ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣುಮಗು ಜನನ

ನವದೆಹಲಿ: ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿಗೆ ಹೆಣ್ಣು ಮಗು ಜನಿಸಿದೆ. ಸೋಮವಾರ (ಜನವರಿ 11) ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅನುಷ್ಕಾ ಆಸ್ಪತ್ರಗೆ ದಾಖಲಾಗಿದ್ದರು. ಸಂಜೆ 4ರ ವೇಳೆಗೆ ಅನುಷ್ಕಾಗೆ ಹೆರಿಗೆಯಾಗಿದೆ. ತಾನು ಹೆಣ್ಣು ಮಗುವಿಗೆ ಅಪ್ಪನಾಗುತ್ತಿರುವ ಖುಷಿಯನ್ನು ರನ್ ಮಷಿನ್ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸೋಲಿನಿಂದ ತಪ್ಪಿಸಿಕೊಂಡ ಖುಷಿಯ ಬೆನ್ನಲ್ಲೇ ಕೊಹ್ಲಿ ಮತ್ತೊಂದು ಖುಷಿಯ ಸಂಗತಿ ಹೇಳಿದ್ದಾರೆ. 2017ರ ಡಿಸೆಂಬರ್‌ನಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು.
ಗರ್ಭಿಣಿಯಾಗಿದ್ದ ಅನುಷ್ಕಾ ಶರ್ಮಾ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಲಿರುವುದಾಗಿ ಈ ಮೊದಲೇ ಅವರ ವೈದ್ಯರು ತಿಳಿಸಿದ್ದರು.
ಇಬ್ಬರೂ ರೋಮಾಂಚಿತರಾಗಿದ್ದೇವೆ
'ನಮಗೆ ಹೆಣ್ಣುಮಗುವಾಗಿದೆ ಎಂಬ ಸಂಗತಿ ತಿಳಿಸಲು ನಾವಿಬ್ಬರೂ ರೋಮಾಂಚಿತರಾಗಿದ್ದೇವೆ. ನಿಮ್ಮೆಲ್ಲಾ ಪ್ರೀತಿ, ಹಾರೈಕೆ, ಪ್ರಾರ್ಥನೆಗೆ ನಮ್ಮ ಧನ್ಯವಾದಗಳು. ಅನುಷ್ಕ ಶರ್ಮಾ ಮತ್ತು ಮಗು ಆರೋಗ್ಯವಾಗಿದ್ದಾರೆ. ದೇವರ ಆಶೀರ್ವಾದದೊಂದಿಗೆ ನಾವು ಬದುಕಿನ ಈ ಹೊಸ ಅಧ್ಯಾಯ ಆರಂಭಿಸಲು ಬಯಸಿದ್ದೇವೆ,' ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದಿಂದ ವಾಪಸ್ಸಾಗಿದ್ದ ಕೊಹ್ಲಿ
ಮೊದಲ ಮಗುವಿಗೆ ಅಪ್ಪನಾಗುವ ಖುಷಿಯಲ್ಲಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಆಸ್ಟ್ರೇಲಿಯಾ-ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾಗವಹಿಸಿದ ಬಳಿಕ ಕೊಹ್ಲಿ ಪಿತೃತ್ವ ರಜೆ ಪಡೆದುಕೊಂಡಿದ್ದರು.

ಭವಿಷ್ಯ ನುಡಿದಿದ್ದ ಗುರೂಜಿ
ವಿರಾಟ್ ಕೊಹ್ಲಿಗೆ ಹುಟ್ಟಲಿರುವ ಮಗು ಹೆಣ್ಣೋ-ಗಂಡೋ ಎಂಬುದನ್ನು ಬೆಂಗಳೂರಿನ ಜನಪ್ರಿಯ ಜ್ಯೋತಿಷಿ ಪಂಡಿತ್ ಜಗನ್ನಾಥ್ ಅವರು ಭವಿಷ್ಯ ನುಡಿದಿದ್ದರು. 'ವಿರಾಟ್ ಮತ್ತು ಅನುಷ್ಕಾರ ಮುಖ ಓದಿದರೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಹೆಚ್ಚಿದೆ,' ಎಂದು ಕಳೆದ ಸೆಪ್ಟೆಂಬರ್‌ನಲ್ಲೇ ಜಗನ್ನಾಥ್ ಹೇಳಿದ್ದರು. ಗುರೂಜಿ ಮಾತು ನಿಜವಾಗಿದೆ.

ವಿಲಿಯಮ್ಸ್‌ಗೂ ಹೆಣ್ಣು ಮಗು
ಕೊಹ್ಲಿ ಯುಗದವರೇ ಆದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ ಇತ್ತೀಚೆಗೆ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಅಂದ್ಹಾಗೆ, ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಅಜಿಂಕ್ಯ ರಹಾನೆ ನಾಯಕತ್ವದಡಿಯಲ್ಲಿ ಟೆಸ್ಟ್ ಸರಣಿಯನ್ನು 1-1ರಿಂದ ಸರಿದೂಗಿಸಿಕೊಂಡಿದೆ. 3ನೇ ಪಂದ್ಯ ಡ್ರಾ ಆಗಿದ್ದು, 4ನೇ ಪಂದ್ಯ ಜನವರಿ 15ರಿಂದ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications