Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Viral video: ಬೆನ್‌ ಫಾಕ್ಸ್‌ ವಿಕೆಟ್‌ ಕೀಪಿಂಗ್ ನೋಡಿದರೆ ನಗು ನಿಲ್ಲುವುದೇ ಇಲ್ಲ

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವಾದ ಗುರುವಾರ ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌ ನಗೆಪಾಟಿಲಿಗೆ ಈಡಾದರು. ಇವರ ವಿಕೆಟ್‌ ಕೀಪಿಂಗ್‌ ನೋಡಿದ ಆಟಗಾರರು ಅಷ್ಟೇ ಏಕೆ, ಅಭಿಮಾನಿಗಳು ಬಿದ್ದು ಬಿದ್ದು ನಕ್ಕರು. ನೀವು ಸಹ ಈ ಇವರ ವಿಕೆಟ್ ಕೀಪಿಂಗ್ ನೋಡಿದರೆ ನಕ್ಕು ನಕ್ಕು ಸುಸ್ತಾಗುತ್ತಿರಾ..

ಇಂಗ್ಲೆಂಡ್ ತಂಡವನ್ನು 246 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತ ತಂಡ ಬ್ಯಾಟಿಂಗ್‌ಗೆ ಮೈದಾನಕ್ಕೆ ಇಳಿಯಿತು. ಭಾರತದ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುತ್ತಿದ್ದರು. ಇದೇ ವೇಳೆ ಇಂಗ್ಲೆಂಡ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬೆನ್ ಫಾಕ್ಸ್ ಅವರ ಆಟದ ರೀತಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral video: wicketkeeper Ben Foakes falls over all three stumps attempting to hold the ball

ಭಾರತೀಯ ಬ್ಯಾಟಿಂಗ್ ಸಮಯದಲ್ಲಿ, ಮಾರ್ಕ್ ವುಡ್ ಇನ್ನಿಂಗ್ಸ್ನ ಮೂರನೇ ಓವರ್ ಅನ್ನು ಬೌಲಿಂಗ್ ಮಾಡುತ್ತಿದ್ದರು. ನಾಯಕ ರೋಹಿತ್ ಶರ್ಮಾ ವುಡ್‌ ಅವರ ಇನ್‌ ಸ್ವಿಂಗ್ ಬಾಲ್ ಅನ್ನು ಫ್ಲಿಕ್ ಮಾಡುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಚೆಂಡು ಬೌಂಡರಿ ಲೈನ್‌ ನತ್ತ ಹೋಯಿತು. ಅಲ್ಲಿದ್ದ ಫೀಲ್ಡರ್‌ ಚೆಂಡನ್ನು ಹಿಡಿದು ವಿಕೆಟ್‌ಕೀಪರ್ ಬೆನ್ ಫಾಕ್ಸ್‌ ತುದಿಗೆ ಎಸೆದರು. ಈ ಸಮಯದಲ್ಲಿ, ಫಾಕ್ಸ್‌ನ ಕಣ್ಣುಗಳು ಚೆಂಡಿನ ಮೇಲೆ ಸ್ಥಿರವಾಗಿತ್ತು. ಮತ್ತು ಚೆಂಡನ್ನು ನಿಲ್ಲಿಸುವ ಪ್ರಯತ್ನದಲ್ಲಿ ಅವರು ಓಡಿದರು. ಚೆಂಡಿನ ಮೇಲೆ ಫಾಕ್ಸ್‌ ಕಣ್ಣು ನೆಟ್ಟಿದ್ದರಿಂದ ಯಾವ ದಿಕ್ಕಿನಲ್ಲಿ ತಾನು ಓಡುತ್ತಿರುವುದು ಅವರಿಗೆ ಅರಿವಾಗಲಿಲ್ಲ. ಪರಿಣಾಮ ಅವರು ವಿಕೆಟ್‌ ಕೀಪಿಂಗ್‌ಗೆ ಡಿಕ್ಕಿ ಹೊಡೆದು ಬೀಳಿಸಿ ಬಿಟ್ಟರು. ಈ ದೃಶ್ಯ ನೋಡಿ ಅಲ್ಲಿದ್ದ ಕ್ಯಾಪ್ಟನ್ ರೋಹಿತ್ ಅವರಿಗೂ ನಗು ತಡೆಯಲಾಗಲಿಲ್ಲ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫಾಕ್ಸ್ ಚೆಂಡನ್ನು ಹಿಡಿದ ರೀತಿಯನ್ನು ನೋಡಿ ಎಬಿ ಡಿವಿಲಿಯರ್ಸ್ ಸಾಕಷ್ಟು ಆಶ್ಚರ್ಯಚಕಿತರಾದರು. ಎಬಿ ಫಾಕ್ಸ್‌ನ ಚೆಂಡನ್ನು ಹಿಡಿಯುವ ಶೈಲಿಯನ್ನು ರಗ್ಬಿಯಲ್ಲಿ ಅದ್ಭುತವಾದ ಟ್ಯಾಕಲ್‌ಗೆ ಹೋಲಿಸಿದರು. ಈ ಬಗ್ಗೆ ತಮ್ಮ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ಅವರು "ಬೆನ್ ಫಾಕ್ಸ್ ಇದು ಅದ್ಭುತವಾಗಿದೆ. ಸ್ಟಂಪ್‌ನಲ್ಲಿ ಅತ್ಯುತ್ತಮ ರಗ್ಬಿ ಟ್ಯಾಕಲ್" ಎಂದು ಬರೆದು ಕೊಂಡಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತೀಯ ಸ್ಪಿನ್ ಬೌಲರ್‌ಗಳು ಇಂಗ್ಲೆಂಡ್‌ನ ಬೇಸ್‌ಬಾಲ್ ತಂತ್ರವನ್ನು ಬೇಧಿಸಿದರು. ಇದರಿಂದಾಗಿ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 246 ರನ್ ಗಳಿಗೆ ಕುಸಿಯಿತು. ಇದಾದ ಬಳಿಕ ಯಶಸ್ವಿ ಜೈಸ್ವಾಲ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ದಿನದಾದಟದಂತ್ಯಕ್ಕೆ 23 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 119 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಭಾರತಕ್ಕೆ ಇನ್ನು 127 ರನ್ ಅವಶ್ಯಕತೆ ಇದೆ.

Viral video: wicketkeeper Ben Foakes falls over all three stumps attempting to hold the ball

ಜೈಸ್ವಾಲ್ 70 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 76 ರನ್ ಗಳಿಸಿ ಆಡುತ್ತಿದ್ದಾರೆ. ಶುಭಮನ್ ಗಿಲ್ 14 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Thursday, January 25, 2024, 19:39 [IST]
Other articles published on Jan 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+