ವಿಜಯ್ ಹಜಾರೆ: ಪೃಥ್ವಿ ಸ್ಫೋಟಕ ಶತಕ, ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವು

ಜೈಪುರ್: ಜೈಪುರ್‌ನ ಜೈಪುರಿಯಾ ವಿದ್ಯಾಲಯ ಗ್ರೌಂಡ್‌ನಲ್ಲಿ ಭಾನುವಾರ (ಫೆಬ್ರವರಿ 21) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 1, ಎಲೈಟ್ ಗ್ರೂಪ್ ಡಿ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ತಂಡ 7 ವಿಕೆಟ್ ಗೆಲುವು ಕಂಡಿದೆ. ಪೃಥ್ವಿ ಶಾ ಶತಕ, ಸೂರ್ಯಕುಮಾರ್ ಯಾದವ್ ಅರ್ಧ ಶತಕ ಮತ್ತು ಧವಳ್ ಕುಲಕರ್ಣಿ ಬೌಲಿಂಗ್ ಬಲದಿಂದ ಮುಂಬೈ ಜಯ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ, ಹಿಮ್ಮತ್ ಸಿಂಗ್ ಅಜೇಯ 106, ಶಿವಾಂಕ್ ವಶಿಷ್ಠ್ 55, ನಾಯಕ ಪ್ರದೀಪ್ ಸಾಂಗವನ್ 28 ರನ್, ಲಲಿತ್ ಯಾದವ್ 5, ಕೊಡುಗೆಯೊಂದಿಗೆ 50 ಓವರ್ 7 ವಿಕೆಟ್ ನಷ್ಟದಲ್ಲಿ 211 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಮುಂಬೈ, ಯಶಸ್ವಿ ಜೈಸ್ವಾಲ್ 8, ಪೃಥ್ವಿ ಶಾ ಅಜೇಯ 105 (89 ಎಸೆತ), ನಾಯಕ ಶ್ರೇಯಸ್ ಐಯ್ಯರ್ 39, ಸೂರ್ಯಕುಮಾರ್ ಯಾದವ್ 50 (33 ಎಸೆತ), ಶಿವಂ ದೂಬೆ 9 ರನ್‌ನೊಂದಿಗೆ 31.5 ಓವರ್‌ಗೆ 3 ವಿಕೆಟ್ ಕಳೆದು 216 ರನ್ ಬಾರಿಸಿತು.
ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಮುಂಬೈಯ ಧವಳ್ ಕುಲಕರ್ಣಿ 35 ರನ್‌ಗೆ 3, ಶಮ್ಸ್ ಮುಲಾನಿ 2 ವಿಕೆಟ್‌ನಿಂದ ಗಮನ ಸೆಳೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಶಿವಾಂಕ್ ವಶಿಷ್ಠ್ 1, ಲಲಿತ್ ಯಾದವ್ 2 ವಿಕೆಟ್ ಪಡೆದರು. ಮುಂಬೈಗೆ ಟೂರ್ನಿಯ ಮೊದಲ ಗೆಲುವಿದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications