For Quick Alerts
ALLOW NOTIFICATIONS  
For Daily Alerts
 

Vijay Hazare Trophy: ಋತುರಾಜ್ ಗಾಯಕ್ವಾಡ್ ರೆಕಾರ್ಡ್ ಬ್ರೇಕ್ ಮಾಡಿದ ಕರುಣ್ ನಾಯರ್

ವಿಜಯ್ ಹಜಾರೆ ಟ್ರೋಫಿ 2025ರ ಟೂರ್ನಿಯಲ್ಲಿ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಅಬ್ಬರಿಸುತ್ತಿದ್ದಾರೆ. ಶತಕದ ಮೇಲೆ ಶತಕ ಬಾರಿಸಿ ಕರುಣ್ ನಾಯರ್ ಮಿಂಚುತ್ತಿದ್ದಾರೆ. ಈ ಮೂಲಕ ಅವರು ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಬಿರುಸಿನ ಬ್ಯಾಟಿಂಗ್ ಮಾಡುತ್ತಿರುವ ನಾಯರ್ ಪ್ರತಿ ಪಂದ್ಯದಲ್ಲೂ ರನ್ ಹೊಳೆ ಹರಿಸುತ್ತಿದ್ದಾರೆ.

ಗುರುವಾರ ಕೂಡ ಮುಂಬೈ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನಾಯರ್ ಸ್ಥಿರ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವಿದರ್ಭ ಮತ್ತು ಕರ್ನಾಟಕ ತಂಡಗಳು ಫೈನಲ್ ಆಡಲಿವೆ. ಮುಂಬೈ ವಿರುದ್ಧ ಕರುಣ್ ನಾಯರ್ 44 ಎಸೆತಗಳಲ್ಲಿ 88 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದರು. ಇದರೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 752 ತಲುಪಿತು.

Vijay Hazare Trophy Karun Nair breaks Rituraj Gaikwad s record

ಇಲ್ಲಿಯವರೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್ ಅವರು 5 ಶತಕಗಳನ್ನು ಬಾರಿಸಿದ್ದು, 752 ರನ್‌ಗಳೊಂದಿಗೆ ಟೂರ್ನಿಯ ಅಗ್ರ ಸ್ಕೋರರ್ ಆಗಿ ಉಳಿದಿದ್ದಾರೆ. ಇದರೊಂದಿಗೆ ಹಲವು ಅವರು ದಾಖಲೆಗಳನ್ನು ಮುರಿದಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಒಂದು ಋತುವಿನಲ್ಲಿ ನಾಯಕನೊಬ್ಬ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕರುಣ್ ನಾಯರ್ ಮಾಡಿದ್ದಾರೆ. ಇದಕ್ಕೂ ಮುನ್ನ ಮಹಾರಾಷ್ಟ್ರದ ನಾಯಕ ಋತುರಾಜ್ ಗಾಯಕ್ವಾಡ್ ಈ ದಾಖಲೆಯನ್ನು ಹೊಂದಿದ್ದರು. ಒಂದು ಋತುವಿನಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ನಾಯಕ ಎನಿಸಿಕೊಂಡಿದ್ದ ಗಾಯಕ್ವಾಡ್ 2022-23ರ ಋತುವಿನಲ್ಲಿ 5 ಇನ್ನಿಂಗ್ಸ್‌ಗಳಲ್ಲಿ 4 ಶತಕಗಳೊಂದಿಗೆ 660 ರನ್ ಗಳಿಸುವ ಮೂಲಕ ದಾಖಲೆ ಮಾಡಿದ್ದರು. ಇದೀಗ ಕರುಣ್ ನಾಯರ್ 752 ರನ್‌ ಗಳಿಸಿ ಋತುರಾಜ್ ಗಾಯಕ್ವಾಡ್ ದಾಖಲೆಯನ್ನು ಅಳಿಸಿದ್ದಾರೆ.

ನಾಯರ್ 5 ಶತಕಗಳನ್ನು ಗಳಿಸಿ ಒಂದು ಋತುವಿನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ತಮಿಳುನಾಡಿನ ಎನ್ ಜಗದೀಸನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ, ಲಿಸ್ಟ್ ಎ ನಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿರುವ ಕರ್ನಾಟಕದ ತಂಡದ ಸಹ ಆಟಗಾರ ದೇವದತ್ ಪಡಿಕ್ಕಲ್, ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಅಲ್ವಿರೊ ಪೀಟರ್ಸನ್ ಅವರ ಕ್ಲಬ್‌ಗೆ ನಾಯರ್ ಸೇರಿದ್ದಾರೆ. ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಔಟಾಗದೆ (542) ಅತಿ ಹೆಚ್ಚು ರನ್ ಗಳಿಸುವ ಮೂಲಕ ನಾಯರ್ ಸಾಧನೆ ಮಾಡಿದ್ದಾರೆ.

ನಾಯರ್ ಇಲ್ಲಿಯವರೆಗೆ ಆಡಿರುವ 7 ಪಂದ್ಯಗಳಲ್ಲಿ 112*, 44*, 163*, 111*, 112, 122*, ಮತ್ತು 88* ರನ್ ಗಳಿಸಿದ್ದಾರೆ . ಇದಕ್ಕೂ ಮುನ್ನ ನಾಯರ್ ರಾಜಸ್ಥಾನ ವಿರುದ್ಧ 5ನೇ ಶತಕ ಬಾರಿಸುವ ಮೂಲಕ ವಿದರ್ಭ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು. ಇದೀಗ ಫೈನಲ್‌ನಲ್ಲಿ ತಮ್ಮ ತವರು ತಂಡ ಕರ್ನಾಟಕ ವಿರುದ್ಧ ನಾಯರ್ ಹೇಗೆ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ನಾಯರ್ ಕರ್ನಾಟಕದಲ್ಲಿ ಅವಕಾಶ ಸಿಗದ ಕಾರಣ ವಿದರ್ಭ ತಂಡಕ್ಕೆ ವಲಸೆ ಹೋಗಿದ್ದಾರೆ.

Story first published: Friday, January 17, 2025, 11:05 [IST]
Other articles published on Jan 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+