For Quick Alerts
ALLOW NOTIFICATIONS  
For Daily Alerts
 

ಪೃಥ್ವಿ, ತಾರೆ ಆಕರ್ಷಕ ಆಟ: ಮುಂಬೈ ಮುಡಿಗೆ ವಿಜಯ್ ಹಜಾರೆ ಕಿರೀಟ

Vijay Hazare Trophy Final: Mumbai beat Uttar Pradesh by 6 Wickets

ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ 2021ರ ಆವೃತ್ತಿಯಲ್ಲಿ ಮುಂಬೈ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು 6 ವಿಕೆಟ್‌ನಿಂದ ಮಣಿಸಿರುವ ಮುಂಬೈ 4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಜಯಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಉತ್ತರಪ್ರದೇಶ, ಮಾಧವ್ ಕೌಶಿಕ್ ಅಜೇಯ 158, ಸಮರ್ಥ್ ಸಿಂಗ್ 55, ಪ್ರಿಯಂ ಗರ್ಗ್ 21, ಅಕ್ಷದೀಪ್‌ ನಾಥ್ 55, ಉಪೇಂದ್ರ ಯಾದವ್ 9 ರನ್‌ನೊಂದಿಗೆ 50 ಓವರ್‌ಗೆ 4 ವಿಕೆಟ್ ಕಳೆದು 312 ರನ್ ಬಾರಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ, ನಾಯಕ ಪೃಥ್ವಿ ಶಾ 73, ಯಶಸ್ವಿ ಜೈಸ್ವಾಲ್ 29, ಆದಿತ್ಯ ತಾರೆ 118, ಶಮ್ಸ್ ಮುಲಾನಿ 36, ಶಿವಂ ದೂಬೆ 42, ಸರ್ಫರಾಜ್ ಖಾನ್ 3 ರನ್‌ನೊಂದಿಗೆ 41.3 ಓವರ್‌ಗೆ 4 ವಿಕೆಟ್ ಕಳೆದು 315 ರನ್ ಬಾರಿಸಿ ಗೆಲುವಿನ ನಗು ಬೀರಿತು.

ಉತ್ತರಪ್ರದೇಶ ಇನ್ನಿಂಗ್ಸ್‌ನಲ್ಲಿ ಮುಂಬೈಯ ತನುಶ್ ಕೋಟಿಯಾನ್ 2, ಪ್ರಶಾಂತ್ ಸೋಲಂಕಿ 1 ವಿಕೆಟ್ ಪಡೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಉತ್ತರ ಪ್ರದೇಶದ ಯಶ್ ದಯಾಳ್ 1, ಶಿವಂ ಮಾವಿ 1, ಶಿವಂ ಶರ್ಮ 1, ಸಮೀರ್ ಚೌಧರಿ 1 ವಿಕೆಟ್‌ನಿಂದ ಗಮನ ಸೆಳೆದರು. ಆದಿತ್ಯ ತಾರೆ ಪಂದ್ಯಶ್ರೇಷ್ಠರೆನಿಸಿದರು.

Story first published: Sunday, March 14, 2021, 22:16 [IST]
Other articles published on Mar 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+