್ಮು ಮತ್ತು ಕಾಶ್ಮೀರ ವಿರುದ್ಧ 112 ರನ್ ಬಾರಿಸಿದ್ದಾರೆ. ಒಟ್ಟಾರೆ ಈ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಆರು ಇನ್ನಿಂಗ್ಸ್‌ಗಳಲ್ಲಿ 664 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ ಒಮ್ಮೆ ಮಾತ್ರ ಔಟ್ ಆಗಿರುವುದರಿಂದ, ಅವರ ಪಂದ್ಯಾವಳಿಯ ಸರಾಸರಿ 664 ಆಗಿದೆ.

Story first published: Sunday, January 12, 2025, 22:56 [IST]
Other articles published on Jan 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+