Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋರ್ಟ್ ಕಟ್ಲೆ ಮರೆತು ಕ್ರಿಕೆಟ್ ನೋಡಲು ಬಂದ ಉದ್ಯಮಿ ಮಲ್ಯ

Vijay Mallya spotted on the first day of the test match between India and England

ಲಂಡನ್, ಸೆಪ್ಟೆಂಬರ್ 08:ಸಾವಿರಾರು ಕೋಟಿ ಸಾಲ ಮಾಡಿ ಭಾರತದಿಂದ ಲಂಡನ್ನಿಗೆ ಪರಾರಿಯಾಗಿರುವ ಉದ್ಯಮಿ ಮಲ್ಯ ಅವರು ಕೋರ್ಟ್ ಕಟ್ಲಿ ತೊಂದರೆ ಮರೆತು ನೆಮ್ಮದಿಯಿಂದ ಕ್ರಿಕೆಟ್ ನೋಡಲು ಬಂದ ಘಟನೆ ನಡೆದಿದೆ.

ದಕ್ಷಿಣ ಲಂಡನ್​ನ ಕೆನ್ನಿಂಗ್ಟನ್​ನ ಓವಲ್ ನಲ್ಲಿ ನಡೆದಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಪಂದ್ಯದ ಮೊದಲ ದಿನದ ಆಟವೌ ನೊಡಿ ಆನಂದಿಸಿದ್ದಾರೆ.

ಈ ನಡುವೆ ಮಾಧ್ಯಮದವರ ಮುಂದೆ ನಿಂತು, ನಾನು ಭಾರತಕ್ಕೆ ಹಿಂತಿರುಗಬೇಕಾದ ಬಗ್ಗೆ ನ್ಯಾಯಾಧೀಶರು ನಿರ್ಧಾರ ಕೈಗೊಳ್ಳುತ್ತಾರೆ. ನಾನು ಇಲ್ಲಿ ನಿಮಗೆ ಸಂದರ್ಶನ ನೀಡುವುದಿಲ್ಲ ಎಂದಿದ್ದಾರೆ.



ಮಲ್ಯ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಯತ್ನಿಸುತ್ತಿವೆ. ಮಲ್ಯ ಅವರ ಹಸ್ತಾಂತರ ಪ್ರಕರಣ ಕೋರ್ಟಿನಲ್ಲಿದೆ. ಈ ನಡುವೆ ನೀವು ಭಾರತಕ್ಕೆ ವಾಪಸ್ ಹೋಗುವುದು ಯಾವಾಗ ಎಂದು ಕೇಳಿದ ಮಾಧ್ಯಮ ಪ್ರತಿನಿಧಿಗೆ ಕೊಂಚ ಗರಂ ಆಗಿ ಮಲ್ಯ ಅವರು ಉತ್ತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಲು ನಿರಾಕರಿಸಿದರೂ ಪತ್ರಕರ್ತ ಅಲ್ಲೇ ನಿಂತಿರುವುದನ್ನು ಕಂಡು ಗರಂ ಆದ ಮಲ್ಯ, ಎನಾಫ್ ಇಸ್ ಎನಾಫ್ ನೀನು ಅಲ್ಲಿ ನಿಂತರೆ ನಾನು ಇಲ್ಲೇ ನಿಂತಿರುತ್ತೇನೆ. ಎಷ್ಟು ಸಮಯ ಹೀಗೆ ನಿಲ್ಲಬಲ್ಲೆ, ನಾನು ಯಾವುದ್ಡೆ ಮಾಧ್ಯಮಗಳಿಗೆ ಸಂದರ್ಶನ ನೀಡುವುದಿಲ್ಲ ಎಂದರು. ನಾನು ಭಾರತಕ್ಕೆ ಹಿಂತಿರುಗುವುದನ್ನು ನ್ಯಾಯಾಧೀಶರು ನಿರ್ಧಾರ ಮಾಡುತ್ತಾರೆ ಎಂದ ಉತ್ತರಿಸಿ ಅಲ್ಲಿಂದ ನಡೆದರು.

Story first published: Saturday, September 8, 2018, 15:47 [IST]
Other articles published on Sep 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+