'ಚತುರ' ಕೊಹ್ಲಿಯನ್ನು ಕೆಣಕದಿರಲು ನಿರ್ಧರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಮುಂದಿನ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಲಡ್ಜಿಂಗ್ ಮಾಡದಿರಲು ತೀರ್ಮಾನಿಸಿದ್ದಾರಂತೆ. ವಿರಾಟ್ ಕೊಹ್ಲಿ ಮತ್ತು ತಂಡ ಸ್ಲೆಡ್ಜಿಂಗ್ ಅನ್ನು ತಮ್ಮ ಪರವಾಗಿ ಬಳಸಿಕೊಳ್ಳುತ್ತಾರೆ, ಹಾಗಾಗಿ ಅದರಿಂದ ದೂರವುಳಿಯುವ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.
ಮ್ಯಾಥ್ಯೂ ವೇಡ್ ಈ ಹಿಂದಿನ ಭಾರತದ ಸರಣಿಯಲ್ಲಿ ಮತ್ತು ಕಳೆದ ಆಶಸ್ ಸರಣಿಯಲ್ಲಿ ಸ್ಲೆಡ್ಜಿಂಗ್ ಮಾಡಿ ಸುದ್ದಿಯಾಗಿದ್ದರು. ಕೆಲ ತೀಕ್ಷ್ಣ ಪದಗಳನ್ನು ಬಳಸಿ ಎದುರಾಳಿಗಳನ್ನು ಕೆಣಕುವ ಪ್ರಯತ್ನವನ್ನು ಮಾಡಿದ್ದರು. ಆದರೆ ಸ್ಲೆಡ್ಜಿಂಗ್‌ನಿಂದ ಉತ್ತೇಜನಗೊಂಡು ಎದುರಾಳಿ ಆಟಗಾರರು ಆಸಿಸ್‌ಗೆ ತಿರುಗುಬಾಣವಾಗುವುದನ್ನು ಗಮನಿಸಿ ಮೌಖಿಕ ಮುಖಾಮುಖಿಯಾಗುವುದರಿಂದ ದೂರವಿರುವುದಾಗಿ ಹೇಳಿದ್ದಾರೆ.
ಕಠಿಣ ಸಂದರ್ಭಗಳಲ್ಲಿ ಭಾರತೀಯ ಕ್ರಿಕೆಟಿಗರು ಸ್ಲೆಡ್ಜಿಂಗ್‌ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲೂ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ವೇಳೆ ಪದಗಳನ್ನು ಬಳಸುವುದರಲ್ಲಿ ಮತ್ತು ಆಂಗಿಕಭಾಷೆಯಲ್ಲಿ ಚತುರತೆಯನ್ನು ಹೊಂದಿದ್ದಾರೆ ಎಂದು ವೇಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಲಡ್ಜಿಂಗ್‌ನ ವಿಚಾರವಾಗಿ ಭಾರತ ಸಾಕಷ್ಟು ಬೆಳವಣಿಗೆಯಾಗಿದೆ. ಈ ಸಂದರ್ಭದಲ್ಲಿ ಅವರು ಇತರ ಎಲ್ಲರಿಗಿಂತಲೂ ಸ್ಲಡ್ಜಿಂಗ್‌ನಲ್ಲಿ ಮುಂದಿದ್ದಾರೆ. ಹಾಗಾಗಿ ಅದರಿಂದ ಈ ಬಾರಿ ದೂರವಿರುವ ನಿರ್ಧಾರ ಮಾಡಿರುವುದಾಗಿ ಮ್ಯಾಥ್ಯೂ ವೇಡ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 3 ರಿಂದ ಆರಂಭವಾಗಲಿದೆ. ಅಡಿಲೇಡ್‌ನಲ್ಲಿ ಎರಡನೇ ಪಂದ್ಯ ಡಿಸೆಂಬರ್ 11ರಿಂದ ಆರಂಭವಾಗಲಿದೆ. 26ನೇ ತಾರೀಕಿನಿಂದ ಮೆಲ್ಬೋರ್ನ್‌ನಲ್ಲಿ ಮೂರನೇ ಟೆಸ್ಟ್ ಆರಂಭವಾದರೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜನವರಿ 3ರಿಂದ ಅಂತಿಮ ಟೆಸ್ಟ್ ಪಂದ್ಯಕ್ಕೆ ದಿನಾಂಕ ನಿಗದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications