ವಿಶ್ವಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಬಲಾಡ್ಯ ಆಟಗಾರ ಎಂದ ಆಸಿಸ್ ಮಾಜಿ ನಾಯಕ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕದನಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 27 ರಿಂದ ಏಕದಿನ ಸರಣಿ ಆರಂಭವಾಗುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ. ಅದಕ್ಕೂ ಮುನ್ನವೇ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು ಅಭಿಮಾನಿಗಳ ಕಾತುರತೆ ಹೆಚ್ಚಿಸಿದೆ.
ಈ ಸರಣಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಯ್ಲರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಬಲಾಡ್ಯ ಆಟಗಾರ ಎಂದು ಬಣ್ಣಿಸಿದ್ದಾರೆ. ಗೌರವಾನ್ವಿತ ಆಟಗಾರನಾಗಿದ್ದು ಜೊತೆಗೆ ಅಗ್ರೆಸ್ಸಿವ್ ಕ್ರಿಕೆಟಿಗನೂ ಆಗಿದ್ದಾರೆ ಎಂದು ಮಾರ್ಕ್ ಟೇಯ್ಲರ್ ಹೇಳಿದ್ದಾರೆ.
ನನ್ನ ಪ್ರಕಾರ ವಿರಾಟ್ ಕೊಹ್ಲಿ ವಿಶ್ವ ಕ್ರಕೆಟ್‌ನ ಅತ್ಯಂತ ಬಲಾಡ್ಯ ಆಟಗಾರನಾಗಿದ್ದಾರೆ. ಆಕ್ರಮಕಾರಿ ಕ್ರಿಕೆಟಿಗನಾಗಿ ಹಾಗೂ ಸ್ಟೇಟ್ಸ್‌ಮನ್ ಆಗಿ ಉತ್ತಮ ಮಾರ್ಗವನ್ನು ಅನುಸರಿಸಿಕೊಂಡು ಉತ್ತಮ ಕಾರ್ಯವನ್ನು ನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮಾರ್ಕ್ ಟೇಯ್ಲರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ತನ್ನ ಜವಾಬ್ದಾರಿಯನ್ನು ಅತ್ಯಂತ ಗೌರವದಿಂದ ನಿಭಾಯಿಸುತ್ತಾರೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದು ಆತನ ಆಟವನ್ನು ನೀವು ಗಮನಿಸಿದರೆ ಆತ ಇನ್ನೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದ್ದಾನೆ ಎಂದು ಟೇಯ್ಲರ್ ಹೇಳಿದ್ದಾರೆ.
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 27ರಿಂದ ಮೊದಲ ಏಕದಿನ ಸರಣಿಯನ್ನು ಆಡುವ ಮೂಲಕ ಚಾಲನೆ ದೊರೆಯಲಿದೆ. 3 ಏಕದಿನ 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳು ಈ ಎರಡು ದೇಶಗಳ ನಡುವೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications