Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಜಯ್ ಹಜಾರೆ ಟ್ರೋಫಿ: ಝಾರ್ಖಂಡ್‌ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

Vijay Hazare Trophy, Group A: Karnataka beat Jharkhand by 123 runs

ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್ 26) ನಡೆದ ವಿಜಯ್ ಹಜಾರೆ ಟ್ರೋಫಿ 3ನೇ ಸುತ್ತಿನ ಎಲೈಟ್ ಗ್ರೂಪ್‌ 'ಎ' ಪಂದ್ಯದಲ್ಲಿ ಝಾರ್ಖಂಡ್ ವಿರುದ್ಧ ಆತಿಥೇಯ ಕರ್ನಾಟಕ 123 ರನ್ ಭರ್ಜರಿ ಗೆಲುವನ್ನಾಚರಿಸಿದೆ.

ದೇವದತ್ ಪಡಿಕಳ್, ನಾಯಕ ಮನೀಷ್ ಪಾಂಡೆ ಮತ್ತು ಪವನ್ ದೇಶಪಾಂಡೆ ಅರ್ಧ ಶತಕ ಬಾರಿಸಿ ಬ್ಯಾಟಿಂಗ್‌ ವಿಭಾಗದಲ್ಲಿ ಬೆಂಬಲಿಸಿದರೆ, ಝಾರ್ಖಂಡ್ ಇನ್ನಿಂಗ್ಸ್‌ನಲ್ಲಿ ಆಲ್ ರೌಂಡರ್ ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಗೋಪಾಲ್ ಮಾರಕ ಬೌಲಿಂಗ್‌ನಿಂದ ರಾಜ್ಯ ತಂಡ ಅಧಿಕಾರಯುತ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕದಿಂದ ಕೆಎಲ್ ರಾಹುಲ್ 29, ದೇವದತ್ ಪಡಿಕಳ್ 58, ಕೃಷ್ಣಮೂರ್ತಿ ಸಿದ್ಧಾರ್ಥ್ 22, ಮನೀಷ್ ಪಾಂಡೆ 52, ಪವನ್ ದೇಶಪಾಂಡೆ 70, ಕೃಷ್ಣಪ್ಪ ಗೌತಮ್ 5, ಅಭಿಮನ್ಯು ಮಿಥುನ್ 12, ಶ್ರೇಯಸ್ ಗೋಪಾಲ್ 6, ಜಗದೀಶ್ ಸುಚಿತ್ 13 ರನ್‌ ಕೊಡುಗೆಯಿತ್ತರು.

ಮನೀಷ್ ಪಾಂಡೆ ಪಡೆ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 285 ರನ್ ಮಾಡಿತು. ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಝಾರ್ಖಂಡ್‌ನ ರಾಹುಲ್ ಶುಕ್ಲ 4, ಆನಂದ್ ಸಿಂಗ್ 4 ವಿಕೆಟ್‌ ಪಡೆದು ಮಿಂಚಿದರು. ಆದರೆ ಬ್ಯಾಟಿಂಗ್‌ನಲ್ಲಿ ಝಾರ್ಖಂಡ್‌ ಆಟ ನಡೆಯಲಿಲ್ಲ.

ಗುರಿ ಬೆನ್ನತ್ತಿದ ಝಾರ್ಖಂಡ್ ಪರ ಆಲ್ ರೌಂಡರ್ ಆನಂದ್ ಸಿಂಗ್ 32, ಇಶಾನ್ ಕಿಶನ್ 11, ವಿರಾಟ್ ಸಿಂಗ್ 21, ಸೌರಭ್ ತಿವಾರಿ 43, ಅಂಕುಲ್ ರಾಯ್ 26 ರನ್‌ ಸೇರಿಸಿದರು. 37.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು ಝಾರ್ಖಂಡ್ 162 ರನ್ ಮಾಡಿತು. ಈ ಇನ್ನಿಂಗ್ಸ್‌ನಲ್ಲಿ ರಾಜ್ಯ ತಂಡದ ಅಭಿಮನ್ಯು ಮಿಥುನ್ 1, ರೋನಿತ್ ಮೋರೆ 1, ಕೃಷ್ಣಪ್ಪ ಗೌತಮ್ 5, ಶ್ರೇಯಸ್ 2 ವಿಕೆಟ್ ಪಡೆದು ಎದುರಾಳಿಯನ್ನು ಕಟ್ಟಿಹಾಕಿದರು.

Story first published: Thursday, September 26, 2019, 22:50 [IST]
Other articles published on Sep 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+