For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ 11 ರನ್ ಗಳಿಸಿದರೆ, ಸೌರವ್ ಗಂಗೂಲಿ ದಾಖಲೆ ಪತನ!

Virat Kohli 11 runs away from surpassing Sourav Ganguly in elite list

ವೆಲ್ಲಿಂಗ್ಟನ್, ಫೆಬ್ರವರಿ 20: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿ ಶುಕ್ರವಾರ (ಫೆಬ್ರವರಿ 21) ನಡೆಯಲಿರುವ ಭಾರತ-ನ್ಯೂಜಿಲೆಂಡ್‌ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

ಮೊದಲ ಪಂದ್ಯದಲ್ಲಿ ಕೊಹ್ಲಿ ಬರೀ 11 ರನ್ ಗಳಿಸಿದರೂ ಸಾಕು, ಮಾಜಿ ನಾಯಕ ಸೌರವ್ ಗಂಗೂಲಿ ಹೆಸರಿನಲ್ಲಿರುವ ದಾಖಲೆಯನ್ನು ಕೊಹ್ಲಿ ಮೀರಿಸಲಿದ್ದಾರೆ. 11 ರನ್ ಗಳಿಸಿದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬ್ಯಾಟ್ಸ್‌ಮನ್‌ಗಳ ದಾಖಲೆ ಸಾಲಿನಲ್ಲಿ ಕೊಹ್ಲಿ ಆರನೆಯವರಾಗಿ ಗುರುತಿಸಿಕೊಳ್ಳಲಿದ್ದಾರೆ.

ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಪಟ್ಟಿಯಲ್ಲಿ ಸದ್ಯ ಆರನೇ ಸ್ಥಾನದಲ್ಲಿರುವ ಗಂಗೂಲಿ, 7212 ರನ್ ಗಳಿಸಿದ್ದಾರೆ. ಕೊಹ್ಲಿ ಸದ್ಯ 7202 ರನ್‌ನೊಂದಿಗೆ 7ನೇ ಸ್ಥಾನದಲ್ಲಿದ್ದಾರೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 11 ರನ್ ಗಳಿಸಿದರೆ, ಗಂಗೂಲಿ ದಾಖಲೆ ಬದಿಗೆ ಸರಿಯಲಿದೆ.

ಟೆಸ್ಟ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ಭಾರತದ ಆಟಗಾರರಲ್ಲಿ ಈಗ ಸಚಿನ್ ತೆಂಡೂಲ್ಕರ್ (15921 ರನ್), ರಾಹುಲ್ ದ್ರಾವಿಡ್ (13265 ರನ್), ಸುನಿಲ್ ಗವಾಸ್ಕರ್ (10122 ರನ್), ವಿವಿಎಸ್ ಲಕ್ಷ್ಮಣ್ (8781 ರನ್), ವೀರೇಂದ್ರ ಸೆಹ್ವಾಗ್ (8503 ರನ್) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

Story first published: Thursday, February 20, 2020, 16:51 [IST]
Other articles published on Feb 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+