Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Vijay Hazare Trophy: ಮುಂದುವರೆದ ಕರುಣ್ ಅಜೇಯ ಆಟ: ಮಹಾರಾಷ್ಟ್ರ ವಿರುದ್ಧ ಮೆರೆದಾಟ

ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕರುಣ್ ನಾಯರ್ ಅವರ ಅಮೋಘ ಪ್ರದರ್ಶನ ಮುಂದುವರೆದಿದೆ. ಪಂದ್ಯ ಎಷ್ಟೇ ಒತ್ತಡದಿಂದ ಕೂಡಿದ್ದರೂ ಸಹ ಆ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಬಲ್ಲ ಕ್ಷಮತೆ ನನಗಿದೆ ಎಂದು ಕರುಣ್ ಸಾಬೀತು ಮಾಡಿ ತೋರಿಸಿದ್ದಾರೆ. ವಡೋಧರಾದಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕರುಣ್‌ ಅಬ್ಬರಿಸಿದ್ದು, ಬಿಸಿಸಿಐ ಆಯ್ಕೆ ಸಮಿತಿಯ ಕದವನ್ನು ತಟ್ಟುತ್ತಿದ್ದಾರೆ.

ವಡೋಧರಾದಲ್ಲಿ ಕರುಣ್ ನಾಯರ್ ಕ್ಲಾಸಿಕ್‌ ಬ್ಯಾಟಿಂಗ್ ಮುಂದೆ ಮಹಾರಾಷ್ಟ್ರದ ಬೌಲರ್‌ಗಳ ಬೆವರು ಹರಿಸಿದ್ದಾರೆ. ಇವರ ತಂತ್ರಗಾರಿಕೆಗೆ ತಕ್ಕಂತೆ ಬ್ಯಾಟ್ ಮಾಡುವಲ್ಲಿ ಮಹಾರಾಷ್ಟ್ರ ಬೌಲರ್‌ಗಳು ಎಡವಿದ್ದಾರೆ. ಟೂರ್ನಿಯಲ್ಲಿ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದ ಕರುಣ್‌, ಸೆಮಿಫೈನಲ್‌ ನಂತಹ ದೊಡ್ಡ ಪಂದ್ಯದಲ್ಲೂ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಕರುಣ್‌ ನಾಯಕ ಮತ್ತೊಮ್ಮೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿದ್ದಾರೆ.

Vijay Hazare Trophy Karun Nair s Unbeaten Streak Shines in Semi-Finals

ಸೆಮಿಫೈನಲ್‌ ಪಂದ್ಯದಲ್ಲೂ ಆರ್ಭಟ

ಕರ್ನಾಟಕ ತಂಡದಲ್ಲಿ ಆಡುವ ಅವಕಾಶ ಪಡೆಯದೇ ಇದ್ದಾಗ, ನೆರೆಯ ವಿದರ್ಭ ತಂಡಕ್ಕೆ ವಲಸೆ ಹೋದ ಕರುಣ್, ಯಾವುದೇ ಬೌಲರ್ ವಿರುದ್ಧವೂ ಕರುಣೆ ತೊರುತಲೇ ಇಲ್ಲ. ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಪ್ರಭಾವದಿಂದ ರನ್‌ಗಳನ್ನು ಒಂದೊಂದಾಗಿ ಪೋಣಿಸುತ್ತಾ ಸಾಗಿದ ಕರುಣ್‌, 200 ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದ್ದಾರೆ.

ಅಜೇಯ ಆಟ

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ವಿದರ್ಭ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 380 ರನ್‌ ಸೇರಿಸಿತು. ಈ ವೇಳೆ ತಂಡದ ಆರಂಭಿಕರಾದ ಧ್ರುವ್ ಶೌರ್ಯ ಹಾಗೂ ಯಶ್ ರಾಥೋಡ್ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 224 ರನ್‌ ಸೇರಿಸಿತು. ಧ್ರುವ್ ಶೌರ್ಯ 114, ಯಶ್ ರಾಥೋಡ್ 116 ರನ್ ಬಾರಿಸಿ ಔಟ್ ಆದರು.

ಗುರವಾರ ಕರುಣ್‌ 44 ಎಸೆತಗಳನ್ನು ಎದುರಿಸಿ 200ರ ಸ್ಟ್ರೈಕ್‌ ರೇಟ್‌ನಲ್ಲಿ 88 ರನ್ ಕಲೆ ಹಾಕಿದ್ದಾರೆ. ಈ ವೇಳೆ 9 ಬೌಂಡರಿ, 5 ಸಿಕ್ಸರ್ ಸೇರಿವೆ. ಟೂರ್ನಿಯಲ್ಲಿ ಕರುಣ್‌ ನಾಯರ್ ಆಡಿದ 8 ಪಂದ್ಯಗಳಲ್ಲಿ 752 ರನ್‌ ಸಿಡಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 1 ಅರ್ಧಶತಕಗಳು ಸೇರಿವೆ. ಈ ವೇಳೆ ಇವರ ಸರಾಸರಿ 752 ಆಗಿದ್ದು, ಸ್ಟ್ರೈಕ್‌ ರೇಟ್‌ 125.96 ಆಗಿದೆ.

ಈಗಾಗಲೇ ಟೀಮ್ ಇಂಡಿಯಾ ಪರ ಆಡಿ ಸೈ ಎನಿಸಿಕೊಂಡಿರುವ ಕರುಣ್‌ ಮತ್ತೊಮ್ಮೆ ಕಂ ಬ್ಯಾಕ್ ಮಾಡುವ ಕನಸು ಹೊಂದಿದ್ದಾರೆ.

Story first published: Thursday, January 16, 2025, 19:08 [IST]
Other articles published on Jan 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+