ಕ್ರಿಕೆಟ್ ಮೈದಾನದಲ್ಲಿ ಅನೇಕರು ಅದ್ಭುತ ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಈಗ ಬ್ಯಾಟಿಂಗ್ ಹಾಗೂ ಬೌಲಿಂಗ್ ನಷ್ಟೇ ಫೀಲ್ಡಿಂಗ್‌ಗೂ ಮಹತ್ವ ಸಿಕ್ಕಿದೆ. ವಿಶ್ವದಲ್ಲಿ ಅದೆಷ್ಟೋ ಜನ ಸ್ಟಾರ್ ಫೀಲ್ಡರ್ ಗಳು ಹುಟ್ಟಿದ್ದಾರೆ. ಅದರಲ್ಲಿ ಮುಂಚಣಿಯಲ್ಲಿ ಕಾಣಿಸಿಕೊಳ್ಳುವವರೆ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್..
ಈಗಿನ ಆಟಗಾರರು ಉತ್ತಮ ಫೀಲ್ಡಿಂಗ್‌ಗಾಗಿ ತಮ್ಮ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ನೀಡುತ್ತಾರೆ. ಈ ದಿನಗಳಲ್ಲಿ ಆಡಲಾಗುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಈಗ ಅದ್ಭುತ ಕ್ಯಾಚ್ ಕಂಡು ಬಂದಿದೆ. ಈ ಕ್ಯಾಚ್ ಹಿಡಿಯುವಲ್ಲಿ ಒಬ್ಬರಲ್ಲ ಇಬ್ಬರ ಫೀಲ್ಡರ್ ಗಳು ಭಾಗಿಯಾಗಿದ್ದರು. ಇಬ್ಬರು ಫೀಲ್ಡರ್‌ಗಳು ಈ ಅದ್ಭುತ ಕ್ಯಾಚ್ ಅನ್ನು ಪೂರ್ಣಗೊಳಿಸಿದರು.

ಅಂದಹಾಗೆ ಐಪಿಎಲ್ ನಲ್ಲಿ ಹಾಗೂ ಹಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಂಡರಿ ಲೈನ್ ನಲ್ಲಿ ಮುಗಿಲೆತ್ತರದ ಸಿಕ್ಸರ್ ತಡೆಯಲು ಹೋಗಿ ಬೌಂಡರಿ ಗೆರೆಯನ್ನು ದಾಟಿ, ಚೆಂಡನ್ನು ಆಗಸದಲ್ಲಿ ಎಸೆದಾಗ ಇನ್ನೊಬ್ಬ ಆಟಗಾರ ಕ್ಯಾಚ್ ಹಿಡಿದದ್ದನ್ನು ನೋಡಿರಬಹುದು. ಆದರೆ ಕೌಂಟಿಯಲ್ಲಿ ಹಿಡಿದ ಕ್ಯಾಚ್ ನ್ನು ನೋಡುವುದು ತುಂಬಾನೆ ವಿರಳ.
ಕ್ಯಾಚ್‌ನ ವೀಡಿಯೊವನ್ನು ಕೌಂಟಿ ಚಾಂಪಿಯನ್‌ನ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ. ಸರ್ರೆ ಮತ್ತು ನಾರ್ಥಾಂಪ್ಟನ್‌ಶೈರ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಈ ಅದ್ಭುತ ಕ್ಯಾಚ್ ಹಿಡಿಯಲಾಗಿದೆ. ಬೌಲರ್ ಎಸೆದ ಎಸೆತವನ್ನು ಬ್ಯಾಟ್ಸ್ ಮನ್ ಡಿಫೆನ್ಸ್ ಮಾಡಲು ಹೋಗುತ್ತಾನೆ. ಆದರೆ ಚೆಂಡು ಬ್ಯಾಟ್‌ನ ಹೊರ ಅಂಚಿಗೆ ಮುತ್ತಿಟ್ಟು ಸ್ಲಿಪ್ ಫೀಲ್ಡರ್ ಕಡೆಗೆ ಹೋಗುತ್ತದೆ.
ಮೊದಲ ಸ್ಲಿಪ್ ಗೆ ಇದ್ದ ಕ್ಯಾಚ್ ನ್ನು ಎರಡನೇ ಸ್ಲಿಪ್ ಫೀಲ್ಡರ್ ಡೈವಿಂಗ್ ಮೂಲಕ ಅದನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ಡೈವ್ ಬಿದ್ದಾಗ ಚೆಂಡು ಫೀಲ್ಡರ್ ಕೈಯಿಂದ ಜಾರಿ ನೆಲಕ್ಕೆ ಅಪ್ಪಳಿಸಿಯೇ ಬಿಟ್ಟಿತೇನು ಎಂದೇ ಎಲ್ಲರು ಭಾವಿಸುತ್ತಾರೆ. ಆದರೆ ಚೆಂಡು ಕೈ ತಪ್ಪಿದನ್ನು ಪಕ್ಕದಲ್ಲಿದ್ದ ವಿಕೆಟ್ ಕೀಪರ್ ಚಾಣಾಕ್ಷತನ ತೋರಿ ಹಿಡಿಯುತ್ತಾನೆ.
ಈ ಕ್ಯಾಚ್ ನೋಡಿದ ನಂತರ ಬ್ಯಾಟ್ಸ್‌ಮನ್ ಕೂಡ ಸಂಪೂರ್ಣವಾಗಿ ಆಶ್ಚರ್ಯಚಕಿತನಾಗುತ್ತಾನೆ. ಈ ರೀತಿಯಾಗಿ, ಇಬ್ಬರು ಫೀಲ್ಡರ್‌ಗಳು ಒಟ್ಟಿಗೆ ಕ್ಯಾಚ್ ತೆಗೆದುಕೊಳ್ಳುತ್ತಾರೆ. ಚೆಂಡು ನೆಲದಿಂದ ಸ್ವಲ್ಪ ಮೇಲಿದ್ದು, ಕೀಪರ್ ಚೆಂಡನ್ನು ಹಿಡಿಯುವ ಮೂಲಕ ಕ್ಯಾಚ್ ಅನ್ನು ಪೂರ್ಣಗೊಳಿಸುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು.
ಸರ್ರೆ ಮತ್ತು ನಾರ್ಥಾಂಪ್ಟನ್‌ಶೈರ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ, ಟಾಸ್ ಗೆದ್ದ ಸರ್ರೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾರ್ಥಾಂಪ್ಟನ್‌ಶೈರ್ ಪಂದ್ಯದ ಎರಡನೇ ದಿನವೂ ಮೊದಲ ಇನಿಂಗ್ಸ್ ಆಡುತ್ತಿದೆ. ಈ ಪಂದ್ಯದಲ್ಲಿ ಭಾರತೀಯ ಮೂಲದ ಸಾಯಿ ಸುದರ್ಶನ್ ಸರ್ರೆ ಪರ ಆಡುತ್ತಿದ್ದಾರೆ.
ಇದು ಸುದರ್ಶನ್ ಅವರ ಚೊಚ್ಚಲ ಕೌಂಟಿ ಪಂದ್ಯ. ಇದಲ್ಲದೇ ಭಾರತದ ಬ್ಯಾಟ್ಸ್ ಮನ್ ಕರುಣ್ ನಾಯರ್ ನಾರ್ಥಾಂಪ್ಟನ್ ಶೈರ್ ಪರ ಆಡುತ್ತಿದ್ದಾರೆ. ಅಲ್ಲದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಾಧನೆ ಮಾಡಿದ್ದಾರೆ.