ವಿಜಯ ಹಜಾರೆ ಟ್ರೋಫಿ: ಧೋನಿ ನೇತೃತ್ವದ ಜಾರ್ಖಂಡ್ ಕ್ವಾರ್ಟರ್ ಫೈನಲ್ ಗೆ
ಮಹಾರಾಷ್ಟ್ರ, ಮಾರ್ಚ್.06 : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಜಾರ್ಜಂಡ್ ತಂಡ ವಿಜಯ ಹಜಾರೆ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಸೋಮವಾರ ಬಂಗಾಳಿ ಕ್ರಿಕೆಟ್ ಸ್ಟೇಡಿಯಂ ಕಲ್ಯಾಣಿಯಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯದಲ್ಲಿ ಜಾರ್ಜಂಡ್ ಆರು ವಿಕೆಟ್ ಗಳಿಂದ ಸುಲಭ ಜಯಗಳಿಸಿತು. [ವಿಜಯ ಹಜಾರೆ ಟ್ರೋಫಿ 2017: ಜಾರ್ಖಂಡ್ ಪರ ಧೋನಿ ಕಣಕ್ಕೆ!]
ಮೊದಲು ಬ್ಯಾಟ್ ಮಾಡಿದ ಕಾಶ್ಮೀರ 43 ಓವರ್ ಗಳಲ್ಲಿ ಕೇವಲ 184 ರನ್ ಗಳಿಗೆ ಸರ್ವಪತನ ಕಂಡಿತು. ಸುಲಭ ರನ್ ಗುರಿ ಬೆನ್ನಟ್ಟಿದ ಜಾರ್ಖಂಡ್ 35 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಕಾಶ್ಮೀರ ತಂಡವನ್ನು ಕಾಡಿದ ಜಾರ್ಖಂಡ್ ನ ಸ್ಪಿನ್ನರ್ ಶಹಬಾಜ್ ನದೀಂ 42 ರನ್ ಗಳನ್ನು ನೀಡಿ ಐದು ವಿಕೆಟ್ ಪಡೆದು ಮಿಂಚಿದರು.
ಪರವಿಂದರ್ ರಸೂಲ್ 45 ಮತ್ತು ಓವೈಶಾ 59 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಜಾರ್ಖಂಡ್ ಪರ ಕಮಾರ್ ದೇವಬ್ರಾ 5 ಬೌಂಡರಿ 4 ಆಕರ್ಷಕ ಸಿಕ್ಸರ್ ಗಳ ನೆರವಿನಿಂದ 94 ಎಸತೆಗಳಲ್ಲಿ 78 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಸೌರಬ್ ತಿವಾರಿ 30, ನಾಯಕ ಧೋನಿ ಅಜೇಯ 19 ರನ್ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications