ಮೈದಾನದಾಚೆ ಯಾವ ಭಾರತೀಯನಿಂದಲೂ ಸಾಧ್ಯವಾಗದ ಮೈಲಿಗಲ್ಲು ತಲುಪಿದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡುತ್ತಿರುತ್ತಾರೆ. ಆದರೆ ಕ್ರಿಕೆಟ್ ಮೈದಾನದ ಆಚೆಗೂ ವಿರಾಟ್ ಕೊಹ್ಲಿ ಕಿಂಗ್ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಯಾವ ಭಾರತೀಯನಿಂದಲೂ ಸಾಧ್ಯವಾಗದ ಸಾಧನೆಯೊಂದನ್ನು ವಿರಾಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಈ ಬಾರಿ ನೆಟ್ಟ ಮೈಲಿಗಲ್ಲು ಸೋಶಿಯಲ್ ಮೀಡಿಯಾದಲ್ಲಿ ಅನ್ನುವುದು ವಿಶೇಷ. ಹೌದು ಕೊಹ್ಲಿ ಭಾರತದಲ್ಲೇ ಅತಿ ಹೆಚ್ಚಿ ಇನ್ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಹೊಂದಿದ ವ್ಯಕ್ತಿಯಾಗಿದ್ದಾರೆ. ವಿರಾಟ್ 50 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ಮೊದಲ ಭಾರತೀಯರಾಗಿ ಹೊರಹೊಮ್ಮಿದ್ದಾರೆ.
ಇನ್ಸ್ಟಾಗ್ರಾಮ್ ಫಾಲೋವರ್ಸ್‌ಗಳ ವಿಚಾರದಲ್ಲಿ ವಿರಾಟ್ ಕೊಹ್ಲಿಯ ಸಮೀಪದಲ್ಲಿರುವ ಸೆಲೆಬ್ರಿಟಿ ಅಂದರೆ ಅದು ಪ್ರಿಯಾಂಕಾ ಚೋಪ್ರಾ. ಬಾಲಿವುಡ್ ನಂತರ ಹಾಲಿವುಡ್‌ನಲ್ಲೂ ಮಿಂಚುಹರಿಸುತ್ತಿರುವ ಪ್ರಿಯಾಂಕಾ ಚೋಪ್ರಾ 49.9 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಬಳಿಕ ಬಾಲಿವುಡ್‌ನ ಮತ್ತೋರ್ವ ತಾರೆ ದೀಪಿಕಾ ಪಡುಕೋಣೆ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕ ಚೋಪ್ರಾ 44.1 ಮಿಲಿಯನ್ ಅನುಯಾಯಿಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹೊಂದಿದ್ದಾರೆ.
ವಿರಾಟ್ ಕೊಹ್ಲಿಗೂ ಬಾಲಿವುಡ್ ಜೊತೆ ನಂಟಿದೆ. ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರನ್ನು ವಿರಾಟ್ ವರಿಸಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಕೀವಿಸ್ ಪ್ರವಾಸದಲ್ಲಿದ್ದಾರೆ. ಟಿ20 ಸರಣಿಯನ್ನು ಐತಿಹಾಸಿಕವಾಗಿ 5-0 ಅಂತರದಿಂದ ಗೆದ್ದ ಬಳಿಕ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 0-3 ಅಂತರದಿಂದ ಕಳೆದುಕೊಂಡಿತು. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಎರಡೂ ತಂಡಗಳು ಸಜ್ಜಾಗಿದ್ದು ಸರಣಿ ಯಾರ ಪಾಲಿಗಾಗುತ್ತೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications