ವಿಜಯ್ ಹಜಾರೆ ಸೆ.ಫೈನಲ್: ಮುಂಬೈ ವಿರುದ್ಧ ಕರ್ನಾಟಕಕ್ಕೆ ಸೋಲು

ದೆಹಲಿ: ದೆಹಲಿಯ ಪಾಲಂ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 11) ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನ್-2 ಪಂದ್ಯದಲ್ಲಿ ಕರ್ನಾಟಕ ತಂಡ ಫೈನಲ್ ಅವಕಾಶ ತಪ್ಪಿಸಿಕೊಂಡಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 72 ರನ್ ಹೀನಾಯ ಸೋಲನುಭವಿಸಿದೆ. ನಾಯಕ ಪೃಥ್ವಿ ಶಾ ಶತಕದ ನೆರವಿನೊಂದಿಗೆ ಮುಂಬೈ ಫೈನಲ್‌ಗೆ ಪ್ರವೇಶಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ, ಪೃಥ್ವಿ ಶಾ 165 (122 ಎಸೆತ), ಆದಿತ್ಯ ತಾರೆ 16, ಶಮ್ಸ್ ಮುಲಾನಿ 45, ಶಿವಂ ದೂಬೆ 27, ಅಮನ್ ಹಕೀಮ್ ಖಾನ್ 25, ಸರ್ಫರಾಜ್ ಖಾನ್ 9, ತನುಷ್ ಕೋಟಿಯಾನ್ 5 ರನ್ ಸೇರ್ಪಡೆಯೊಂದಿಗೆ 49.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 322 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಕರ್ನಾಟಕ, ನಾಯಕ ರವಿಕುಮಾರ್ ಸಮರ್ಥ್ 8, ದೇವದತ್ ಪಡಿಕ್ಕಲ್ 64, ಕರುಣ್ ನಾಯರ್ 29, ಶ್ರೇಯಸ್ ಗೋಪಾಲ್ 33, ಶರತ್ ಬಿಆರ್ 61, ಕೃಷ್ಣಪ್ಪ ಗೌತಮ್ 28 ರನ್ ಕೊಡುಗೆಯೊಂದಿಗೆ 42.4 ಓವರ್‌ನಲ್ಲಿ ಸರ್ವಪತನ ಕಂಡು 250 ರನ್ ಗಳಿಸಲಷ್ಟೇ ಶಕ್ತವಾಯ್ತು. ಮಾರ್ಚ್ 14ರ ಭಾನುವಾರ ಫೈನಲ್‌ನಲ್ಲಿ ಉತ್ತರಪ್ರದೇಶ ಮತ್ತು ಮುಂಬೈ ಸ್ಪರ್ಧಿಸಲಿವೆ.
ಮುಂಬೈ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ 3, ರೋನಿತ್ ಮೋರೆ 1, ವ್ಯಾಶಕ್ ವಿ 4 (56 ರನ್), ಶ್ರೇಯಸ್ ಗೋಪಾಲ್ 1, ಕೆ ಗೌತಮ್ 1 ವಿಕೆಟ್ ಪಡೆದರೆ, ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಮುಂಬೈಯ ತುಷಾರ್ ದೇಶಪಾಂಡೆ 2, ಧವಳ್ ಕುಲಕರ್ಣಿ 1, ತನುಷ್ ಕೋಟಿಯಾನ್ 2, ಪ್ರಶಾಂತ್ ಸೋಲಂಕಿ 2, ಶಮ್ಸ್ ಮುಲಾನಿ 2, ಯಶಸ್ವಿ ಜೈಸ್ವಾಲ್ 1 ವಿಕೆಟ್‌ನಿಂದ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications