ವಿನೂ ಮಂಕಡ್ ಟ್ರೋಫಿ: ಗುಜರಾತ್ ವಿರುದ್ಧ ತಮಿಳುನಾಡಿಗೆ ಜಯ

ನವದೆಹಲಿ: ನವದೆಹಲಿಯ ಕರ್ನೇಲ್ ಸಿಂಗ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 29ರ ಗುರುವಾರ ನಡೆದ ಗುಜರಾತ್ ಮತ್ತು ತಮಿಳುನಾಡು ನಡುವಿನ ವಿನೂ ಮಂಕಡ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ತಮಿಳುನಾಡು ತಂಡ 7 ವಿಕೆಟ್ ಜಯ ಗಳಿಸಿದೆ. ತಂಡದ ಬ್ಯಾಟ್ಸ್‌ಮನ್-ನಾಯಕ ಆರ್ ವಿಮಲ್ ಕುಮಾರ್, ಅರ್ಥ ಶತಕ ಮತ್ತು ವಿ ಅರುಣಾಂಚಲಮ್ ಮತ್ತು ಮನವ್ ಪರಖ್ ಮಾರಕ ಬೌಲಿಂಗ್‌ನೊಂದಿಗೆ ತಮಿಳುನಾಡು ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ತಂಡ, ಕರ್ಣ್ ಠಕ್ಕರ್ 1, ಆರ್ಯ ದೇಶಾಯ್ 15, ಅಶುತೋಷ್ ಪಟೆಲ್ 6, ವೇದ್ ಪಟೆಲ್ 40, ಯಶ್ ಸೋಲಂಕಿ 29, ಕ್ರಿಶ್ ಅಮಿತ್ ಗುಪ್ತಾ 22, ಯಶ್ ತಾಂದೆಲ್ 6, ಹರ್ಷಿಲ್ ಪಟೇಲ್ 7 ರನ್‌ನೊಂದಿಗೆ 39.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 148 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ತಮಿಳುನಾಡು, ವಿಪಿ ಅಮಿತ್ ಸಾತ್ವಿಕ್ 13, ಆರ್ ವಿಮಲ್ ಕುಮಾರ್ 82, ಬಿ ಸಚಿನ್ 20, ಮನವ್ ಪ್ರಕಾಶ್ 9 ರನ್‌ನೊಂದಿಗೆ 27.4 ಓವರ್‌ಗೆ 3 ವಿಕೆಟ್ ಕಳೆದು 154 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಗುಜರಾತ್ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿನ ವಿ ಅರುಣಾಂಚಲಮ್ 23 ರನ್‌ಗೆ 3, ಮನವ್ ಪ್ರಕಾಶ್ 23 ರನ್‌ಗೆ 4 ವಿಕೆಟ್, ಪಿ ವಿಘ್ನೇಶ್ 1, ವಿಎಸ್ ಕಾರ್ತಿಕ್ ಮಣಿಕಂಠಣ್ 1 ವಿಕೆಟ್ ಪಡೆದರೆ, ತಮಿಳುನಾಡು ಇನ್ನಿಂಗ್ಸ್‌ನಲ್ಲಿ ಗುಜರಾತ್‌ನ ಶೆನ್ ಪಟೆಲ್ 1, ಕ್ರಿಶ್ ಅಮಿತ್ ಗುಪ್ತಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications