IND vs SA Test: ಬರ್ಗರ್‌ಗೆ ಕೌಂಟರ್ ನೀಡಲು ನೆಟ್ಸ್‌ನಲ್ಲಿ ಬೆವರು ಹರಿಸಿದ ವಿರಾಟ್, ಶ್ರೇಯಸ್
ಬುಧವಾರದಿಂದ ಕೇಪ್ ಟೌನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲಿಸಿದೆ. ಆದರೆ, ಸರಣಿ ಸಮಬಲಗೊಳಿಸುವ ಉದ್ದೇಶದಿಂದ ಭಾರತ ತಂಡ ಕೇಪ್ ಟೌನ್ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕಾ ತಂಡವು ಸರಣಿಯನ್ನು ಗೆಲ್ಲಲು ಬಯಸುತ್ತದೆ.
ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುವುದು ಕಾಣುತ್ತದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆತಿಥೇಯರು ಪಂದ್ಯವನ್ನು ಗೆದ್ದಿದ್ದರು. ಈ ಜಯದಲ್ಲಿ ಆತಿಥೇಯ ತಂಡದ ಬೌಲರ್‌ಗಳ ಶ್ರಮ ಎದ್ದು ಕಾಣುತ್ತಿತ್ತು. ಅನುಭವಿ ಬೌಲರ್ ಕಗಿಸೋ ರಬಾಡ ತಮ್ಮ ಮಾರಕ ದಾಳಿಯಿಂದ ಎದುರಾಳಿಗಳನ್ನು ಕಟ್ಟಿ ಹಾಕಿದರೆ, ಪದಾರ್ಪಣೆ ಪಂದ್ಯವನ್ನು ಆಡಿದ್ದ ನಾಂದ್ರೆ ಬರ್ಗರ್ ಕರಾರುವಕ್ ದಾಳಿ ಸಂಘಟಿಸಿದ್ದು.
ಎಡಗೈ ಬೌಲರ್‌ಗಳ ವಿರುದ್ಧ ಪರದಾಟ
ಇನ್ನು ನಾಂದ್ರೆ ಬರ್ಗರ್ ಎಡಗೈ ವೇಗದ ಬೌಲರ್.. ಇವರ ಎಸೆತಗಳನ್ನು ಎದುರಿಸುವಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ಹೈರಾಣಾಗಿದ್ದರು. ಟೀಮ್ ಇಂಡಿಯಾ ಬ್ಯಾಟರ್‌ಗಳು ಎಡಗೈ ವೇಗದ ಬೌಲರ್ ವಿರುದ್ಧ ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಇದೇ ಮೊದಲೇನಲ್ಲ. ನ್ಯೂಜಿಲೆಂಡ್ ತಂಡದ ಟೀಮ್ ಸೌಥಿ, ಆಸೀಸ್‌ನ ಮಿಚೆಲ್ ಸ್ಟಾರ್ಕ್, ಪಾಕಿಸ್ತಾನದ ಶಾಹಿನ್ ಶಾ ಆಫ್ರಿದಿ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದ್ದರು.
ಇದನ್ನು ಮೆಟ್ಟಿ ನಿಂತು ತಮ್ಮ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಟೀಮ್ ಇಂಡಿಯಾ ಬ್ಯಾಟರ್‌ಗಳು ಮೈದಾನದಲ್ಲಿ ಬೆವರು ಹರಿಸಿದರು. ದಕ್ಷಿಣ ಆಫ್ರಿಕಾದ ಎಡಗೈ ವೇಗಿ ನಾಂದ್ರೆ ಬರ್ಗರ್ ಅವರ ಎಸೆತಗಳನ್ನು ಎದುರಿಸಲು ವಿರಾಟ್ ಕೊಹ್ಲಿ ನೆಟ್ಸ್ ಸೆಷನ್‌ನಲ್ಲಿ ವಿಶೇಷ ರೀತಿಯಲ್ಲಿ ಅಭ್ಯಾಸ ನಡೆಸಿದರು. ಶ್ರೇಯಸ್ ಅಯ್ಯರ್ ಶಾರ್ಟ್ ಬಾಲ್‌ಗಳನ್ನು ಎದುರಿಸಲು ತಯಾರಿ ನಡೆಸುತ್ತಿದ್ದಾರೆ.

ಇತ್ತೀಚಿಗೆ ನಡೆದ ಕೆಲವು ಟೆಸ್ಟ್‌ಗಳಲ್ಲಿ ಶ್ರೇಯಸ್ ಅಯ್ಯರ್ ಬರುತ್ತಿದ್ದಂತೆ ಬೌಲರ್‌ಗಳು ಇವರಿಗೆ ಖೆಡ್ಡಾ ತೋಡಲು ಬಳಸುವ ಅಸ್ತ್ರವೇ ಶಾಟ್ ಬೌಲ್. ಈ ಎಸೆತದಲ್ಲಿ ತಮ್ಮ ಹಿಡಿತವನ್ನು ಬಲ ಪಡಿಸಿಕೊಳ್ಳಲು ಶ್ರೇಯಸ್ ಬೆವರು ಹರಿಸಿದರು.
ಸೋಮವಾರ ನೆಟ್ಸ್‌ನಲ್ಲಿ ಸುಮಾರು ಒಂದು ಗಂಟೆ ಕಾಲ ಕೊಹ್ಲಿ ಬೆವರು ಸುರಿಸಿದ್ದರು. ಇದರ ನಂತರ, ಸುಮಾರು 20 ರಿಂದ 25 ನಿಮಿಷಗಳ ಕಾಲ ಥ್ರೋಡೌನ್ ವಿರುದ್ಧ ಅಭ್ಯಾಸ ಮಾಡಿದರು. ಅಲ್ಲದೆ, ಶಾರ್ಟ್ ಬಾಲ್ ಗಳನ್ನು ಎದುರಿಸಲು ಶ್ರೇಯಸ್ ಅಯ್ಯರ್ ಸಿದ್ಧರಾದರು. ಈ ಸಮಯದಲ್ಲಿ, ಶ್ರೇಯಸ್ ಅಯ್ಯರ್ ಅವರು ನೆಟ್ಸ್‌ನಲ್ಲಿ ಶಾರ್ಟ್ ಬಾಲ್‌ಗಳ ವಿರುದ್ಧ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿತು.
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಮೊದಲ ಟೆಸ್ಟ್ ಪಂದ್ಯ ಸೆಂಚೂರಿಯನ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸುಲಭವಾಗಿ ಭಾರತ ತಂಡವನ್ನು ಸೋಲಿಸಿತ್ತು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಇನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು. ಈ ಮೂಲಕ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಮುನ್ನಡೆ ಸಾಧಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಜನವರಿ 3 ರಿಂದ ನಡೆಯಲಿದೆ. ಎರಡೂ ತಂಡಗಳು ಕೇಪ್ ಟೌನ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications