Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Vijay Shankar: ದೇಶೀಯ ಕ್ರಿಕೆಟ್‌, ಐಪಿಎಲ್‌ಗೆ ವಿದಾಯ ಹೇಳಿದ ಸಿಎಸ್‌ಕೆ ಮಾಜಿ ಪ್ಲೇಯರ್

ಭಾರತದ ಪರ ಭರವಸೆಯ ಆಲ್‌ರೌಂಡರ್‌ ವಿಜಯ್‌ ಶಂಕರ್‌ ದೇಶೀಯ ಕ್ರಿಕೆಟ್‌ ಹಾಗೂ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಶುಕ್ರವಾರ ವಿಜಯ್‌ ಶಂಕರ್ ಅವರು ತಮ್ಮ ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ. ವಿದಾಯದ ವೇಳೆ ವಿಜಯ್ ಶಂಕರ್‌ ಅವರು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ), ಅವರ ಕುಟುಂಬಸ್ಥರಿಗೆ ಹಾಗೂ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ವಿಜಯ್ ಶಂಕರ್‌ ಹೊಸ ಅವಕಾಶಗಳ ಹುಡುಕಾಟ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ವಿಜಯ್‌ ಶಂಕರ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಕ್ರಿಕೆಟ್‌ ಅವರಿಗೆ ಬರೀ ಆಟವಾಗಿರಲಿಲ್ಲ. ಬದಲಿಗೆ ಜೀವನವೇ ಆಗಿತ್ತು ಎಂದು ಬರೆದಿದ್ದಾರೆ. ಭಾರತ 500ನೇ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದು ಹಾಗೂ 2019 ರ ವಿಶ್ವಕಪ್‌ನಲ್ಲಿ ಮೊದಲ ಎಸೆತದಲ್ಲಿ ವಿಕೆಟ್ ಪಡೆದದ್ದು ಸ್ಮರಣೀಯ ಕ್ಷಣ ಎಂದು ತಿಳಿಸಿದ್ದಾರೆ. ತಮ್ಮ ಮೇಲಿನ ಟೀಕೆಗಳಿಗೆ ಮೈದಾನದಲ್ಲಿ ಉತ್ತರ ನೀಡಿದ್ದ ವಿಜಯ್‌, ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರತಿಭೆ. ವಿದಾಯದ ಪೋಸ್ಟ್‌ನಲ್ಲಿ ವಿಜಯ್‌, ಬಿಸಿಸಿಐ, ಐಪಿಎಲ್ ತಂಡಗಳು ಮತ್ತು ತಮಿಳುನಾಡು ಕ್ರಿಕೆಟ್‌ಗೆ ಧನ್ಯವಾದಗಳನ್ನು ಅರ್ಪಿಸಿದರು.

Vijay Shankar

ಸ್ಮರಣೀಯ ಕ್ಷಣ

2019ರಲ್ಲಿ ನಡೆದ ವಿಶ್ವಕಪ್‌ನಲ್ಲಿ ವಿಜಯ್ ಶಂಕರ್‌ ಸ್ಥಾನ ಪಡೆದಿದ್ದರು. ಇವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದರು. ಅಲ್ಲದೆ ಮಧ್ಯಮ ವೇಗಿಯ ಪಾತ್ರವನ್ನು ಸಹ ವಹಿಸಿದ್ದರು. ಇವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಇಮಾಮ್-ಉಲ್-ಹಕ್ ವಿಕೆಟ್‌ ಪಡೆದು ಬೀಗಿದ್ದರು. ವಿಜಯ್ ಜನವರಿ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಜಯ್ ಶಂಕರ್‌ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು 12 ಏಕದಿನ ಪಂದ್ಯಗಳು ಮತ್ತು ಒಂಬತ್ತು ಟಿ20ಐಗಳನ್ನು ಆಡಿದ್ದಾರೆ.

ವಿಜಯ್ ಶಂಕರ್ ಸಾಧನೆ

ತಮಿಳುನಾಡು ಪರ ದೇಶೀಯ ಕ್ರಿಕೆಟ್‌ನಲ್ಲಿ ಕಣಕ್ಕೆ ಇಳಿದಿದ್ದ ವಿಜಯ್‌ ಶಂಕರ್ ಹಲವು ವಯೋಮಿತಿಯ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದ ಆಟಗಾರ. ಇವರು ಆಡಿದ 77 ಪ್ರಥಮ ದರ್ಜೆ ಪಂದ್ಯಗಳಲ್ಲಿ 4253 ರನ್‌ಗಳನ್ನು ಗಳಿಸಿದ್ದು 43 ವಿಕೆಟ್‌ ಕಬಳಿಸಿದ್ದಾರೆ. ಇನ್ನು 112 ಲಿಸ್ಟ್ ಎ ಪಂದ್ಯಗಳಲ್ಲಿ 2790 ರನ್‌ಗಳು ಮತ್ತು 73 ವಿಕೆಟ್‌ ಪಡೆದಿದ್ದಾರೆ. 159 ಟಿ20 ಪಂದ್ಯಗಳಲ್ಲಿ 2583 ರನ್‌ಗಳು ಮತ್ತು 38 ವಿಕೆಟ್‌ ಉರುಳಿಸಿದ್ದಾರೆ.

35 ವರ್ಷದ ವಿಜಯ್ ಶಂಕರ್ ಭಾರತದ ಪರ 12 ಏಕದಿನ ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 223 ರನ್‌ ಕಲೆ ಹಾಕಿದ್ದಾರೆ. ಅಲ್ಲದೆ 4 ವಿಕೆಟ್‌ ಪಡೆದಿದ್ದಾರೆ. ಇನ್ನು 9 ಟಿ20 ಪಂದ್ಯಗಳಲ್ಲಿ 101 ರನ್‌ ಸಿಡಿಸಿದ್ದು, 5 ವಿಕೆಟ್‌ ಉರುಳಿಸಿದ್ದಾರೆ. ಇವರು ಆಡಿದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಿ 2 ವಿಕೆಟ್‌ ಪಡೆದಿದ್ದರು. ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತ್ತು.

Story first published: Friday, May 22, 2026, 22:37 [IST]
Other articles published on May 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+