For Quick Alerts
ALLOW NOTIFICATIONS  
For Daily Alerts
 

Virat Kohli: ತಮಗೆ ಸಿಕ್ಕ ಎಲ್ಲಾ ಟ್ರೋಫಿಗಳನ್ನು ವಿಶೇಷ ವ್ಯಕ್ತಿಗೆ ಕೊಡುತ್ತಾರೆ ವಿರಾಟ್ ಕೊಹ್ಲಿ

ಕನ್ನಡಿಗರ ದತ್ತು ಪುತ್ರ ಅಂತಲೇ ಫೇಮಸ್ ಆಗಿರುವ ವಿರಾಟ್ ಕೊಹ್ಲಿ ಅವರು ಈಚೆಗೆ ಟ್ರೋಫಿ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಪರ - ವಿರೋಧ ಚರ್ಚೆಯೂ ನಡೆದಿದೆ. ವಿಶ್ವ ಕ್ರಿಕೆಟ್ ಅಂಗಳದಲ್ಲಿ ತನ್ನದೇ ದಾಖಲೆಗಳನ್ನು ಬರೆದಿರುವ, ಹಳೆಯ ದಾಖಲೆಗಳನ್ನು ಮುರಿದಿರುವ ಹಾಗೂ ಹೊಸ ದಾಖಲೆಗಳನ್ನು ಬರೆಯುತ್ತಿರುವ ಕಿಂಗ್ ವಿರಾಟ್ ಕೊಹ್ಲಿಗೆ ಈಗ ಟ್ರೋಫಿಗಳ / ಪ್ರಶಸ್ತಿಗಳ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ಕ್ರೀಡಾಂಗಳಗಳಲ್ಲಿ ಆವೇಶದಿಂದ ವರ್ತನೆ ಮಾಡಿರುವುದರ ಹೊರತಾಗಿ, ಕ್ರೀಡಾಭಿಮಾನ ಮೆರೆಯುವುದನ್ನು ಬಿಟ್ಟಿಲ್ಲ. ಶಿಸ್ತು, ನಿರಂತರ ಪರಿಶ್ರಮ ಹಾಗೂ ಕ್ರಿಕೆಟ್ ಮೇಲೆ ಅವರಿಗೆ ಇರುವ ಪ್ರೀತಿಯಿಂದ ವಿರಾಟ್ ಕೊಹ್ಲಿ ಅವರು ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಪಡೆದ ಟ್ರೋಫಿಗಳನ್ನು ವಿರಾಟ್ ಏನು ಮಾಡುತ್ತಾರೆ. ಇಲ್ಲಿಯ ವರೆಗಿನ ಟ್ರೋಫಿಗಳನ್ನು ಅವರು ಏನು ಮಾಡಿದ್ದಾರೆ ಎನ್ನುವ ಸ್ವಾರಸ್ಯಕರ ವಿಷಯವನ್ನು ವಿರಾಟ್ ಕೊಹ್ಲಿ ಅವರೇ ಹಂಚಿಕೊಂಡಿದ್ದಾರೆ.

Virat Kohli All his trophies go to one special person Kohli reveals the emotional reason

ಈಚೆಗೆ ತಮ್ಮ ಏಕದಿನ ವೃತ್ತಿಜೀವನದಲ್ಲಿ 45ನೇ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಟ್ರೋಫಿಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರವು ನೆಟ್ಟಿಗರ ಮನಸ್ಸು ಗೆದ್ದಿದೆ. ಸುಮಾರು 18 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಗೆದ್ದ ಪ್ರತಿಯೊಂದು ಪ್ರಶಸ್ತಿಯನ್ನು ಅವರ ತಾಯಿ ಜತನದಿಂದ ಕಾಪಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಹರಿಯಾಣದ ಗುರುಗ್ರಾಮ್‌ನಲ್ಲಿರುವ ಅವರ ತಾಯಿಯ ಮನೆಗೆ ಪ್ರತಿ ಟ್ರೋಫಿ ಹಾಗೂ ಪ್ರಶಸ್ತಿಗಳನ್ನು ನಾನು ಕಳುಹಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಪಂದ್ಯಶ್ರೇಷ್ಠ ಟ್ರೋಫಿಗಳ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿರುವ ವಿರಾಟ್ ಕೊಹ್ಲಿ ಅವರು, ಪ್ರಾಮಾಣಿಕವಾಗಿ ಹೇಳುತ್ತೇನೆ. ಈ ಟ್ರೋಫಿಗಳ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅದನ್ನು ಗುರುಗ್ರಾಮ್‌ನಲ್ಲಿರುವ ಅಮ್ಮನಿಗೆ ಕಳುಹಿಸುತ್ತೇನೆ. ಅವರಿಗೆ ನನ್ನ ಟ್ರೋಫಿಗಳು ಎಂದರೆ ತುಂಬಾ ಇಷ್ಟ. ಅದನ್ನು ಅವರು ತುಂಬಾ ಜೋಪಾನ ಮಾಡುತ್ತಾರೆ. ನನ್ನ ಇಡೀ ಕ್ರಿಕೆಟ್ ಪ್ರಯಾಣವನ್ನು ಹಿಂತಿರುಗಿ ನೋಡಿದರೆ ಅದು ನನಗೆ ಒಂದು ಕನಸು ನನಸಾದಂತೆ ಕಾಣುತ್ತದೆ. ನನಗೆ ಯಾವಾಗಲೂ ನನ್ನ ಸಾಮರ್ಥ್ಯಗಳು ತಿಳಿದಿದೆ. ನಾನು ಇಂದು ಇರುವ ಸ್ಥಿತಿಗೆ ನಾನು ಬಹಳಷ್ಟು ಶ್ರಮ ಹಾಕಿದ್ದೇನೆ. ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೇ ಈ ಕ್ರಿಕೆಟ್ ಪಯಣದ ಬಗ್ಗೆ ನನ್ನ ಹೃದಯದಲ್ಲಿ ಕೃತಜ್ಞತೆ ಇದೆ, ನನಗೆ ಈ ವಿಷಯಗಳು ಹೆಮ್ಮೆ ಅನಿಸುತ್ತದೆ ಎಂದಿದ್ದಾರೆ.

ಮಿಶ್ರ ಪ್ರತಿಕ್ರಿಯೆ

ವಿರಾಟ್ ಕೊಹ್ಲಿ ಅವರು ಟ್ರೋಫಿಗಳ ಬಗ್ಗೆ ಹೇಳಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೋಫಿಗಳನ್ನು ಇರಿಸಿಕೊಳ್ಳುವುದಕ್ಕೂ ಜಾಗವಿಲ್ಲದಷ್ಟು ಅಥವಾ ಕಾಳಜಿ ಮಾಡಲಾಗದಷ್ಟು ವಿರಾಟ್ ದೊಡ್ಡವಾದರೆ ಎಂದರೆ, ಇನ್ನೂ ಕೆಲವರು ತಾಯಿಗೆ ಇಷ್ಟವಾಗುವುದನ್ನು ಮಾಡುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ. ಬಹುತೇಕರು ವಿರಾಟ್‌ ಕೊಹ್ಲಿ ಅವರ ಈ ನಿರ್ಧಾರವನ್ನು ಮೆಚ್ಚಿಕೊಂಡು ಪೋಸ್ಟ್‌, ಕಾಮೆಂಟ್ ಮಾಡಿದ್ದಾರೆ.

Story first published: Tuesday, January 13, 2026, 13:05 [IST]
Other articles published on Jan 13, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+