Samit Dravid: ವಿನೂ ಮಂಕಡ್ ಟ್ರೋಫಿ ಸಂಭಾವ್ಯ ಕರ್ನಾಟಕ ತಂಡದಲ್ಲಿ ರಾಹುಲ್ ದ್ರಾವಿಡ್ ಪುತ್ರ
ಕನ್ನಡಿಗ ರಾಹುಲ್ ದ್ರಾವಿಡ್ ಅವರು ಸದ್ಯ ಭಾರತ ತಂಡದ ಹಾಲಿ ಮುಖ್ಯ ಕೋಚ್ ಆಗಿದ್ದಾರೆ. ಇದಕ್ಕೂ ಮುನ್ನ ಅವರು ಕರ್ನಾಟಕ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ರಾಹುಲ್ ದ್ರಾವಿಡ್ "ದಿ ವಾಲ್' ಎಂದೇ ಖ್ಯಾತರಾಗಿದ್ದಾರೆ.
ಭಾರತ ಮತ್ತು ಕರ್ನಾಟಕ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಅವರ ಕೊಡುಗೆ ಅಪಾರವಾಗಿದ್ದು, ಅಂತಾರಾಷ್ಟ್ರೀಯ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರು.
ಇದೀಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರನ್ನು 19 ವಯೋಮಿತಿಯ ವಿನೂ ಮಂಕಡ್ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ಸಂಭಾವ್ಯ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದೇ ವೇಳೆ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20ಯಲ್ಲಿ ಗಮನ ಸೆಳೆದ ಕಾರ್ತಿಕ್ ಎಸ್‌ಯು, ಹಾರ್ದಿಕ್ ರಾಜ್ ಕೂಡ ವಿನೂ ಮಂಕಡ್ ಟ್ರೋಫಿಗೆ ಕರ್ನಾಟಕ ಕರ್ನಾಟಕದ 30 ಆಟಗಾರರ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಕ್ಟೋಬರ್ 12ರಿಂದ ಟೂರ್ನಿ ಆರಂಭವಾಗಲಿದೆ.
ವಿನೂ ಮಂಕಡ್ ಟ್ರೋಫಿ: ಕರ್ನಾಟಕ ಸಂಭಾವ್ಯ ತಂಡ
ಧೀರಜ್ ಜೆ ಗೌಡ, ಸಮಿತ್ ದ್ರಾವಿಡ್, ಕಾರ್ತಿಕ್ ಎಸ್‌ಯು, ಹರ್ಷಿಲ್ ಧರ್ಮನಿ, ಶಿವಂ ಎಂಬಿ, ಧುವ್ ಪ್ರಭಾಕರ್, ಹಾರ್ದಿಕ್ ರಾಜ್, ಯುವರಾಜ್ ಅರೋರಾ (ವಿಕೆಟ್ ಕೀಪರ್), ಆರವ್ ಮಹೇಶ್, ಆದಿತ್ಯ ನಾಯರ್, ಧನುಷ್ ಗೌಡ, ಸಮರ್ಥ ನಾಗರಾಜ್, ಶಿಖರ್ ಶೆಟ್ಟಿ, ಸೃಜನ್ ನಂದನ್, ನಿಶ್ಚಿತ್ ಎನ್ ಪೈ, ಪ್ರಖರ ಚತುರ್ವೇದಿ, ಕೃಷಿವ್ ಬಜಾಜ್, ಹರಿ ರಾಜೀವ್, ಕಾರ್ತಿಕೇಯ ಕೆಪಿ, ಇಶಾನ್ ಎಸ್, ಹರ್ಷವರ್ಧನ್ ಖೂಬಾ, ಮಾಧವ ಧಾರವಾಡಕರ್, ಮಂಕಳೇಶ್ ಆರ್.ಜೆ, ವಿವೇಕ್ ನಾಯಕ್, ಸಮರ್ಥ, ಅಗಸ್ತ್ಯ ಎಸ್, ಹರ್ಷಿತ್ ಗೌಡ, ರಾಗ್ ಪುಂಜ, ಸಿದ್ಧಾರ್ಥ್ ಎ, ಕೈವಲ್ಯ ಮಿಶ್ರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications