ವಿಜಯ್ ಹಜಾರೆ: ಬೆಂಗಳೂರಿನ ಪಂದ್ಯಗಳಿಗೆ ಈ ಮೈದಾನ ಆತಿಥ್ಯ
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ವಿಜಯ್ ಹಜಾರೆ ಟ್ರೋಫಿ ನಡೆಯುತ್ತದೋ ಇಲ್ಲವೋ ಎಂಬ ಪ್ರಶ್ನೆಗೆ ಮಂಗಳವಾರ ಉತ್ತರ ಸಿಕ್ಕಿದೆ. ಪೊಲೀಸ್ ಇಲಾಖೆ ಭದ್ರತಾ ಕಾರಣದಿಂದ ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನಿರಾಕರಿಸಿದೆ. ಹಾಗಿದ್ದರೆ ಈ ಬಾರಿ ವಿಜಯ್ ಹಜಾರೆ ಟ್ರೋಫಿಯ ಪಂದ್ಯಗಳು ನಡೆಯುವುದು ಎಲ್ಲಿ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯುತ್ತಿಲ್ಲ ಎಂದ ಮೇಲೆ ಪಂದ್ಯಗಳು ಆಲೂರ್‌ನಲ್ಲಿ ನಡೆಯಲಿವೆಯಾ? ಇಲ್ಲ ವಿಜಯ್ ಹಜಾರೆ ಟ್ರೋಫಿಯ ಈ ಬಾರಿಯ ಪಂದ್ಯಗಳು ಬೆಂಗಳೂರಿನ ಹೊರ ವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಇದೇ ಮೈದಾನದಲ್ಲಿ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣ 1ರಲ್ಲಿ ಡಿ ಗುಂಪಿನಲ್ಲಿ ದೆಹಲಿ ಹಾಗೂ ಆಂಧ್ರ ಪಂದ್ಯಗಳು ನಡೆಯುತ್ತಿವೆ. ಇದೇ ಮೈದಾನದಲ್ಲಿ ಶುಕ್ರವಾರವೂ ದೆಹಲಿ ತಂಡ ಗುಜರಾತ್ ತಂಡವನ್ನು ಎದುರಿಸಲಿದೆ.

ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣ 1ರಲ್ಲಿ ಜನವರಿ 12 ರಂದು ಕ್ವಾರ್ಟರ್ ಫೈನಲ್, ಜ.15 ರಂದು ಮೊದಲ ಸೆಮಿಫೈನಲ್, ಜ.16 ರಂದು ಎರಡನೇ ಸೆಮಿಫೈನಲ್, ಜ.18 ರಂದು ಫೈನಲ್ ಪಂದ್ಯಗಳು ನಡೆಯಲಿವೆ. ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣ 2ರಲ್ಲಿ ಜನವರಿ 12 ರಂದು ಎರಡನೇ, ಜ.13 ರಂದು ಮೂರನೇ, ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯಗಳ ನಡೆಯಲಿವೆ.
ಏನು ಇದರ ವಿಶೇಷತೆ?
ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣ ಬೆಂಗಳೂರಿನ ಹೊರವಲಯದಲ್ಲಿದೆ. 40 ಎಕರೆಯಲ್ಲಿ ಈ ಮೈದಾನ ನಿರ್ಮಾಣವಾಗಿದೆ. ಇಲ್ಲಿ ಒಟ್ಟು ಮೂರು ಮೈದಾನಗಳು ಇವೆ. ಈ ಮೈದಾನದಲ್ಲಿ ಕೆಂಪು, ಕಂಪು ಹಾಗೂ ಮಿಶ್ರ ಮಾಡಿದ ಪಿಚ್‌ಗಳನ್ನು ತಯಾರಿಸಲಾಗಿದೆ. ಬಿಸಿಸಿಐ ಶ್ರೇಷ್ಠತಾ ಕೇಂದ್ರದ 1ನೇ ಮೈದಾನದಲ್ಲಿ ಹಗಲು ರಾತ್ರಿಯ ಪಂದ್ಯಕ್ಕೂ ದೀಪದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 45 ಹೊರಾಂಗಣ ನೆಟ್ಸ್ ಅಭ್ಯಾಸಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೈದಾನದಲ್ಲಿ ಒಳಗಾಂಗಣ ಅಭ್ಯಾಸಕ್ಕೂ ಹೈ ಟೆಕ್ ವ್ಯವಸ್ಥೆ ಮಾಡಲಾಗಿದೆ. ಈ ಕ್ರೀಡಾಂಗಣವನ್ನು 2024ರಲ್ಲಿ ಉದ್ಘಾಟಿಸಲಾಯಿತು.
ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ಎಲೈಟ್ ಲೀಗ್ ಪಂದ್ಯಗಳು ನಡೆಯಲಿವೆ.
ಆಲೂರಿನಲ್ಲಿ ನಡೆಯಲಿರುವ ಪಂದ್ಯಗಳ ವಿವರ
ಡಿ. 24: ಒಡಿಶಾ ವಿರುದ್ಧ ಸೌರಾಷ್ಟ್ರ, ಬೆಳಗ್ಗೆ 9ಕ್ಕೆ
ಡಿ. 26: ಒಡಿಶಾ ವಿರುದ್ಧ ಸರ್ವಿಸಸ್, ಬೆಳಗ್ಗೆ 9ಕ್ಕೆ
ಡಿ. 29: ಆಂಧ್ರ ವಿರುದ್ಧ ಒಡಿಶಾ, ಬೆಳಗ್ಗೆ 9ಕ್ಕೆ
ಡಿ. 31: ದೆಹಲಿ ವಿರುದ್ಧ ಒಡಿಶಾ, ಬೆಳಗ್ಗೆ 9ಕ್ಕೆ
ಜ. 03: ಹರಿಯಾಣ ವಿರುದ್ಧ ಒಡಿಶಾ, ಬೆಳಗ್ಗೆ 9ಕ್ಕೆ
ಜ. 06: ಗುಜರಾತ್ ವಿರುದ್ಧ ಒಡಿಶಾ, ಬೆಳಗ್ಗೆ 9ಕ್ಕೆ
ಜ. 08: ಒಡಿಶಾ ವಿರುದ್ಧ ರೈಲ್ವೇಸ್, ಬೆಳಗ್ಗೆ 9ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications