Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್‌ಗೆ ಹಾಲಭಿಷೇಕ: ವಿಡಿಯೋ

IPL 2019 : ಆರ್‌ಸಿಬಿ ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್‌ಗೆ ಹಾಲಭಿಷೇಕ: ವಿಡಿಯೋ | Oneindia Kannada
Virat Kohli-AB De Villiers poster showered with milk by RCB fans

ಬೆಂಗಳೂರು, ಫೆಬ್ರವರಿ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಭಾರತದಲ್ಲಿ ಕ್ರಿಕೆಟ್ ಬಗ್ಗೆ ವಿಶೇಷ ಕ್ರೇಜ್ ಹುಟ್ಟು ಹಾಕಿದೆ. ಐಪಿಎಲ್ ಟೂರ್ನಿ ಮತ್ತು ಅದರ ತಂಡಗಳ ಮೇಲಿನ ಅಭಿಮಾನ ತೋರಿಕೊಳ್ಳುವಾಗ ಅಭಿಮಾನಿಗಳು ಅಂಜಿಕೊಳ್ಳಲಾರರು. ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡದ ಆಟಗಾರರ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಾರ್ಚ್‌ 23ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳುವುದರಲ್ಲಿದೆ. ಟೂರ್ನಿಯೆಡೆಗಿನ ಕಾವು ಹೆಚ್ಚಾಗುತ್ತಿದೆ ಕೂಡ. ಇದಕ್ಕೆ ಸಾಕ್ಷಿಯೆಂಬಂತೆ ಆರ್‌ಸಿಬಿ ಅಭಿಮಾನಿಗಳು ನಾಯಕ ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಫೆಬ್ರವರಿ 18ರಂದು ಎಬಿಡಿ ಹುಟ್ಟಹಬ್ಬವೂ ಇದಕ್ಕೆ ಕಾರಣ.

ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರರಾಗಿರುವ ಮಿ. 360 ಖ್ಯಾತಿಯ ಎಬಿಡಿ ಮತ್ತು ಕೊಹ್ಲಿ ಇಬ್ಬರೂ ನೆಚ್ಚಿನ ಸ್ನೇಹಿತರು. ಹೀಗಾಗಿಯೇ ಆರ್ಸಿಬಿ ಅಭಿಮಾನಿಗಳು 35ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಎಬಿಡಿಗೆ ಶುಭಕೋರಿ ಪೋಸ್ಟರ್‌ಗೆ ಹಾಲು ಸುರಿಯುವ ಮೂಲಕ ಇಬ್ಬರ ಮೇಲಿನ ಪ್ರೀತಿ ತೋರಿಕೊಂಡಿದ್ದಾರೆ. ಈ ಟ್ವಿಟರ್ ವಿಡಿಯೋ ವೈರಲ್ ಆಗಿದೆ.

Story first published: Monday, February 18, 2019, 15:11 [IST]
Other articles published on Feb 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+