Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಸತತ ಆರನೇ ಗೆಲುವಿನ ಮೂಲಕ ನಾಕೌಟ್ ಹಂತಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. 6ನೇ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿತು. ಮಯಾಂಕ್ ಅಗರ್ವಾಲ್ ಸ್ಫೋಟಕ ಬ್ಯಾಟಿಂಗ್ ಮಾಡಿ ಶತಕ ಸಿಡಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಹಾಗಾದ್ರೆ ಇನ್ನೂ ಯಾರೆಲ್ಲಾ ಎಷ್ಟು ರನ್ ಹಾಗೂ ವಿಕೆಟ್ ಪಡೆದಿದ್ದಾರೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗುಜರಾತ್ ಕಾಲೇಜು ಗ್ರೌಂಡ್‌ನಲ್ಲಿ ಪಂದ್ಯ ನಡೆದಿದ್ದು, ಈ ವೇಳೆ ರಾಜಸ್ಥಾನ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಕರ್ನಾಟಕ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿ ರಾಜಸ್ಥಾನ್ ತಂಡಕ್ಕೆ 325 ಬೃಹತ್ ರನ್‌ಗಳ ಗುರಿ ನೀಡಿತು. ಆದರೆ, ರಾಜಸ್ಥಾನ್ 38 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಬರೀ 174 ರನ್ ಗಳಿಸಿ ಹೀನಾಯ ಸೋಲನುಭವಿಸಿತು. ಈ ಮೂಲಕ ಕರ್ನಾಟಕ 150 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಮಯಾಂಕ್, ಪಡಿಕ್ಕಲ್ ಅಬ್ಬದ ಬ್ಯಾಟಿಂಗ್: ಬ್ಯಾಟಿಂಗ್‌ನಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಎದುರಾಳಿ ರಾಜಸ್ಥಾನ್ ತಂದ ಬೌಲರ್‌ಗಳಿಗೆ ಚಳಿ ಬಿಡಿಸಿದರು. ಆದರೂ, ದೇವ್ ಐದನೇ ಶತಕದಿಂದ ವಂಚಿತರಾದರು.
ಪ್ರಸಿದ್ಧ್ ಕೃಷ್ಭ ಮಾರಕ ಬೌಲಿಂಗ್ ದಾಳಿ: ಬೌಲಿಂಗ್ ವಿಭಾಗದಲ್ಲೂ ಕರ್ನಾಟಕ ಉತ್ತಮ ಪ್ರದರ್ಶನ ತೋರಿದ್ದು, ಎದುರಾಳಿ ತಂಡದ ಆಟಗಾರರನ್ನು ಆಲ್ ಔಟ್ ಮಾಡುವ ಮೂಲಕ ಅತೀ ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದರು. ಅದರಲ್ಲೂ, ಪ್ರಸಿದ್ಧ್ ಕೃಷ್ಣ ಮಾರಕ ಬೌಲಿಂಗ್ ದಾಳಿ ಮಾಡಿ ಐದು ವಿಕೆಟ್ ಕಬಳಿಸಿದರು. ಈ ಮೂಲಕ ಇವರು ಕೂಡ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಮಯಾಂಕ್, ದೇವ್ ಉತ್ತಮ ಆರಂಭ: ನಾಯಕ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ 184 ರನ್‌ಗಳ ಜೊತೆಯಾಟ ಆಡುವ ಮೂಲಕ ಉತ್ತಮ ಆರಂಭ ನೀಡಿದರು. ಇನ್ನೂ ದೇವದತ್ ಪಡಿಕ್ಕಲ್ ಐದನೇ ಶತಕ ಸಿಡಿಸುವ ಅವಕಾಶವನ್ನು ಸ್ವಲ್ಪ ಹಂತರಲ್ಲೇ ತಪ್ಪಿಸಿಸಿಕೊಂಡು. ಕೇವಲ 82 ಎಸೆತಗಳಿಗೆ 12 ಬೌಂಡರಿ, 2 ಸಿಕ್ಸರ್ ಸಹಿತ 91 ರನ್ ಸಿಡಸಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ನಾಯಕ ಮಯಾಂಕ್ ಅಗರ್‌ವಾಲ್ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಿಸಿ ತಂಡಕ್ಕೆ ಆಸರೆ ಆದರು. ಅವರು 107 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 100 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಇನ್ನೂ ಅಭಿನವ್ ಮನೋಹರ್ 35 (27), ಕೆ.ಎಲ್. ರಾಹುಲ್ 25 (28) ಸಾಧಾರಣ ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಕೊನೆಗೆ ಕರ್ನಾಟಕ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ತತ್ತರಿಸಿದ ರಾಜಸ್ಥಾನ್: ಕರ್ನಾಟಕ ತಂಡ ನೀಡಿದ ಬೃಹತ್ ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ತಂಡವು ಕೇವಲ 174 ರನ್‌ಗಳಿಗೆ ಆಲ್‌ಔಟ್ ಆಗಿ ಹೀನಾಯ ಸೋಲು ಕಂಡಿತು. ರಾಜಸ್ಥಾನ ಪರ ಕರಣ್ ಲಾಂಬಾ 55 ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು 30 ರನ್‌ಗಳ ಒಳಗೆ ವಿಕೆಟ್ ಒಪ್ಪಿಸಿದರು.
ಇನ್ನೂ ಕರ್ನಾಟಕ ಪರ ಬೌಲಿಂಗ್ ಮಾಡಿದ ಪ್ರಸಿದ್ದ್ ಕೃಷ್ಣ 5 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ ಹಾಗೂ ಶ್ರೀಶಾ ಆಚರ್ ತಲಾ ಎರಡು ವಿಕೆಟ್ ಕಿತ್ತರು. ಇನ್ನು ವೈಶಾಕ್ ವಿಜಯ್ ಕುಮಾರ್ ಒಂದು ವಿಕೆಟ್ ಕಬಳಿಸಿ. ಒಟ್ಟಿನಲ್ಲಿ ಕರ್ನಾಟಕದ ವೇಗಿ ಪ್ರಸಿದ್ದ್ ಕೃಷ್ಣ ಮಾರಕ ಬೌಲಿಂಗ್ ದಾಳಿಗೆ ರಾಜಸ್ಥಾನ್ ತಂಡದ ಬ್ಯಾಟರ್‌ಗಳು ತತ್ತರಿಸಿದ್ದಂತೂ ನಿಜ.