Virat Kohli: ಹಲವು ದಾಖಲೆಯ ನಿರ್ಮಾತನಿಗೆ ಇದೆ ಆ ಒಂದು ಕನಸು: ಚಾಂಪಿಯನ್ಸ್ ಟ್ರೋಫಿಯಲ್ಲಿ ಈಡೇರುವುದಾ ಆಸೆ?
ಬುಧವಾರದಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿಗಾಗಿ ಈಗಾಗಲೇ ಎಲ್ಲ ತಂಡಗಳು ಪಾಕ್‌ಗೆ ಪ್ರವಾಸ ಬೆಳೆಸಿವೆ. ಆದರೆ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಟೀಮ್ ಇಂಡಿಯಾ ಸಹ ಈ ಮೆಗಾ ಟೂರ್ನಿಗೆ ಈಗಾಗಲೇ ದುಬೈಗೆ ಪ್ರಯಾಣ ಬೆಳೆಸಿದೆ. ಟೀಮ್ ಇಂಡಿಯಾ ಮೂರನೇ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಾಣುತ್ತಿದೆ. ಈ ವೇಳೆ ಎಲ್ಲರ ಕಣ್ಣು ಭಾರತದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿದೆ.
ವಿಶ್ವದ ಸ್ಟಾರ್ ಬ್ಯಾಟರ್‌ಗಳಲ್ಲಿ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ, ಎಲ್ಲ ದಾಖಲೆಗಳಿಗೂ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಆದರೆ ಆ ಒಂದು ದಾಖಲೆಯನ್ನು ಮಾಡುವ ಕನಸು ನನಸಾಗಿಲ್ಲ. ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ವಿರಾಟ್, ಆ ಒಂದು ಕನಸು ಕಾಣುತ್ತಿದ್ದಾರೆ. ಇವರು ಈ ಟೂರ್ನಿಯಲ್ಲಿ ಈ ಒಂದು ಸಾಧನೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ಅವರ ಮೇಲೆ ಟೀಕೆಗಳು ಕೇಳಿ ಬಂದಿದ್ದವು. ಆದರೆ ವಿರಾಟ್ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದ್ದರು. ಹೀಗಾಗಿ ವಿರಾಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಬಲ್ಲರು ಎಂಬ ಭರವಸೆ ಮೂಡಿದೆ. ಇನ್ನು ವಿರಾಟ್ ಐಸಿಸಿ ದೊಡ್ಡ ಟೂರ್ನಿಗಳಲ್ಲಿ ಅಮೋಘ ಬ್ಯಾಟಿಂಗ್ ನಡೆಸುವ ಪ್ಲೇಯರ್.
ಕನಸಿನ ಬೆನ್ನೇರಿ
ಫೆಬ್ರವರಿ 20 ರಂದು ವಿರಾಟ್ ಅಂಗಳಕ್ಕೆ ಇಳಿಯುತ್ತಿದ್ದಂತೆ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಇವರು ನಾಲ್ಕು ಐಸಿಸಿ ಚಾಂಪಿಯನ್ ಶಿಪ್ ಟೂರ್ನಿಗಳನ್ನು ಆಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೊದಲು ವಿರಾಟ್ 13 ಪಂದ್ಯಗಳ 12 ಇನಿಂಗ್ಸ್‌ನಲ್ಲಿ 88.16ರ ಸರಾಸರಿಯಲ್ಲಿ 529 ರನ್ ಸಿಡಿಸಿದ್ದಾರೆ. ಈ ವೇಳೆ ಐದು ಅರ್ಧಶತಕಗಳು ಸೇರಿವೆ. ಆದರೆ ಇನ್ನು ಒಂದೇ ಒಂದು ಶತಕವನ್ನು ಅವರು ಈ ಟೂರ್ನಿಯಲ್ಲಿ ದಾಖಲಿಸಿಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಬಾರಿ ಶತಕ ಸಿಡಿಸಿ ತಮ್ಮ ಕನಸು ಸಾಕಾರ ಗೊಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇವರು ಟೀಮ್ ಇಂಡಿಯಾದ ಬ್ಯಾಟಿಂಗ್‌ಗೆ ಆಧಾರ. ಈಗಾಗಲೇ ಇವರು ಎಲ್ಲ ದಾಖಲೆಗಳನ್ನು ತಮ್ಮ ಹೆಸರಿಗೆ ನಮೂದಿಸಿಕೊಂಡಿರುವ ವಿರಾಟ್, ಇನ್ನೊಂದು ದಾಖಲೆಯ ಬೆನ್ನು ಹತ್ತಿದ್ದಾರೆ.
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಈಗಾಗಲೇ ದುಬೈಗೆ ಪ್ರಯಾಣ ಬೆಳೆಸಿದೆ. ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಫೆ.20 ರಂದು ಕಾದಾಟ ನಡೆಸಲಿದೆ. ಬಳಿಕ ಫೆ.23 ರಂದು ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ. ಮಾರ್ಚ್ 2 ರಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂಗಳ ಪ್ರವೇಶಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications