
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರರು, ಕಾಮೆಂಟೆಟರ್ ತಮ್ಮ ಆಯ್ಕೆಯ ತಂಡಗಳನ್ನು ಪ್ರಕಟಿಸುತ್ತಿದ್ದಾರೆ. ಗಂಭೀರ್ ಅವರು ತಮ್ಮ ಆಯ್ಕೆಯ ಹನ್ನೊಂದು ಮಂದಿಯನ್ನು ಹೆಸರಿಸಿದ್ದರು ಗಂಭೀರ್ ಆಯ್ಕೆಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಮಯಾಂಕ್ ಅಗರವಾಲ್ ಹೆಸರು ಕಾಣಿಸಿಕೊಂಡಿರಲಿಲ್ಲ. ಆದರೆ, ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರ ತಂಡದಲ್ಲಿ ಹಾರ್ದಿಕ್ ಪಾಂಡ್ಯಕ್ಕೆ ಸ್ಥಾನ ನೀಡಿದ್ದಾರೆ.
ಪ್ರವಾಸಿ ಇಂಗ್ಲೆಂಡ್ ಹಾಗೂ ಅತಿಥೇಯ ಭಾರತ ನಡುವೆ ಚೆನ್ನೈನಲ್ಲಿ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ನಿರೀಕ್ಷೆಯಂತೆ ಮಯಾಂಕ್ ಬದಲಿಗೆ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡಾ ಇವರಿಬ್ಬರೇ ನಾಳೆ ಓಪನರ್ಸ್ ಎಂದಿದ್ದಾರೆ. ಇನ್ನು ವೃದ್ಧಿಮಾನ್ ಸಹಾಗಿಂತ ಫಾರ್ಮ್ ನಲ್ಲಿರುವ ರಿಷಬ್ ಪಂತ್ ಅವರೆ ಸೂಕ್ತ ಎಂದಿದ್ದಾರೆ. ಕೊಹ್ಲಿ ಕೂಡಾ ಪಂತ್ ಅವರ ಆಯ್ಕೆಯನ್ನು ಸ್ಪಷ್ಟಪಡಿಸಿದ್ದಾರೆ.
ಸ್ಪಿನ್ನರ್ ಆಯ್ಕೆಯಲ್ಲಿ ಅಕ್ಷರ್ ಪಟೇಲ್ ಬದಲಿಗೆ ಅಶ್ವಿನ್ ಹಾಗೂ ಕುಲದೀಪ್ ಯಾದವ್ ಮೊದಲ ಆಯ್ಕೆ ಎಂದಿದ್ದಾರೆ. ಜೊತೆಗೆ ಇಶಾಂತ್ ಶರ್ಮ ಬದಲಿಗೆ ಮೊಹಮ್ಮದ್ ಸಿರಾಜ್ ಮತ್ತು ಜಸ್ ಪ್ರೀತ್ ಬೂಮ್ರಾ ಪ್ರಮುಖ ವೇಗಿಗಳಾಗಿ ಹೆಸರಿಸಿದ್ದಾರೆ.
ಕಾಂಬ್ಳಿ ಆಯ್ಕೆಯ ಹನ್ನೊಂದು ಮಂದಿ ತಂಡ: ಶುಭ್ಮನ್ ಗಿಲ್, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ/ ವಾಷಿಂಗ್ಟನ್ ಸುಂದರ್, ಆರ್ ಅಶ್ವಿನ್, ಕುಲದೀಪ್ ಯಾದವ್, ಜಸ್ ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್.