Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಆಸ್ಟ್ರೇಲಿಯಾ ವಿರುದ್ಧ ವಿರಾಟ್‌ ಕೊಹ್ಲಿ ವಿರಾವೇಶ

ಟೀಮ್ ಇಂಡಿಯಾದ ಸೂಪರ್‌ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಇಂದು (ನವೆಂಬರ್ 5) 36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಅಭಿಮಾನಿಗಳು ಅವರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭರ್ಜರಿ ಫಾರ್ಮ್‌ಗೆ ಮರಳಬೇಕು ಎಂದು ಪ್ರಾರ್ಥನೆ ಆರಂಭಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದರು. ತಮ್ಮ ಮೇಲೆ ಇದ್ದ ಟೀಕೆಗಳಿಗೆ ವಿರಾಟ್‌ ಆಸ್ಟ್ರೇಲಿಯಾ ಅಂಗಳದಲ್ಲಿ ಉತ್ತರ ನೀಡುವ ಅವಶ್ಯಕತೆ ಇದೆ.

ಹೌದು.. ಕಳೆದ ಕೆಲವು ಇನಿಂಗ್ಸ್‌ಗಳಲ್ಲಿ ವಿರಾಟ್‌ ಅವರ ಬ್ಯಾಟ್‌ ಮೌನಕ್ಕೆ ಶರಣಾಗಿದೆ. ಅಂದ ಮಾತ್ರಕ್ಕೆ ಅವರಲ್ಲಿ ಬಿಗ್ ಇನಿಂಗ್ಸ್‌ ಕಟ್ಟುವ ಎಬಿಲಿಟಿ ಇಲ್ಲವೇ ಇಲ್ಲ ಎಂದು ಅಲ್ಲ. ಒಂದೊಮ್ಮೆ ಲಯಕ್ಕೆ ಮರಳಿದರೆ, ಇವರು ಯಾವುದೇ ಬೌಲರ್‌ಗಳಿಗೆ ಕಾಟ ನೀಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ವಿರಾಟ್, ಆಸೀಸ್‌ ಸರಣಿಗೆ ಭರದ ಸಿದ್ಧತೆಯನ್ನು ನಡೆಸಿದ್ದಾರೆ. ಹಾಗಿದ್ದರೆ ಆಸ್ಟ್ರೇಲಿಯಾ ವಿರುದ್ಧ ವಿರಾಟ್‌ ಅವರ ದಾಖಲೆ ಹೇಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

Virat Kohli Aims for a Comeback Against Australia After Recent Setback Against New Zealand

ನ್ಯೂಜಿಲೆಂಡ್‌ ವಿರುದ್ಧ ರನ್‌ ಬರ

ನ್ಯೂಜಿಲೆಂಡ್‌ ವಿರುದ್ಧದ ಮೂರು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ವಿರಾಟ್‌ ಕೇವಲ 93 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 15.50 ಆಗಿದೆ. ಈ ಅಂಕಿ ಅಂಶ ನಿಜಕ್ಕೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ. ವಿರಾಟ್‌ ಕೊಹ್ಲಿ ಅವರಿಗೆ ಆಸ್ಟ್ರೇಲಿಯಾ ಅಚ್ಚು ಮೆಚ್ಚಿನ ತಂಡಗಳ ಒಂದು. ಈ ತಂಡದ ವಿರುದ್ಧ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್‌ ಭರ್ಜರಿ ಅಂಕಿ ಅಂಶಗಳನ್ನು ಹೊಂದಿದ್ದಾರೆ.

ಆಸೀಸ್‌ ವಿರುದ್ಧ ಅಬ್ಬರ

ವಿರಾಟ್‌ ಕೊಹ್ಲಿ ಅವರು 118 ಟೆಸ್ಟ್‌ ಪಂದ್ಯಗಳಲ್ಲಿ ಭಾರತದ ಪರ ಆಡಿದ್ದು, 9040 ರನ್‌ ಸಿಡಿಸಿದ್ದಾರೆ. ವಿರಾಟ್‌ ಆಸ್ಟ್ರೇಲಿಯಾ ವಿರುದ್ಧ ಅಮೋಘ ಬ್ಯಾಟಿಂಗ್ ದಾಖಲೆಯನ್ನು ಹೊಂದಿದ್ದಾರೆ. ಇವರು ಆಸೀಸ್‌ ವಿರುದ್ಧ 25 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 47.48ರ ಸರಾಸರಿಯಲ್ಲಿ 8 ಶತಕ ಸಿಡಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ಆಡಿದ 13 ಟೆಸ್ಟ್‌ ಪಂದ್ಯಗಳಲ್ಲಿ 54.08ರ ಸರಾಸರಿಯಲ್ಲಿ 1352 ರನ್‌ ಸಿಡಿಸಿದ್ದು, ಇದರಲ್ಲಿ 6 ಸಿಕ್ಸರ್‌ಗಳು ಸೇರಿವೆ.

ಹಲವು ದಾಖಲೆಯ ಒಡೆಯ

ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 2018-19ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್‌ ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಈ ಮೂಲಕ ಆಸೀಸ್‌ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾ ಖಂಡದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Virat Kohli Aims for a Comeback Against Australia After Recent Setback Against New Zealand

ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಈ ಸರಣಿಯ ವೇಳೆ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳುವುದು ಅನಿವಾರ್ಯವಾಗಿದೆ.

Story first published: Tuesday, November 5, 2024, 12:48 [IST]
Other articles published on Nov 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+