'ಗ್ರೀನ್ ಡೇ' ಕಿಟ್ ಹರಾಜಿಗಿಡಲು ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಸಜ್ಜು

ಬೆಂಗಳೂರು, ಏಪ್ರಿಲ್ 25: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬ್ಯಾಟ್ಸ್‌ಮನ್, ಆರ್‌ಸಿಬಿ ಸಹ ಆಟಗಾರ ಎಬಿ ಡಿ ವಿಲಿಯರ್ಸ್, 2016ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ತಮಗೆ ನೀಡಲಾಗಿದ್ದ ಗ್ರೀನ್ ಕಿಟ್ ಅನ್ನು ಹರಾಜಿಗಿಡಲಿದ್ದಾರೆ.
ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ಸಂಗ್ರಹಿಸಲು ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಇಬ್ಬರೂ 2016ರಲ್ಲಿ ಆರ್‌ಸಿಬಿಯಿಂದ ದೊರೆತಿದ್ದ ಗ್ರೀನ್ ಕಿಟ್ ಅನ್ನು ಹರಾಜಿಗಿಡಲು ಯೋಚಿಸಿದ್ದಾರೆ. ಇಬ್ಬರೂ ಹರಾಜಿಗಿಡುತ್ತಿರುವ ಈ ಗ್ರೀನ್ ಕಿಟ್ ಅನ್ನು ಬಳಸಿ ಗುಜರಾತ್ ಲಯನ್ಸ್ ವಿರುದ್ಧ ಪಂದ್ಯವನ್ನಾಡಿದ್ದರು.
ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಕೊಹ್ಲಿ ಜೊತೆ ಮಾತನಾಡುತ್ತ ಎಬಿಡಿ ಈ ನಿರ್ಧಾರ ಪ್ರಕಟಿಸಿದರು. ಅಂದ್ಹಾಗೆ ಈ ಗ್ರೀನ್ ಕಿಟ್ ಧರಿಸಿ ಆಡಿದ್ದ ಆವತ್ತಿನ ಪಂದ್ಯದಲ್ಲಿ ಕೊಹ್ಲಿ ಮತ್ತು ಎಬಿಡಿ ಇಬ್ಬರೂ ಸ್ಫೋಟಕ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು.
ಪಂದ್ಯವನ್ನು ಸ್ಮರಿಸಿಕೊಂಡ ಎಬಿಡಿ, '2016ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಎದುರು ನಾವಿಬ್ಬರೂ ಶತಕ ಬಾರಿಸಿದ್ದೆವು. ಅದೊಂದು ಒಳ್ಳೆಯ ಪಾರ್ಟ್ನರ್‌ಶಿಪ್ ಆಗಿತ್ತು. ಆ ಪಂದ್ಯವನ್ನು ಎಂಜಾಯ್ ಮಾಡಿದ್ದೆವು ಕೂಡ. ನಾನು 120 ರನ್ ಗಳಿಸಿದ್ದೆ, ನಿನಗೆ ನಿನ್ನ ಶತಕ ದೊರೆತಿತ್ತು. ಅದು ಗ್ರೀನ್ ಗೇಮ್. ಅವತ್ತು ನಾವು ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ನಮ್ಮ ಚಿಕ್ಕ ಕೊಡುಗೆ ನೀಡಿದ್ದೆವು,' ಎಂದು ಕೊಹ್ಲಿ ಜೊತೆ ಹೇಳಿಕೊಂಡರು.
ಆವತ್ತಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ, ಕ್ರಿಸ್ ಗೇಲ್ 6, ವಿರಾಟ್ ಕೊಹ್ಲಿ 109 (55 ಎಸೆತ), ಎಬಿಡಿ 129 (52 ಎಸೆತ) ರನ್ನೊಂದಿಗೆ 248 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಗುಜರಾತ್, ಬ್ರೆಂಡನ್ ಮೆಕಲಮ್ 11, ರವೀಂದ್ರ ಜಡೇಜಾ 21, ಆ್ಯರನ್ ಫಿಂಚ್ 37 ರನ್‌ನೊಂದಿಗೆ 18.4 ಓವರ್‌ಗೆ 104 ರನ್ ಪೇರಿಸಿ 144 ರನ್‌ನಿಂದ ಶರಣಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications