Vijay Hazare Trophy: ವಿರಾಟ್, ರೋಹಿತ್ ಪಡೆಯುವ ಪಂದ್ಯ ಶುಲ್ಕದ ವಿವರ ಮತ್ತು ಗ್ರೂಪ್‌ಗಳ ಮಾಹಿತಿ
ವಿಜಯ್ ಹಜಾರೆ ಟ್ರೋಫಿ ಬುಧವಾರದಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ವಿಶ್ವದ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಈ ಬಾರಿ ದೇಶೀಯ ಟೂರ್ನಿಯಲ್ಲಿ ತಮ್ಮ ತಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತ ತಂಡದ ನಾಯಕ ಶುಭಮನ್ ಗಿಲ್ ಸಹ ಈ ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ದೇಶೀಯ ಟೂರ್ನಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.
ಈ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಭಾಗವಹಿಸುತ್ತಿವೆ. ಕರ್ನಾಟಕ ಹಾಗೂ ತಮಿಳು ನಾಡು ತಂಡಗಳು ಈ ಟೂರ್ನಿಯಲ್ಲಿ ಒಟ್ಟು 5 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಕರ್ನಾಟಕ 6ನೇ ಪ್ರಶಸ್ತಿಯ ಹುಡುಕಾಟದಲ್ಲಿದೆ. ಈ ವೇಳೆ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದ್ದು, ದೇಶೀಯ ಟೂರ್ನಿಯಲ್ಲಿ ಆಡಿದ ಆಟಗಾರನಿಗೆ ಎಷ್ಟು ಹಣ ಲಭಿಸುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಲೀಸ್ಟ್ ಎ ನಲ್ಲಿ ಆಡಲಾದ ಪಂದ್ಯಗಳ ಆಧಾರದ ಮೇಲೆ ವಿಜಯ್ ಹಜಾರೆ ಟ್ರೋಫಿಯಲ್ಲಿ ನೀಡುವ ಸಂಭಾವನೆಯನ್ನು ನಿರ್ಧರಿಸಲಾಗುತ್ತದೆ. ಲೀಸ್ಟ್ ಎನಲ್ಲಿ 41 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯವನ್ನು ಆಡಿದ ಆಟಗಾರನಿಗೆ ಪ್ರತಿ ಪಂದ್ಯಕ್ಕೆ 60 ಸಾವಿರ ರೂ. ನೀಡಲಾಗುತ್ತದೆ. ಇವರನ್ನು ಹಿರಿಯ ಆಟಗಾರರು ಎಂದು ಕರೆಯಲಾಗುತ್ತದೆ. ಇನ್ನು ಎರಡನೇ ವಿಭಾಗವನ್ನು ಮಧ್ಯಮ ಅನುಭವಿಗಳು ಎಂದು ಬೇರ್ಪಡಿಸಲಾಗಿದೆ. ಈ ವಿಭಾಗದಲ್ಲಿ 21 ರಿಂದ 40 ಪಂದ್ಯಗಳನ್ನು ಆಡಿದ ಆಟಗಾರರು ಪ್ರತಿ ಪಂದ್ಯಕ್ಕೆ 50 ಸಾವಿರ ಹಣವನ್ನು ಪಡೆಯಲಿದ್ದಾರೆ. ಇನ್ನು 20 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ ಅನುಭವಿಗಳಿಗೆ ಪ್ರತಿ ಪಂದ್ಯಕ್ಕೆ 40 ಸಾವಿರ ರೂ. ನೀಡಲಾಗುತ್ತದೆ.
ವಿರಾಟ್, ರೋಹಿತ್ ಪಡೆಯುವ ಹಣವೆಷ್ಟು?
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 41ಕ್ಕಿಂತ ಹೆಚ್ಚು ಲೀಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಇವರಿಬ್ಬರೂ ಪ್ರತಿ ಪಂದ್ಯಕ್ಕೆ 60 ಸಾವಿರ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ. ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಇವರಿಬ್ಬರೂ ಆಟಗಾರರು "ಎ+" ಗ್ರೇಡ್ ಹೊಂದಿದ್ದಾರೆ. ಹೀಗಾಗಿ ಇವರಿಬ್ಬರೂ ವಾರ್ಷಿಕ 7 ಕೋಟಿ ರೂ. ಪಡೆಯುತ್ತಾರೆ. ಆದರೂ ಸಹ ದೇಶೀಯ ಕ್ರಿಕೆಟ್‌ನಲ್ಲಿ ಇವರು ಉಳಿದ ಆಟಗಾರರು ಪಡೆಯವಷ್ಟೇ ಸಂಭಾವನೆಯನ್ನು ಪಡೆಯಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಬ್ಬರೂ ತಮ್ಮ ತಮ್ಮ ರಾಜ್ಯಗಳ ಪರ ಮೊದಲ ಎರಡು ಪಂದ್ಯಗಳಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಭ್ಯರಿದ್ದಾರೆ.
ವಿಜಯ್ ಹಜಾರೆ ಟ್ರೋಫಿಗಾಗಿ 38 ತಂಡಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿದ್ದು, ದೆಹಲಿ ಡಿ ಗುಂಪಿನಲ್ಲಿ ಸ್ಥಾನ ಪಡೆದರೆ, ಮಹಾರಾಷ್ಟ್ರ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಳಿದ ಗುಂಪುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಎ ಗುಂಪು, ಅಹಮದಾಬಾದ್: ಪುದುಚೇರಿ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಕರ್ನಾಟಕ, ಕೇರಳ, ತ್ರಿಪುರ
ಬಿ ಗುಂಪು, ರಾಜ್‌ಕೋಟ್: ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಬರೋಡಾ, ಹೈದರಾಬಾದ್, ಉತ್ತರ ಪ್ರದೇಶ, ಬಂಗಾಳ, ವಿದರ್ಭ
ಸಿ ಗುಂಪು, ಜೈಪುರ: ಮಹಾರಾಷ್ಟ್ರ, ಪಂಜಾಬ್, ಛತ್ತೀಸ್‌ಗಢ, ಗೋವಾ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮುಂಬೈ, ಸಿಕ್ಕಿಂ
ಡಿ ಗ್ರೂಪ್, ಬೆಂಗಳೂರು: ಗುಜರಾತ್, ಸರ್ವೀಸ್, ಆಂಧ್ರ, ದೆಹಲಿ, ಹರಿಯಾಣ, ರೈಲ್ವೇಸ್, ಒಡಿಶಾ, ಸೌರಾಷ್ಟ್ರ
ಪ್ಲೇಟ್ ಗ್ರೂಪ್: ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ಬಿಹಾರ, ಮಣಿಪುರ, ನಾಗಾಲ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications