Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

6, 0, 6, 2, 4: 24 ಎಸೆತಗಳಲ್ಲಿ 80 ರನ್ ಬಾರಿಸಿ ಅಬ್ಬರಿಸಿದ ಯೂಸೂಫ್ ಪಠಾಣ್: ಮೊಹಮ್ಮದ್ ಆಮಿರ್ ಓವರ್‌ನಲ್ಲಿ 24 ರನ್!: ವಿಡಿಯೋ

ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಎಂಥಾ ಸ್ಪೋಟಕ ಆಟಗಾರ ಎನ್ನುವುದು ಭಾರತೀಯ ಅಭಿಮಾನಿಗಳಿಗೆ ವಿವರಿಸುವ ಅಗತ್ಯವಿಲ್ಲ. ಲಯಕ್ಕೆ ಬಂದರೆ ಎದುರಾಳಿ ಎಂಥಾಧ್ದೇ ಬೌಲರ್ ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಬೌಂಡರಿ ಸಿಕ್ಸರ್ ಸಿಡಿಸುವ ಸ್ಪೋಟಕ ಬ್ಯಾಟರ್ ಪಠಾಣ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹಾಗೂ ಐಪಿಎಲ್‌ನಿಂದ ದೂರವಾಗಿ ಬಹಳ ವರ್ಷವಾಗಿರುವ ಅವರು 'Zim Afro t10 ಲೀಗ್‌ನಲ್ಲಿ ಸ್ಪೋಟಕ ಪ್ರದರ್ಶನ ನೀಡಿ ಸುದ್ದಿಯಾಗಿದ್ದಾರೆ.

ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಆಯೋಜಿಸುವ ಜಿಮ್-ಆಫ್ರೋ ಟಿ10 ಲೀಗ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಭಾಗಿಯಾಗಿದ್ದಾರೆ. ಈ ಟೂರ್ನಿಯ ಕ್ವಾಲಿಫಯರ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತನ್ನಲ್ಲಿ ಇನ್ನು ಕೂಡ ಬ್ಯಾಟಿಂಗ್ ಸಾಮರ್ಥ್ಯ ಇದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಪಠಾಣ್. ಡರ್ಬನ್ ಕಲಂದರ್ ಹಾಗೂ ಜೋಬರ್ಗ್ ಬಫೆಲೋಸ್ ನಡುವಿನ ಪಂದ್ಯದಲ್ಲಿ ಈ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

Vintage Yusuf Pathan back in Zim Afro T10: hit 80 runs from 26 deliveries: video

ಈ ಪಂದ್ಯದಲ್ಲಿ ಎದುರಾಳಿ ಡರ್ಬನ್ ಕಲಂದರ್ ತಂಡದಲ್ಲಿದ್ದ ಆಡುತ್ತಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಮಿರ್ ಅವರ ಒಂದೇ ಓವರ್‌ನಲ್ಲಿ 24 ರನ್‌ಗಳನ್ನು ಚಚ್ಚುವ ಮೂಲಕ ತನ್ನ ತಂಡದ ರೋಮಾಂಚಕಾರಿ ಗೆಲುವಿಗೆ ಕಾರಣವಾಗಿದ್ದಾರೆ. ಮೊಹಮ್ಮದ್ ಆಮಿರ್ ಅವರ ಒಂದು ಓವರ್‌ನಲ್ಲಿ ಮೂವರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ ರೌದ್ರಾವತಾರ ತಾಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಈಗ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಯೂಸುಫ್ ಪಠಾಣ್ ಕೇವಲ 26 ಎಸೆತಗಳನ್ನು ಎದುರಿಸಿದ್ದು ಭರ್ಜರಿ 80 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 9 ಅಮೋಘ ಸಿಕ್ಸರ್‌ಗಳು ಸೇರಿದೆ. ಯೂಸುಫ್ ಪಠಾಣ್ ಅವರ ಈ ಅಮೋಘ ಪ್ರದರ್ಶನದಿಂದಾಗಿ ಅವರು ಪ್ರತಿನಿಧಿಸುತ್ತಿರುವ ಜೊಬರ್ಗ್ ಬಫಲೋಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ವಿಡಿಯೋ ಇಲ್ಲಿದೆ

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಡರ್ಬನ್ ಕಲಂದರ್ಸ್ ತಂಡ 10 ಓವರ್‌ಗಳಲ್ಲಿ 140/4 ರನ್‌ಗಳಿಸಿ ಬೃಹತ್ ಮೊತ್ತದ ಗುರಿಯನ್ನು ಮುಂದಿಟ್ಟಿತ್ತು. ಇದನ್ನು ಬೆನ್ನಟ್ಟಿದ ಜೋಬರ್ಗ್ ಬಫೆಲೋಸ್ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ. ಕೊನೆಯ ಮೂರು ಓವರ್‌ಗಳಲ್ಲಿ ಬಫೆಲೋಸ್ ತಂಡಕ್ಕೆ ಬರೊಬ್ಬರಿ 60 ರನ್‌ಗಳ ಅಗತ್ಯವಿತ್ತು. ಈ ಸಂದರ್ಬದಲ್ಲಿ 8ನೇ ಓವರ್ ಎಸೆದ ಮೊಹಮ್ಮದ್ ಆಮಿರ್ಓವರ್‌ನಲ್ಲಿ 6, 6, 0, 6, 2, 4 ರನ್‌ಗಳನ್ನು ಬಾರಿಸಿದ್ದಲ್ಲದೆ ಒಂದು ವೈಡ್ ಕೂಡ ನೀಡಿದ ಕಾರಣ ಒಂದೇ ಓವರ್‌ನಲ್ಲಿ 25 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು ಪಠಾಣ್.

ನಂತರ ಬ್ರಾಡ್ ಎವನ್ಸ್ ಎಸೆದ ಓವರ್‌ನಲ್ಲಿ ನಾಲ್ಕು ಎಸೆತ ಎದುರಿಸಿದ ಪಠಾಣ್ ಎರಡು ಸಿಕ್ಸರ್ ಒಂದು ಬೌಂಡರಿ ಸಿಡಿಸಿದ್ದರು. ಇನ್ನು ಕೊನೆಯ ಓವರ್‌ನಲ್ಲಿ ಜೋಬರ್ಗ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಮುಷ್ಫಿಕರ್ ರಹೀಮ್ ಮೊದಲ ಎಸೆತದಲ್ಲಿ ಒಂಟಿ ರನ್‌ಗಳಿಸಿ ಪಠಾಣ್‌ಗೆ ಕ್ರೀಸ್ ನೀಡಿದರು. ನಂತರ ಮುಂದಿನ ನಾಲ್ಕು ಎಸೆತಗಳಲ್ಲಿ ಕ್ರಮವಾಗಿ 6,4,6,4 ಬಾರಿಸಿ ಜೋಬರ್ಗ್ ಬಫೆಲೋಸ್ ತಂಡಕ್ಕೆ ಅಭೂತಪೂರ್ವ ಗೆಲುವಿನ ಉಡುಗೊರೆ ನೀಡಿದರು.

Story first published: Friday, July 28, 2023, 23:01 [IST]
Other articles published on Jul 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+