ಲಂಡನ್ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡ ವಿರಾಟ್, ಅನುಷ್ಕಾ: ಇಲ್ಲಿ ಚೋಲೆ ಬಟೂರೆ ರೇಟ್ ಕೇಳಿದ್ರೆ ಹೈರಾಣಾಗುತ್ತಿರಾ!
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿದ್ದಾರೆ. ಕುಟುಂಬ ಸಮೇತ ವಿರಾಟ್ ಲಂಡನ್ ನಲ್ಲಿ ರಜೆಯ ಮಜೆಯನ್ನು ಸವಿಯುತ್ತಿದ್ದಾರೆ. ವಿರಾಟ್ ಅವರಿಗೆ ಕುಟುಂಬದ ಜೊತೆ ಕಾಲ ಕಳೆಯುವುದು ಎಂದ್ರೆ ತುಂಬ ಇಷ್ಟ. ಈ ಬಾರಿಯೂ ಅವರು ದೊಡ್ಡ ಸರಣಿಯ ಬಳಿಕ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಲಂಡನ್ ಪ್ರವಾಸದಲ್ಲಿರುವ ಕೊಹ್ಲಿ ಇಲ್ಲಿನ ಭಾರತೀಯ ರೆಸ್ಟೊರೆಂಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಬಾಣಸಿಗರೊಂದಿಗೆ ಇರುವ ಫೋಟೋ ವೈರಲ್ ಆಗುತ್ತಿದೆ.

ಅನುಷ್ಕಾ ಮತ್ತು ವಿರಾಟ್ ಇಲ್ಲಿ ಲಾಂಗ್ ಡ್ರೆಸ್ ಧರಿಸಿದ್ದಾರೆ. ವಿರಾಟ್ ಇಲ್ಲಿ ಖಾಕಿ ಬಣ್ಣದ ಚೆಕ್ ಲಾಂಗ್ ಕೋರ್ಟ್ ಧರಿಸಿದ್ದಾರೆ. ಅನುಷ್ಕಾ ಕಪ್ಪು ಬಣ್ಣದ ಲಾಂಗ್ ಕೋರ್ಟ್ ಧರಿಸಿದ್ದಾರೆ. ದಂಪತಿಗಳು ಭಾರತದ ಪ್ರಸಿದ್ಧ ರೆಸ್ಟೋರೆಂಟ್ ಬಾಂಬೆ ಬಸ್ಲ್ ನಲ್ಲಿ ಖಾದ್ಯವನ್ನು ಸೇವಿಸಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಪದೆ ಪದೆ ಈ ರೆಸ್ಟೋರೆಂಟ್ ಗೆ ಭೇಟಿ ನೀಡಲು ಕಾರಣ ಇಲ್ಲಿನ ಆಹಾರ. ಲಂಡನ್‌ನಲ್ಲಿ ಭಾರತದ ಖಾದ್ಯಗಳು ಈ ರೆಸ್ಟೋರೆಂಟ್ ನಲ್ಲಿ ಉತ್ತಮವಾಗಿ ಸಿಗುತ್ತವೆ. ಈ ರೆಸ್ಟೋರೆಂಟ್‌ನಲ್ಲಿ ನಾರ್ಥ್ ಇಂಡಿಯನ್ ನಿಂದ ಹಿಡಿದು ಸೌತ್ ಇಂಡಿಯನ್ ವರೆಗೂ ಎಲ್ಲ ತಿನಿಸುಗಳು ಲಭ್ಯ. ಈ ರೆಸ್ಟೋರೆಂಟ್‌ನಲ್ಲಿ ಒಂದು ಪ್ಲೇಟ್ ಚೋಲೆ ಬಟೂರೆಗೆ ಸುಮಾರು 29 ಪೌಂಡ್ ಇದ್ದು, ಭಾರತೀಯ ರೂಪಾಯಿಗಳಲ್ಲಿ 3062 ಆಗುತ್ತದೆ.
ರೆಸ್ಟೋರೆಂಟ್‌ನ ಬಾಣಸಿಗ, ಸುರೇಂದ್ರ ಮೋಹನ್, ದಂಪತಿಗಳೊಂದಿಗೆ ಈ ಸುಂದರವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ನನ್ನ ನೆಚ್ಚಿನ ಇಬ್ಬರು ಸ್ಟಾರ್ ಗಳನ್ನು ಭೇಟಿಯಾದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರನ್ನು ಮತ್ತೆ ಇಲ್ಲಿ ಸ್ವಾಗತಿಸಲು ನನಗೆ ಅವಕಾಶ ಸಿಕ್ಕಿದ್ದು ದೊಡ್ಡ ಅದೃಷ್ಟ' ಎಂದು ಬರೆದಿದ್ದಾರೆ.
ಭಾರತದಲ್ಲಿ ನಡೆದ ವಿಶ್ವಕಪ್ ನಲ್ಲಿ ವಿರಾಟ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅವರು ಈ ವಿಶ್ವಕಪ್‌ನಲ್ಲಿ 765 ರನ್ ಗಳಿಸಿದ್ದಾರೆ, ಇದು ಒಂದೇ ವಿಶ್ವಕಪ್‌ನಲ್ಲಿ ದಾಖಲಾದ ಅತಿ ಹೆಚ್ಚು ರನ್ ಎಂದು ದಾಖಲೆಯ ಪುಟ ಸೇರಿದೆ. ವಿರಾಟ್ ಅವರ ಈ ಪ್ರದರ್ಶನದ ಆಧಾರದ ಮೇಲೆ, ಟೀಂ ಇಂಡಿಯಾ ಅಜೇಯವಾಗಿ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿ ಕಾದಾಟದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು.
ಈಗ ವಿರಾಟ್ ಕೊಹ್ಲಿ ಬ್ರೇಕ್ ನಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಸರಣಿಯನ್ನು ಆಡುತ್ತಿಲ್ಲ. ಆದರೆ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಡಿಸೆಂಬರ್ 26ರಿಂದ ಆರಂಭವಾಗಲಿರುವ 2 ಟೆಸ್ಟ್ ಪಂದ್ಯಗಳ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಲುಪಲಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ 11 ಜನವರಿ 2021 ರಂದು ಪೋಷಕರಾದ ಖುಷಿ ಹೊಂದಿದ್ದರು. ಈ ಸ್ಟಾರ್ ಗಳಿಗೆ ವಮಿಕಾ ಕೊಹ್ಲಿ ಎಂಬ ಮಗಳು ಇದ್ದಾಳೆ. ಕೆಲ ದಿನಗಳ ಹಿಂದೆ ಅನುಷ್ಕಾ ಎರಡನೇ ಬಾರಿ ಗರ್ಭಧಾರಣೆ ಬಗ್ಗೆ ಚರ್ಚೆಯಾಗುತ್ತಿದೆ. ಅನುಷ್ಕಾ ಮತ್ತು ವಿರಾಟ್ ಎರಡನೇ ಮಗುವಿಗೆ ಆಗಮನವನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರಿಬ್ಬರೂ ಈ ವರದಿಗಳನ್ನು ದೃಢಪಡಿಸಿಲ್ಲ. ವಿಶ್ವಕಪ್ ಪಂದ್ಯದ ವೇಳೆ ಅನುಷ್ಕಾ ಶರ್ಮಾ ಹಲವಾರು ಬಾರಿ ತನ್ನ ಬೇಬಿ ಬಂಪ್ ಮರೆ ಮಾಚುವಂತೆ ಡ್ರೆಸ್ ಗಳನ್ನು ತೊಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications