For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ದೆಹಲಿಗೆ ಪ್ರದೀಪ್ ಸಂಗ್ವಾನ್ ನಾಯಕ

Vijay Hazare Trophy: Pradeep Sangwan to lead Delhi in tournament

ನವದೆಹಲಿ, ಫೆಬ್ರವರಿ 12: ಐಪಿಎಲ್ 2021 ನಡುವೆ ದೇಶಿ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದುವರೆಸಿದೆ. ವಿಜಯ್ ಹಜಾರೆ ಟ್ರೋಫಿ 2021ಕ್ಕೆ ಚಾಲನೆ ಸಿಗಲಿದೆ. ಫೆಬ್ರವರಿ 20ರಂದು ಪಂದ್ಯಾವಳಿ ಆರಂಭವಾಗಲಿದ್ದು, ವಿವಿಧ ರಾಜ್ಯಗಳು ತಂಡಗಳನ್ನು ಪ್ರಕಟಿಸುತ್ತಿವೆ.

ದೆಹಲಿ ಹಾಗೂ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) 22 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶಿಖರ್ ಧವನ್, ನಿತೀಶ್ ರಾಣಾ ಹಾಗೂ ಉನ್ಮುಕ್ತ್ ಚಂದ್ ಇರುವ ತಂಡಕ್ಕೆ ಪ್ರದೀಪ್ ಸಂಗ್ವಾನ್ ನಾಯಕರಾಗಿ ಘೋಷಿಸಲಾಗಿದೆ. ಅಶುದಾನಿ ನೇತೃತ್ವದ ಆಯ್ಕೆ ಸಮಿತಿಯು ದೆಹಲಿ ತಂಡವನ್ನು ಪ್ರಕಟಿಸಿದೆ.

ದೆಹಲಿ ತಂಡ: ಪ್ರದೀಪ್ ಸಂಗ್ವಾನ್ (ನಾಯಕ), ಶಿಖರ್ ಧವನ್, ಮನೋಜ್ ಕಾಲ್ರಾ, ಧ್ರುವ್ ಶೋರೆ, ಕ್ಷಿತಿಜ್ ಶರ್ಮ, ನಿತೀಶ್ ರಾಣಾ, ಅನುಜ್ ರಾವತ್(ವಿಕೆಟ್ ಕೀಪರ್), ಲಕ್ಷಯ್ ಥರೆಜಾ (ವಿಕೆಟ್ ಕೀಪರ್), ಹಿತೆನ್ ದಲಾಲ್, ಕುವರ್ ಬಿಧುರಿ, ವಭವ್ ಕಂದ್ ಪಾಲ್, ಸಿಮರ್ ಜೀತ್ ಸಿಂಗ್, ಶಿವಾಂತ್ ವಶಿಷ್ಠ್, ಶಿವರಾಮ್ ಶರ್ಮ, ವಿಷನ್ ಪಂಚಾಲ್ ಕುಲ್ವಂತ್ ಖೆಜ್ರೋಲಿಯಾ, ತೇಜಸ್ ಬರೋಕಾ.

ಕೊವಿಡ್ 19 ಮಾರ್ಗಸೂಚಿ ಅನುಸರಿಸಿ ತಂಡಗಳು ಕ್ವಾರಂಟೈನ್ ಅವಧಿಯಲ್ಲಿವೆ. ಐಪಿಎಲ್ ನಲ್ಲಿ ಅನುಸರಿಸಿದ ಮಾರ್ಗಸೂಚಿ ದೇಶಿ ಪಂದ್ಯಾವಳಿ ಆಯೋಜಿಸಲು ಬಿಸಿಸಿಐಗೆ ನೆರವಾಗುತ್ತಿದೆ.

ಸೂರತ್, ಇಂದೋರ್, ಬೆಂಗಳೂರು, ಜೈಪುರ, ಕೋಲ್ಕತಾ ಹಾಗೂ ತಮಿಳುನಾಡಿನಲ್ಲಿ ಪಂದ್ಯಾವಳಿ ನಡೆಯಲಿದೆ. 5 ಎಲೈಟ್ ಗುಂಪು ಒಂದು ಪ್ಲೇಟ್ ಗುಂಪು ಇದೆ. ಮಾರ್ಚ್ 8 ಹಾಗೂ 9ರಂದು ಕ್ವಾರ್ಟರ್ ಫೈನಲ್, ಮಾರ್ಚ್ 11ರಂದು ಉಪಾಂತ್ಯ ಹಾಗೂ ಮಾರ್ 14ರಂದು ಅಂತಿಮ ಹಣಾಹಣಿ ನಡೆಯಲಿದೆ.

Story first published: Friday, February 12, 2021, 21:53 [IST]
Other articles published on Feb 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+