ವಿಜಯ್ ಹಜಾರೆ ಟ್ರೋಫಿ: ಶ್ರೇಯಸ್ ಐಯ್ಯರ್ ಶತಕ, ಮುಂಬೈಗೆ ಜಯ

ಜೈಪುರ್: ಜೈಪುರ್‌ನ ಕೆಎಲ್ ಸೈನಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 2, ಎಲೈಟ್ ಗ್ರೂಪ್ ಡಿ ಪಂದ್ಯದಲ್ಲಿ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮುಂಬೈ 6 ವಿಕೆಟ್ ಜಯ ಗಳಿಸಿದೆ. ನಾಯಕ ಶ್ರೇಯಸ್ ಐಯ್ಯರ್ ಶತಕದ ನೆರವಿನಿಂದ ಮುಂಬೈ ಸುಲಭ ಜಯ ಕಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಹಾರಾಷ್ಟ್ರ, ಯಶ್ ನಹರ್ 119, ಅಝಿಮ್ ಖಾಜಿ 104, ರುತುರಾಜ್ ಗಾಯಕ್ವಾಡ್ 19, ವಿಶಾಂತ್ ಮೋರೆ 8, ಎಸ್‌ಎಸ್ ಬಚವ್ 5 ರನ್ ಕೊಡುಗೆಯೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 279 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಮುಂಬೈ, ಯಶಸ್ವಿ ಜೈಸ್ವಾಲ್ 40, ಪೃಥ್ವಿ ಶಾ 34, ಶ್ರೇಯಸ್ ಐಯ್ಯರ್ 103, ಸೂರ್ಯಕುಮಾರ್ ಯಾದವ್ 29, ಶಿವಂ ದೂಬೆ 47, ಸರ್ಫರಾಜ್ ಖಾನ್ 15 ರನ್‌ನೊಂದಿಗೆ 47.2 ಓವರ್‌ಗೆ 4 ವಿಕೆಟ್ ಕಳೆದು 280 ರನ್ ಗಳಿಸಿತು.
ಮಹಾರಾಷ್ಟ್ರ ಇನ್ನಿಂಗ್ಸ್‌ನಲ್ಲಿ ಮುಂಬೈಯ ಧವಳ್ ಕುಲಕರ್ಣಿ 5, ಶಾರ್ದೂಲ್ ಠಾಕೂರ್ 1, ತುಷಾರ್ ದೇಶಪಾಂಡೆ 1 ವಿಕೆಟ್‌ನಿಂದ ಗಮನ ಸೆಳೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಸತ್ಯಜೀತ್ ಬಚವ್ 3, ಅಝಿಮ್ ಕಾಝಿ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications