For Quick Alerts
ALLOW NOTIFICATIONS  
For Daily Alerts
 

Vinod Kambli: ವಿನೋದ್ ಕಾಂಬ್ಳಿ ಬದುಕಿನಲ್ಲಿ ಖುಷಿ!

ಇತ್ತೀಚೆಗೆ ಭಾರತ ತಂಡದ ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ ಭಾರೀ ಸುದ್ದಿಯಲ್ಲಿದ್ದಾರೆ. ಕಳೆದ ಕೆಲದಿನಗಳಿಂದ ವಿನೋದ್ ಕಾಂಬ್ಳಿ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಹಲವು ಮಾಜಿ ಕ್ರಿಕೆಟಿಗರು ವಿನೋದ್ ಕಾಂಬ್ಳಿ ನೆರವಿಗೆ ಬಂದಿದ್ದಾರೆ. ಆದರೂ, ನೋವಿನ ಕಡಲಿನಲ್ಲಿ ತೇಲುತ್ತಿದ್ದ ವಿನೋದ್ ಕಾಂಬ್ಳಿ ಈಗ ತಮ್ಮ ಜೀವನದಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ. ವಿನೋದ್ ಕಾಂಬ್ಳಿ ಪತ್ನಿ ಆಂಡ್ರಿಯಾ ಹೆವಿಟ್ ವಿಷಯೊಂದನ್ನು ಬಹಿರಂಗಪಡಿಸಿದ್ದಾರೆ.

ವಿದೇಶಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ವಿನೋದ್ ಕಾಂಬ್ಳಿ 2006ರಲ್ಲಿ ಎರಡನೇ ಬಾರಿಗೆ ಮದುವೆಯಾಗಿದ್ದರು. ಇದಾದ ಬಳಿಕ 2014ರಲ್ಲಿ ಇಬ್ಬರೂ ಕ್ರಿಶ್ಚಿಯನ್ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹವಾಗಿದ್ದರು. ವಿನೋದ್ ಕಾಂಬ್ಳಿ ಮತ್ತು ಆಂಡ್ರಿಯಾ ದೀರ್ಘಕಾಲ ಜೊತೆ ಜೊತೆಯಾಗಿ ಜೀವನ ನಡೆಸಿದ್ದರು. ಆದರೆ, 2023ರಲ್ಲಿ ಆಂಡ್ರಿಯಾ ಹೆವಿಟ್ ಅವರು ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿದ್ದರು.

Vinod Kambli s wife Andrea Hewitt withdraws divorce petition

ಒಂದು ಕಾಲದಲ್ಲಿ ವಿನೋದ್ ಕಾಂಬ್ಳಿ ಮೇಲೆ ಅಸಮಾಧಾನಗೊಂಡಿದ್ದ ಆಂಡ್ರಿಯಾ ವಿಚ್ಛೇದನ ಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿದ್ದರು. ಅದರೀಗ ಆಂಡ್ರಿಯಾ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದು, ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಸಲ್ಲಿದ್ದ ಅರ್ಜಿಯನ್ನು ಹಿಂಪಡೆಯಲು ಮುಂದಾಗಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಆಂಡ್ರಿಯಾ ಅವರು ಕಾಂಬ್ಳಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡುವಾಗ ಆಂಡ್ರಿಯಾ 2023ರಲ್ಲಿ ವಿನೋದ್ ಕಾಂಬ್ಳಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆಂಡ್ರಿಯಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿರುವುದನ್ನು ತಿಳಿಸಿದ್ದಾರೆ.

ವಿಚ್ಛೇದನ ಅರ್ಜಿ ಸಲ್ಲಿಸಿದ ಬಳಿಕ ಕಾಂಬ್ಳಿಯ ಮನೆಯಿಂದ ಹೊರ ನಡೆದಿದ್ದೆ. ಕಾಂಬ್ಳಿ ಜೊತೆಗೆ ಮಾತನಾಡುವುದನ್ನು ಕೂಡ ನಿಲ್ಲಿಸಿದ್ದೆ. ಆದರೆ, ಮನೆಯಿಂದ ಹೊರಬಂದ ಮೇಲೆ ನಾನು ಕಾಂಬ್ಳಿಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಅವರು ಊಟ ಮಾಡಿದ್ದಾರೋ? ಇಲ್ಲವೋ?, ಅವರ ಆರೋಗ್ಯ ಹೇಗಿದೆ ಎಂಬುದರ ಬಗ್ಗೆ ಯೋಚನೆ ಮಾಡುತ್ತಿದ್ದೆ. ಈಗ ಕಾಂಬ್ಳಿ ಪರಿಸ್ಥಿತಿ ನೋಡಿದಾಗ ಅವರಿಗೆ ನನ್ನ ಅವಶ್ಯಕತೆ ಇದೆ ಎಂದು ಅರ್ಥವಾಯಿತು. ನನಗೆ ಕಾಂಬ್ಳಿ ಮಗುವಿನಂತೆ, ನಾನು ಅವರನ್ನು ಬಿಟ್ಟು ಹೋಗುವುದು ಸಾಧ್ಯವಿಲ್ಲ ಎಂದು ಆಂಡ್ರಿಯಾ ಹೇಳಿದ್ದಾರೆ.

ಕಾಂಬ್ಳಿ ವೃತ್ತಿಜೀವನ

ಒಂದು ಕಾಲದಲ್ಲಿ ವಿನೋದ್ ಕಾಂಬ್ಳಿ ಕ್ರಿಕೆಟ್‌ ಮೈದಾನದಲ್ಲಿ ಅದ್ಭುತ ಬ್ಯಾಟರ್ ಆಗಿ ಮಿಂಚಿದ್ದವರು. ಟೀಮ್ ಇಂಡಿಯಾ ಪರ 1991ರಲ್ಲಿ ಪದಾರ್ಪಣೆ ಮಾಡಿ ಅವರು 17 ಟೆಸ್ಟ್ ಪಂದ್ಯಗಳಲ್ಲಿ 1084 ರನ್ ಗಳಿಸಿದ್ದು, 4 ಶತಕ, 3 ಅರ್ಧ ಶತಕಗಳನ್ನು ಹೊಂದಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 104 ಪಂದ್ಯಗಳನ್ನು ಆಡಿದ್ದು, 2477 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 14 ಅರ್ಧಶತಗಳು ಸೇರಿವೆ. 2000ರಲ್ಲಿ ಕಳಪೆ ಪ್ರದರ್ಶನದ ಕಾರಣದಿಂದಾಗಿ ಅವರನ್ನು ತಂಡದಿಂದ ಕೈ ಬಿಡಲಾಯಿತು. 2000 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೊನೆ ಬಾರಿಗೆ ಭಾರತ ಪರ ಆಡಿದ್ದರು. ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್‌ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಮಾಡಿದ್ದಾರೆ.

Story first published: Tuesday, January 28, 2025, 15:09 [IST]
Other articles published on Jan 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+