ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 6 ರನ್‌ಗಳಿಗೆ ಆಲೌಟ್ ಆದ ಸಿಕ್ಕಿಂ!

ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶದ ವಿರುದ್ಧ ಸಿಕ್ಕಿಂ ಕೇವಲ 6 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಮಾಡಿದೆ.
ಸೂರತ್‌ನ ಖೋಲವರ್ ಜಿಮ್ಕಾನ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಸಿಕ್ಕಿಂ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್‌ಗಳಿಗೆ ಆಲೌಟ್ ಆಯಿತು. ಸಿಕ್ಕಿಂ ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್ ಗಳಿಗೆ ಆಲೌಟ್ ಆಗಿತ್ತು. ಎರಡೂ ಇನ್ನಿಂಗ್ಸ್‌ಗಳಿಂದ ಕೇವಲ 49 ರನ್ ಮಾತ್ರ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಮಧ್ಯ ಪ್ರದೇಶ 8 ವಿಕೆಟ್ ನಷ್ಟಕ್ಕೆ 414 ರನ್ ಕಲೆಹಾಕಿತ್ತು. ತಂಡದ ನಾಯಕ ಮನಲ್ ಚೌಹಾಣ್ 107 ಎಸೆತಗಳಲ್ಲಿ 170 ರನ್ ಗಳಿಸುವ ಮೂಲಕ ತಂಡ ದೊಡ್ಡ ಮೊತ್ತ ಕಲೆಹಾಕಲು ಕಾರಣವಾದರು. ಪ್ರತೀಕ್ ಶುಕ್ಲಾ ಕೂಡ 87 ಎಸೆತಗಳಲ್ಲಿ 86 ರನ್ ಗಳಿಸಿ ಮಿಂಚಿದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಸಿಕ್ಕಿಂ ಮಧ್ಯಪ್ರದೇಶದ ಬೌಲಿಂಗ್ ದಾಳಿಗೆ ತತ್ತರಿಸಿತು. 13 ಓವರ್ ಗಳಲ್ಲಿ ಕೇವಲ 43 ರನ್ ಗಳಿಸುವಷ್ಟರಲ್ಲಿ ಸಿಕ್ಕಿಂ ಆಲೌಟ್ ಆಗುವ ಮೂಲಕ ಫಾಲೋಆನ್‌ಗೆ ಸಿಲುಕಿತು. ಮಧ್ಯಪ್ರದೇಶದ ಆದಿತ್ಯ ಭಂಡಾರಿ 5 ವಿಕೆಟ್ ಪಡೆದರು, ಆಯಮ್ ಸರದಾನ 3 ವಿಕೆಟ್ ಪಡೆದು ಮಿಂಚಿದರು. ಇನ್ನುಳಿದ ಇಬ್ಬರು ಬ್ಯಾಟರ್ ರನೌಟ್ ಆದರು.
ಸಿಕ್ಕಿಂನ ಕರಣ್ 25 ರನ್ ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಎರಡಂಕಿ ಮೊತ್ತ ಗಳಿಸಲಿಲ್ಲ. ನಾಲ್ವರು ಶೂನ್ಯಕ್ಕೆ ಔಟ್ ಆದರು. ಈ ಮೂಲಕ ಸಿಕ್ಕಿಂ 371 ರನ್‌ಗಳ ಬೃಹತ್ ಹಿನ್ನಡೆ ಪಡೆಯಿತು.

ಎರಡನೇ ಇನ್ನಿಂಗ್ಸ್‌ನಲ್ಲಿ 6 ರನ್‌ಗಳಿಗೆ ಆಲೌಟ್
ಎರಡನೇ ಇನ್ನಿಂಗ್ಸ್ ಆರಂಭಿಸಿದ ಸಿಕ್ಕಿಂ ಮೊದಲನೇ ಇನ್ನಿಂಗ್ಸ್‌ಗಿಂದ ದಾರುಣ ಪ್ರದರ್ಶನ ನೀಡಿತು. ಕೇವಲ ಇಬ್ಬರು ಬ್ಯಾಟರ್ ಮಾತ್ರ ರನ್ ಗಳಿಸಿದರು. ಅವನೀಶ್ 4 ರನ್ ಗಳಿಸಿದರೆ, ಅಕ್ಷ್ಯದ್ 2 ರನ್ ಗಳಿಸಿದರು. ಉಳಿದ ಎಲ್ಲಾ ಆಟಗಾರರು ಶೂನ್ಯಕ್ಕೆ ಔಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದರು.
ಮಧ್ಯಪ್ರದೇಶದ ಗಿರಿರಾಜ್ ಶರ್ಮಾ 5 ವಿಕೆಟ್ ಪಡೆದರು. ಆಲಿಫ್ ಹಸನ್ 4 ವಿಕೆಟ್ ಪಡೆದರು. ಒಬ್ಬ ಆಟಗಾರ ರಿಟೈರ್ಡ್ ಹರ್ಟ್ ಆದರು. ಸಿಕ್ಕಿಂ ತಂಡವನ್ನು ಕೇವಲ 6 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಮಧ್ಯಪ್ರದೇಶ ಇನ್ನಿಂಗ್ಸ್ ಮತ್ತು 365 ರನ್‌ಗಳ ಬೃಹತ್ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications