For Quick Alerts
ALLOW NOTIFICATIONS  
For Daily Alerts
 

ದೇವದತ್, ಮನೀಷ್ ಪಾಂಡೆ ಅಬ್ಬರ, ಸೌರಾಷ್ಟ್ರಕ್ಕೆ ಸೋಲುಣಿಸಿದ ಕರ್ನಾಟಕ

Vijay Hazare Trophy: Karnataka beat Saurashtra by 8 wickets

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 12) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 11, ಗ್ರೂಪ್ 'ಎ' ಮತ್ತು 'ಬಿ' ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಆರಿಥೇಯ ಕರ್ನಾಟಕ 8 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ. ಇದರೊಂದಿಗೆ ರಾಜ್ಯ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ದೇವದತ್ ಕಡಿಕ್ಕಲ್ ಮತ್ತು ನಾಯಕ ಮನೀಶ್ ಪಾಂಡೆಯ ಬ್ಯಾಟಿಂಗ್ ಬೆಂಬಲ, ಪ್ರಸಿದ್ಧ್ ಕೃಷ್ಣ ಮತ್ತು ವಿ ಕೌಶಿಕ್ ಅವರ ಮಾರಕ ಮಾರಕ ಬೌಲಿಂಗ್ ನೆರವಿನಿಂದ ಕರ್ನಾಟಕ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ. ಸೌರಾಷ್ಟ್ರ ಆಡಿದ 7ರಲ್ಲಿ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ಕುಸಿದಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೌರಾಷ್ಟ್ರ ತಂಡ, ವಿಶ್ವರಾಜ್ ಜಡೇಜಾ 13, ಪ್ರೇರಕ್ ಮಂಕದ್ 86, ಚಿರಾಗ್ ಜಾನಿ 66, ಧರ್ಮೇಂದ್ರ ಸಿನ್ಹ ಜಡೇಜಾ 16 ರನ್‌ ಕೊಡುಗೆಯಿಂದ 47.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 212 ರನ್ ಮಾಡಿತು.

ಸೌರಾಷ್ಟ್ರ ಇನ್ನಿಂಗ್ಸ್‌ನಲ್ಲಿ ರಾಜ್ಯ ತಂಡದ ಪ್ರಸಿದ್ಧ್ ಕೃಷ್ಣ 19ಕ್ಕೆ 5, ವಿ ಕೌಶಿಕ್ 23ಕ್ಕೆ 3 ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಕರ್ನಾಟಕ, ಕೆಎಲ್ ರಾಹುಲ್ 23, ದೇವದತ್ ಪಡಿಕ್ಕಲ್ 103 (104 ಎಸೆತ), ಮನೀಶ್ ಪಾಂಡೆ 67, ಕರುಣ್ ನಾಯರ್ 16 ರನ್ ಸೇರ್ಪಡೆಯೊಂದಿಗೆ 36.4 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 213 ರನ್ ಮಾಡಿತು.

Story first published: Saturday, October 12, 2019, 18:52 [IST]
Other articles published on Oct 12, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+